ಸುಭಾಷ್ ಚಂದ್ರ ಬೋಸ್ ಅವರನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್ | ಸಾಕ್ಷಿ ಮಹಾರಾಜ್ ಹೇಳಿಕೆ - Mahanayaka

ಸುಭಾಷ್ ಚಂದ್ರ ಬೋಸ್ ಅವರನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್ | ಸಾಕ್ಷಿ ಮಹಾರಾಜ್ ಹೇಳಿಕೆ

24/01/2021

ಉನ್ನಾವೋ: ಭಾರತ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್ ಎಂದು ಬಿಜೆಪಿಯ ವಿವಾದಿತ ಸಂಸದ ಸಾಕ್ಷಿ ಮಹಾರಾಜ್ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆಯ ಮೂಲಕ ಸಾಕ್ಷಿ ಮಹಾರಾಜ್ ಅವರು ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.  ಉತ್ತರ ಪ್ರದೇಶದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರನ್ನು ಹತ್ಯೆ ಮಾಡಿರುವುದು ಕಾಂಗ್ರೆಸ್ ಎಂದು ಹೇಳಿಕೆ ನೀಡಿದ್ದಾರೆ.

ಸುಭಾಷ್ ಚಂದ್ರ ಬೋಸ್ ಅವರನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್, ಅವರ ಜನಪ್ರಿಯತೆ ಮುಂದೆ ಮಹಾತ್ಮಾ ಗಾಂಧಿಯವರಾಗಲಿ, ಪಂಡಿತ್ ಜವಹರಲಾಲ್ ನೆಹರೂರವರಾಗಲಿ ನಿಲ್ಲುವ ಧೈರ್ಯ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ ನ ಒಳ ಸಂಚಿನಿಂದಾಗಿಯೇ ಅವರು ಹತ್ಯೆಯಾದರು ಎಂದು ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಉನ್ನಾವೊದ ಔರಸ್ ನ ಉಟ್ರಾ ದಕೌಲಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಈ ವಿವಾದವನ್ನು ಸೃಷ್ಟಿಸಿದ್ದಾರೆ.

happy birthday

ಇತ್ತೀಚಿನ ಸುದ್ದಿ