ಅಪಾರ್ಟ್ ಮೆಂಟ್ ಬಳಿ ಚಿರತೆ ವಾಕಿಂಗ್ | ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆ
ಬೆಂಗಳೂರು: ನಗರದ ಅಪಾರ್ಟ್ ಮೆಂಟ್ ವೊಂದಕ್ಕೆ ಸುಮಾರು 15 ವರ್ಷದ ಚಿರತೆಯೊಂದು ನಿನ್ನೆ ಸಿಸಿ ಕ್ಯಾಮರಕ್ಕೆ ಪೋಸು ನೀಡಿ ಹೊರಟು ಹೋಗಿದ್ದು, ಇದರಿಂದಾಗಿ ಅಪಾರ್ಟ್ ಮೆಂಟ್ ನಿವಾಸಿಗಳು ಇದೀಗ ಆತಂಕಕ್ಕೀಡಾಗಿದ್ದಾರೆ.
ಬೇಗೂರಿನ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ಗೆ ಬಂದ ಚಿರತೆ ಅಪಾರ್ಟ್ ಮೆಂಟ್ ಒಳಗೆ ಬಂದು ಮತ್ತೆ ಬಂದ ದಾರಿಯಲ್ಲಿಯೇ ವಾಪಸ್ ಹೋಗಿದೆ. ಇದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಚಿರತೆ ಅಪಾರ್ಟ್ ಮೆಂಟ್ ಗೆ ಬಂದು ಹೋಗಿರುವ ವಿಚಾರ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟವಾಗಿದ್ದು, ಸಿಸಿ ಕ್ಯಾಮರ ದೃಶ್ಯಾವಳಿ ಆಧರಿಸಿ, ತೀವ್ರ ಹುಡುಕಾಟ ನಡೆಸಿದರೂ ಚಿರತೆ ಪತ್ತೆಯಾಗಿಲ್ಲ.
ಬನ್ನೇರುಘಟ್ಟ ಅಭಯಾರಣ್ಯದಿಂದ ಈ ಚಿರತೆ ಬಂದಿದೆ ಎಂದು ಹೇಳಲಾಗಿದೆ. ಅಪಾರ್ಟ್ ಮೆಂಟ್ ನ ಗಾರ್ಡನ್ ಬಳಿಯಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಸಾವಿರಾರು ಜನರು ವಾಸಿಸುತ್ತಿದ್ದಾರೆ. ಸಾಮಾನ್ಯವಾಗಿ ಜನರು ಈ ಪ್ರದೇಶದಲ್ಲಿ ಬೆಳಗ್ಗಿನ ಜಾವ ವಾಕಿಂಗ್ ಮಾಡುತ್ತಿದ್ದಾರೆ. ಆದರೆ, ಇದೀಗ ಇದೇ ಪ್ರದೇಶದಲ್ಲಿ ಚಿರತೆ ವಾಕಿಂಗ್ ಆರಂಭಿಸಿದ್ದು, ಹೀಗಾಗಿ ವಾಕಿಂಗ್ ಮಾಡುವವರು ಕೆಲ ದಿನಗಳ ಕಾಲ ವಾಕ್ ಮಾಡಬೇಡಿ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.