ತಂತಿ ಬೇಲಿಯಲ್ಲಿ ಸಿಲುಕಿಕೊಂಡು ನರಳಾಡುತ್ತಿರುವ ಚಿರತೆ!

14/07/2023
ಚಿಕ್ಕಮಗಳೂರು: ತಂತಿ ಬೇಲಿಗೆ ಸುತ್ತಿಕೊಂಡು ಚಿರತೆಯೊಂದು ನರಳಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆಯಲ್ಲಿ ನಡೆದಿದೆ.
ಬೇಲಿ ದಾಟುವಾಗ ತಂತಿಯಲ್ಲಿ ಚಿರತೆ ಸಿಕ್ಕಿಹಾಕಿಕೊಂಡಿದೆ. ಪರಿಣಾಮವಾಗಿ ಚಿರತೆಯ ಹೊಟ್ಟೆಯನ್ನು ತಂತಿ ಬೇಲಿ ಸೀಳಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿದ್ದಾರೆ. ಅಧಿಕಾರಿಗಳು ಹಾಗೂ ಜನರನ್ನು ಕಂಡ ಚಿರತೆ ಆಕ್ರೋಶಗೊಂಡಿದೆ.
ಶಿವಮೊಗ್ಗದ ಅರವಳಿಕೆ ತಜ್ಞರ ತಂಡ ಆಗಮಿಸುತ್ತಿದ್ದು, ಅವರು ಆಗಮಿಸಿದ ಬಳಿಕ ಅಧಿಕಾರಿಗಳು ಮುಂದಿನ ಕ್ರಮವಹಿಸಲಿದ್ದಾರೆ. ಚಿರತೆ ಸಿಲುಕಿಕೊಂಡಿರುವ ಸ್ಥಳಕ್ಕೆ ಹೋಗಲು ಅರಣ್ಯಾಧಿಕಾರಿಗಳು ಹಿಂದೇಟು ಹಾಕಿದ್ದಾರೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw