ಚಂದ್ರಯಾನದ ಯಶಸ್ವಿಗೆ ಚಾಮರಾಜನಗರದಲ್ಲಿ ವಿಶೇಷ ಪೂಜೆ, ಶಾಲೆಗಳಲ್ಲಿ ಶುಭ ಹಾರೈಕೆ

ಚಾಮರಾಜನಗರ: ಬಾಹ್ಯಾಕಾಶದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯಾಗಲು ಇಡೀ ದೇಶವೇ ಎದುರು ನೋಡುತ್ತಿರುವ ಇಸ್ರೋದ ಚಂದ್ರಯಾನ-3 ಯಶಸ್ಸು ಸಾಧಿಸಲೆಂದು ಚಾಮರಾಜನಗರದಲ್ಲಿ ನಾಗರಿಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಚಂದ್ರಯಾನ 3 ಉಡಾವಣೆ ಯಶಸ್ವಿಗೆ ಚಾಮರಾಜೇಶ್ವರ ದೇವಸ್ಥಾನದಲ್ಲಿ ಓಂ ಶಾಂತಿ ಸಂಘಟನೆ, ಜೈಹಿಂದ್ ಪ್ರತಿಷ್ಟಾನದ ವತಿಯಿಂದ ಭಾರತದ ಧ್ವಜ ಹಿಡಿದು ಪೂಜೆ ಸಲ್ಲಿಸಿದ್ದಾರೆ.
ಭಾರತ ಮಾತೆ ಹೆಸರಲ್ಲಿ ಅರ್ಚನೆ ದೇಶಾಭಿಮಾನಿಗಳು ಅರ್ಚನೆ ಸಲ್ಲಿಸಿದ್ದಾರೆ. ಇನ್ನು, ವೆಂಕಟಯ್ಯನಛತ್ರ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಚಂದ್ರಯಾನಕ್ಕೆ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw