ಅಮರನಾಥ ವೇಳೆ ನಡೆಯಿತು ಅವಘಡ: 36 ಗಂಟೆಯಲ್ಲಿ ಐವರು ಯಾತ್ರಾರ್ಥಿಗಳು ಸಾವು

ಅಮರನಾಥ ಯಾತ್ರೆ ವೇಳೆ ಕಳೆದ 36 ಗಂಟೆಯಲ್ಲಿ ಐವರು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಇದೀಗ ಸಿಕ್ಕಿದ ಮಾಹಿತಿಯಂತೆ ಮೃತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ಗುರುವಾರ ಬೆಳಿಗ್ಗೆಯಿಂದ ಐವರು ಮೃತಪಟ್ಟಿದ್ದು, ಈ ಪೈಕಿ ಒಬ್ಬ ಸಾಧು ಮೃತಪಟ್ಟಿದ್ದಾರೆ. ಹೆಚ್ಚಿನ ಯಾತ್ರಿಕರು ಹೃದಯ ಸ್ತಂಭನದಿಂದ ಅಸುನೀಗಿದ್ದಾರೆ. ಯಾತ್ರೆಯ ಪಹಲ್ಗಾಮ್ ಅಕ್ಷದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದರೆ, ಬಾಲ್ಟಾಲ್ ಮಾರ್ಗದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಮತ್ತು ಗುಜರಾತ್‌ಗೆ ಸೇರಿದವರಾಗಿದ್ದಾರೆ.
ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕ ಪ್ರಮಾಣ ಕಡಿಮೆ ಇದ್ದು, ಇದರಿಂದಾಗಿ ಹೃದಯ ಸ್ತಂಭನ ಉಂಟಾಗುತ್ತಿದೆ. ಅಮರನಾಥ ಯಾತ್ರಿಕರು ಮತ್ತು ಅಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳ ಸಾವಿಗೆ ಇದೊಂದು ಸಾಮಾನ್ಯ ಕಾರಣವಾಗಿದೆ. ಕಳೆದ ಆಮ್ಲಜನಕ ಕಡಿಮೆ ಇರುವ ಕಾರಣ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೇ ಆರಂಭವಾಗಿದ್ದು, ಸಾವುಗಳು ಹೆಚ್ಚಾಗುತ್ತಿದೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw