ಅತೀತನ ಅಂತರಂಗ: ಬಡವರ ಬಿನ್ನಪವ ಕೇಳುವರಾರು: ಪುಸ್ತಕ ವಿಮರ್ಶೆ
ವಿಮರ್ಶೆ: ಡಾ.ಎಂ.ರಾಮಕೃಷ್ಣಯ್ಯ
ಪ್ರಾಧ್ಯಾಪಕರು ಎಂಇಎಸ್. ಮಲ್ಲೇಶ್ವರಂ ಬೆಂಗಳೂರು 03.
ದಮ್ಮಪ್ರಿಯ ಅವರು ಸಾಮಾಜಿಕ ಬದುಕಿನ ತಲ್ಲಣಗಳನ್ನು ಕುರಿತು ರಚಿಸಿರುವ “ಬಡವರ ಬಿನ್ನಪವ ಕೇಳುವರಾರು” ಎಂಬ ವೈಚಾರಿಕ ಕೃತಿಯು ಸಮಾಜದ ಹಲವು ಮಜಲುಗಳನ್ನು ಅನಾವರಣಗೊಳಿಸಿದೆ. ಕೆಲ ಲೇಖನಗಳು ವ್ಯಕ್ತಿಯನ್ನು ಕುರಿತು ಚರ್ಚಿಸಿದ್ದರೆ ಮತ್ತೆ ಕೆಲವು ಸಮಾಜದಲ್ಲಾಗುವ ಪಲ್ಲಟಗಳನ್ನು ಅದರ ಹಿಂದಿರುವ ರಾಜಕೀಯ ಹುನ್ನಾರಗಳನ್ನು ಅನಾವರಣಗೊಳಿಸಿವೆ. ಬಹುತೇಕ ಲೇಖನಗಳು ಬಹುಜನರ ಅಶೋತ್ತರಗಳನ್ನು , ನಿರಾಶ ಭಾವಗಳನ್ನು ಅಭಿವ್ಯಕ್ತಗೊಳಿಸಿವೆ. ಸಮುದಾಯದ ಏಳಿಗೆಯ ಉದ್ದೇಶವನ್ನು ಇರಿಸಿಕೊಂಡು ಧಮನಿತರಿಗೆ ಕೈಲಾದ ಮಟ್ಟಿಗೆ ಸಹಾಯ ನೀಡುವ ಭರವಸೆಗಳನ್ನ ನೀಡುತ್ತಾ ಅವುಗಳನ್ನ ಈಡೇರಿಸದೆ ಕೇವಲ ನಾಟಕೀಯ ಶೈಲಿಯಲ್ಲಿ ಮಾತನಾಡಿ ವಂಚಿಸಿದ ನಾಯಕರನ್ನು ಪ್ರಶ್ನಿಸುವ ಲೇಖನದ ಮೂಲಕ ಕೃತಿ ಆರಂಭಗೊಳ್ಳುತ್ತದೆ.
ತದನಂತರ ಕುವೆಂಪುರವರು ಇಂದಿನ ಕಾಲಘಟ್ಟಕ್ಕೆ ಎಷ್ಟರಮಟ್ಟಿಗೆ ಅನಿವಾರ್ಯ ಎಂಬುದನ್ನ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಸ್ಯಹಾರಿಗಳು ಮಾಂಸಾಹಾರಿಗಳನ್ನ ಅತ್ಯಂತ ಅಸಹ್ಯದ ಕಂಗಳಿಂದ ನೋಡುವ ಪರಿಯನ್ನ ಅತ್ಯಂತ ಸೂಕ್ಷ್ಮ ಉದಾಹರಣೆಗಳ ಮೂಲಕ ತೆರೆದಿಟ್ಟಿದ್ದಾರೆ. ಬಾಬಾ ಸಾಹೇಬರ ಕನಸಿನ ಭಾರತದಲ್ಲಿ ಮೀಸಲಿನ ಮಹತ್ವ ಎಷ್ಟು ಅವಶ್ಯ ಎಂಬುದನ್ನು ಸಂವಿಧಾನದ ಮೂಲಕ ನಿರೂಪಿಸಿದ್ದಾರೆ. ಈ ಕ್ಷೇತ್ರದಲ್ಲಿ ಪ್ರತಿನಿಧಿಸಿದ ನಾಯಕರುಗಳು ತಮ್ಮದೇ ಹಕ್ಕನ್ನ ಚಲಾಯಿಸದೆ ಮೂಕ ಪ್ರೇಕ್ಷಕರಂತೆ ವರ್ತಿಸಿದರೆ ಇದನ್ನೇ ನಂಬಿ ಕುಳಿತ ದಮನಿತರ ಸ್ಥಿತಿ ಏನಾಗಬಹುದು ಎಂದೂ ಇಂಥವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಕರುನಾಡಲ್ಲಿ ಇತ್ತೀಚಿಗೆ ಚಾಲ್ತಿಯಲ್ಲಿರುವ ದಲಿತ ಮುಖ್ಯಮಂತ್ರಿಯ ಕೂಗು ನಿಜವಾಗುವುದೇ ಎಂಬ ತಾರ್ಕಿಕ ಸಂಗತಿಯನ್ನು ಅನಾವರಣಗೊಳಿಸಿದ್ದಾರೆ.
ಈ ನಾಡಿನ ಮತ್ತೊಬ್ಬ ಸಮಾಜ ಚಿಂತಕರಾದ ಡಾಕ್ಟರ್ ಡಾಮಿನಿಕ್ ಇವರ ಕುರಿತಾದ ಲೇಖನ ತುಂಬಾ ಚಿಂತನೆಗೆ ಒಳಪಡಿಸುತ್ತದೆ. ನಮ್ಮ ಸುತ್ತಣದ ಸಮಾಜವನ್ನು ನಾವು ನೋಡುವ ಪರಿಗೂ ಚಿಂತಕರ ಆಲೋಚನೆ ಕ್ರಮಗಳಿಗೂ ತಾಳೆ ಹಾಕುವ ಸೂಕ್ಷ್ಮ ಸಂಗತಿಗಳನ್ನು ನಿರೂಪಿಸಿದ್ದಾರೆ. ಲೇಖಕರು ಹಲವು ವಿಚಾರಗಳನ್ನು ಕುರಿತು ಬೆಳಕು ಚೆಲ್ಲಿದ್ದಾರೆ. ಸ್ನೇಹಕ್ಕೆ ಹೆಸರು ತುಕಾರಾಂ. ಜನಪರ ಚಿಂತಕರು ಸಮಾಜದ ಬದಲಾವಣೆ ಬಯಸುವ ಮತ್ತು ತಮ್ಮನ್ನು ತೊಡಗಿಸಿಕೊಂಡ, ಹಲವು ಸವಾಲುಗಳಿಗೆ ಎದುರಾಗಿ ನಿಂತು ಭೇದಿಸಿದ ಬೆಂಗಳೂರು ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾದ ಡಾಕ್ಟರ್ ಸಿ. ಶಿವರಾಜು ರವರ ಕುರಿತಾದ ಲೇಖನ ಹಲವು ಯುವ ಚಳುವಳಿದಾರರಿಗೆ ಮಾರ್ಗದರ್ಶಿ ಸಂಗತಿಗಳನ್ನ ನೀಡಬಲ್ಲದು.
ನಮ್ಮ ಸಮುದಾಯಕ್ಕೆ ನಾವೇನಾದರೂ ನೀಡುವುದಾದರೆ ಅದು ಹೇಗಿರಬೇಕು ಎಂಬುದರ ಕಡೆಗೆ ಬೆಳಕು ಚೆಲ್ಲುತ್ತದೆ. ಕೆಲ ದಿನಗಳ ಹಿಂದೆ ಜೈನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಬಾಬಾ ಸಾಹೇಬರನ್ನ ಕುರಿತ ಕಿರು ನಾಟಕ ಪ್ರದರ್ಶನ ವಿವಾದಾತ್ಮಕ ಘಟನೆಯಾಗಿ ಕರ್ನಾಟಕದಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿ ಕ್ಷಮೆಯಾಚಿಸಬೇಕಾಗಿ ಬಂತು ಇಂಥ ಘೋರ ಅಪರಾಧಗಳನ್ನ ಕುರಿತಾದ ಲೇಖನಗಳನ್ನು ಲೇಖಕರು ಸೂಕ್ಷ್ಮ ಕಂಗಳಿಂದ ದೃಷ್ಟಿ ಹಾಯಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಶೋಷಿತರು ಬದಲಾಗುತ್ತಿರುವ ಸಮಾಜದ ಮಧ್ಯೆ ತಮ್ಮ ಅಸ್ತಿತ್ವಕ್ಕಾಗಿ ಮತ್ತೊಮ್ಮೆ ಸಮಾನತೆಯ ಸ್ವಾತಂತ್ರ್ಯ ಪಡೆಯುವಲ್ಲಿ ಹೇಗೆ ಸಜ್ಜುಗೊಳ್ಳಬೇಕಿದೆ ಎಂಬ ಸೂಕ್ಷ್ಮ ಎಚ್ಚರವನ್ನು ನೀಡಿ ಸಮಾಜಮುಖಿಯ ಹಲವು ಚಿಂತನೆಗಳಿಗೆ ಓದುಗರನ್ನು ಸಜ್ಜುಗೊಳಿಸಿದ್ದಾರೆ. ಲೇಖಕರು ಇಂಥ ಆಲೋಚನ ಪರವಾದ ಕೃತಿಗಳನ್ನ ಮತ್ತಷ್ಟು ಹೊರತರಲಿ ಎಂದು ಆಶಿಸುತ್ತೇನೆ.
ಪುಸ್ತಕ : ಬಡವರ ಬಿನ್ನಪವ ಕೇಳುವರಾರು ?
ಲೇಖಕರು : ದಮ್ಮಪ್ರಿಯ
ಪ್ರಕಾಶಕರು : ಕೌದಿ ಪ್ರಕಾಶನ
ಮುಖಬೆಲೆ : 210/-
ಮೊಬೈಲ್ ಸಂಖ್ಯೆ : 9972089471
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw