ಅಮೆರಿಕಾದಿಂದ ದೇಶಕ್ಕೆ ಮರಳಿ ಸಿಕ್ತು 105 ಪುರಾತನ ವಸ್ತುಗಳು: ಪ್ರಾಚೀನ ವಸ್ತುಗಳು ಯಾವ ಶತಮಾನದ್ದು ಗೊತ್ತೇ..? - Mahanayaka
11:24 PM Friday 20 - September 2024

ಅಮೆರಿಕಾದಿಂದ ದೇಶಕ್ಕೆ ಮರಳಿ ಸಿಕ್ತು 105 ಪುರಾತನ ವಸ್ತುಗಳು: ಪ್ರಾಚೀನ ವಸ್ತುಗಳು ಯಾವ ಶತಮಾನದ್ದು ಗೊತ್ತೇ..?

18/07/2023

ಭಾರತಕ್ಕೆ ಸಂಬಂಧಿಸಿದ 105 ಪುರಾತನ ವಸ್ತುಗಳನ್ನು ಅಮೆರಿಕಾ ಅಧಿಕಾರಿಗಳು ಭಾರತಕ್ಕೆ ಹಸ್ತಾಂತರಿಸಿದ್ದಾರೆ. ಹೌದು. ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ ನಡೆದ ವಿಶೇಷ ವಾಪಸಾತಿ ಸಮಾರಂಭದಲ್ಲಿ, ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು, ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ ಮತ್ತು ಮ್ಯಾನ್‌ಹ್ಯಾಟನ್ ಜಿಲ್ಲೆಯ ಅಧಿಕಾರಿಗಳ ಸಮ್ಮುಖದಲ್ಲಿ ಕೆಲವು ಅಮೂಲ್ಯವಾದ ಭಾರತೀಯ ಪ್ರಾಚೀನ ವಸ್ತುಗಳನ್ನು ಅಮೆರಿಕ ಹಸ್ತಾಂತರಿಸಿತು.
ಈ ಸಂದರ್ಭ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ತರಂಜಿತ್ ಸಿಂಗ್ ಸಂಧು, ಭಾರತಕ್ಕೆ ಹಿಂದಿರುಗಿಸಿದ 100ಕ್ಕೂ ಹೆಚ್ಚು ಪುರಾತನ ವಸ್ತುಗಳು ಕೇವಲ ಕಲೆ ಮಾತ್ರವಲ್ಲದೇ ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಧರ್ಮದ ಭಾಗವಾಗಿದೆ. ಕಳೆದು ಹೋದ ಪರಂಪರೆಯನ್ನು ಮತ್ತೆ ಭಾರತಕ್ಕೆ ಹಿಂದಿರುಗಿಸಿದಾಗ, ಅದನ್ನು ಅತ್ಯಂತ ಭಾವನಾತ್ಮಕವಾಗಿ ಸ್ವೀಕರಿಸಲಾಗುತ್ತದೆ. ಅಲ್ಲದೇ ಭಾರತಕ್ಕೆ ಸೇರಿದ ಈ ಪ್ರಾಚೀನ ವಸ್ತುಗಳನ್ನು ಅತೀ ಶೀಘ್ರದಲ್ಲಿ ಭಾರತಕ್ಕೆ ಸಾಗಿಸಲಾಗುವುದು ಎಂದರು.
ಒಟ್ಟು 105 ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ್ದು, ಅದರಲ್ಲಿ 47 ಕಲಾಕೃತಿಗಳು ಪೂರ್ವ ಭಾರತದಿಂದ, 27 ದಕ್ಷಿಣ ಭಾರತದಿಂದ, 22 ವಸ್ತುಗಳು ಮಧ್ಯ ಭಾರತದಿಂದ, ಉತ್ತರ ಭಾರತದಿಂದ 6 ಮತ್ತು ಪಶ್ಚಿಮ ಭಾರತದಿಂದ 3 ಪುರಾತನ ವಸ್ತುಗಳಿವೆ ಎಂದು ವರದಿಗಳು ತಿಳಿಸಿವೆ.
ಈ ಎಲ್ಲಾ ಪ್ರಾಚೀನ ವಸ್ತುಗಳು 2-3ನೇ ಶತಮಾನದಿಂದ 18-19ನೇ ಶತಮಾನದವುಗಳಾಗಿದ್ದು, ಇದನ್ನು ಟೆರಾಕೋಟಾ, ಕಲ್ಲು, ಲೋಹ ಮತ್ತು ಮರದಿಂದ ಮಾಡಲಾಗಿದೆ. ಇದರಲ್ಲಿ ಸುಮಾರು 50 ಕಲಾಕೃತಿಗಳು ಧಾರ್ಮಿಕ (ಹಿಂದೂ ಧರ್ಮ, ಜೈನ ಮತ್ತು ಇಸ್ಲಾಂ) ವಿಷಯಕ್ಕೆ ಸಂಬಂಧಿಸಿದ್ದು, ಉಳಿದವುಗಳು ಸಾಂಸ್ಕೃತಿಕ ಕಲಾಕೃತಿಗಳಾಗಿವೆ.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw


Provided by

ಇತ್ತೀಚಿನ ಸುದ್ದಿ