ಪೊಲೀಸರನ್ನು ದಿಕ್ಕಾಪಾಲು ಮಾಡಿದ ರೈತರು | ದೆಹಲಿ ಅಸ್ತವ್ಯಸ್ತ | ಪ್ರಜ್ಞಾ ಹೀನ ಸ್ಥಿತಿಯಲ್ಲಿ ಪತ್ತೆಯಾದ ಪೊಲೀಸ್ - Mahanayaka
7:15 AM Thursday 19 - September 2024

ಪೊಲೀಸರನ್ನು ದಿಕ್ಕಾಪಾಲು ಮಾಡಿದ ರೈತರು | ದೆಹಲಿ ಅಸ್ತವ್ಯಸ್ತ | ಪ್ರಜ್ಞಾ ಹೀನ ಸ್ಥಿತಿಯಲ್ಲಿ ಪತ್ತೆಯಾದ ಪೊಲೀಸ್

26/01/2021

ದೆಹಲಿ: ದೆಹಲಿಯಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದ್ದು, ಪೊಲೀಸರು ರೈತರನ್ನು ರಸ್ತೆ ಮಧ್ಯೆ ತಡೆಯಲು ಮುಂದಾಗಿದ್ದರೆ, ರೈತರು ಪೊಲೀಸರನ್ನು ಟ್ರ್ಯಾಕ್ಟರ್ ಮೂಲಕ ಅಟ್ಟಾಡಿಸಿ, ಮುಂದೆ ನುಗ್ಗಿದ್ದಾರೆ.

ತಡೆಯಲು ಬಂದ ಪೊಲೀಸರನ್ನು ರೈತರು ಅಟ್ಟಾಡಿಸಿ ದಿಕ್ಕಾಪಾಲಾಗಿಸಿದ್ದಾರೆ. ಇನ್ನೂ ವಿವಿಧ ಪ್ರದೇಶಗಳಿಂದ ದೆಹಲಿಗೆ ಬರುತ್ತಿರುವ ರೈತರನ್ನು ಪೊಲೀಸರು ನಡು ರಸ್ತೆಗಳಲ್ಲಿಯೇ ತಡೆಯಲು ಮುಂದಾಗುತ್ತಿದ್ದಾರೆ. ರೈತರ ಮೇಲೆ ಲಾಠಿ ಪ್ರಹಾರ ನಡೆಸಿ ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ.

ಈ ನಡುವೆ ವಿವಿಧ ಪ್ರದೇಶಗಳಲ್ಲಿ ರೈತರ ಆಕ್ರೋಶ ಕಟ್ಟೆ ಹೊಡೆದಿದೆ. ರೈತರನ್ನು ನಿಯಂತ್ರಿಸಲು ಸಾಧ್ಯವಾಗದೇ ದೆಹಲಿ ಪೊಲೀಸರು ಕಂಗಾಲಾಗಿದ್ದು, ಘಟನಾ ಸ್ಥಳಕ್ಕೆ ಕೇಂದ್ರ ಪೊಲೀಸರು ಆಗಮಿಸುವ ಸಾಧ್ಯತೆಗಳು ಕಂಡು ಬಂದಿದೆ.


Provided by

ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹೆಚ್ಚುವರಿ ಭದ್ರತೆಯನ್ನು ಒದಗಿಸಲು ಸರ್ಕಾರ ಮುಂದಾಗುತ್ತಿದೆ. ರೈತರು ತಾವು ಕೂಡ ಲಾಠಿ ಹಿಡಿದುಕೊಂಡಿದ್ದು, ಇದರಿಂದಾಗಿ ಪೊಲೀಸರಿಗೆ ಲಾಠಿ ಪ್ರಹಾರ ನಡೆಸಿ ರೈತರನ್ನು ಹಿಮ್ಮೆಟ್ಟಿಸಲು ಅಸಾಧ್ಯವಾಗಿದೆ. ತಮ್ಮ ಮೇಲೆ ಲಾಠಿ ಪ್ರಹಾರ ನಡೆಸಿದರೆ, ರೈತರು ಪ್ರತಿಯಾಗಿ ಪೊಲೀಸರ ಮೇಲೂ ಲಾಠಿ ಪ್ರಹಾರ ನಡೆಸುತ್ತಿದ್ದಾರೆ.

ಈ ನಡುವೆ ಪೊಲೀಸ್ ಸಿಬ್ಬಂದಿಯೊಬ್ಬರು ರೈತರ ನಡುವೆ ಸಿಕ್ಕಿಹಾಕಿಕೊಂಡಿದ್ದು, ಈ ವೇಳೆ ಆಕ್ರೋಶಿತ ರೈತರ ಗುಂಪು ಅವರ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಈ ವೇಳೆ ಜೊತೆಗಿದ್ದ, ಕೆಲವು ರೈತರು, ತಮ್ಮವರನ್ನು ಸಮಾಧಾನ ಪಡಿಸಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.

 

ಪ್ರಜ್ಞಾ ಹೀನ ಸ್ಥಿತಿಯಲ್ಲಿ ಪತ್ತೆಯಾದ ಪೊಲೀಸ್

ಪೊಲೀಸರ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿಯೊಬ್ಬರು ಇಲ್ಲಿನ ದಿಲ್ಷಾದ್ ಗಾರ್ಡನ್‌ ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ತಕ್ಷಣವೇ ಸಿಬ್ಬಂದಿಯನ್ನು ಪೊಲೀಸರು ಆರೈಕೆ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ಚೇತರಿಸಿಕೊಂಡಿದ್ದಾರೆ.

ಸದ್ಯ ರೈತರ ಟ್ರ್ಯಾಕ್ಟರ್ ರ್ಯಾಲಿ ಕೆಂಪು ಕೋಟೆಗೆ ತಲುಪಿದೆ. ರೈತರು ಹಾಗೂ ಪೊಲೀಸರ ನಡುವಿನ ಸಂಗ್ರಾಮ ಇನ್ನಷ್ಟು ತೀವ್ರ ಸ್ವರೂಪವನ್ನು ಪಡೆದುಕೊಳ್ಳುವ ಲಕ್ಷಣಗಳು ಕಂಡು ಬಂದಿದೆ.

 

 

 

 

ಇತ್ತೀಚಿನ ಸುದ್ದಿ