ಬಿಜೆಪಿ ಮಹಿಳೆಯರ ವಿರೋಧಿ ಹಾಗೂ ಅತ್ಯಾಚಾರಿಗಳ ಪರ!: ಮಣಿಪುರ ಘಟನೆ ಖಂಡಿಸಿ ಎಎಪಿ ವಾಗ್ದಾಳಿ

ಬೆಂಗಳೂರು: ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ವರ್ಗ ಸಂಘರ್ಷ, ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಯುವತಿಯರ ಬೆತ್ತಲೆ ಪೆರೇಡ್ ನಡೆಸಿ ಅತ್ಯಾಚಾರ ಎಸಗಿದ ಅಮಾನವೀಯ ದೌರ್ಜನ್ಯದ ಪ್ರಕರಣವನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆಯ ಬಳಿ ಮೊಂಬತ್ತಿ ಹಚ್ಚುವ ಮೂಲಕ ಪ್ರತಿಭಟನೆ ಹಾಗೂ ತೀವ್ರ ಕಂಡನೆಯನ್ನು ವ್ಯಕ್ತಪಡಿಸಿದರು .
ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ” ಇತ್ತೀಚಿನ ಕೆಲವು ತಿಂಗಳುಗಳಿಂದ ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸೆ, ದೌರ್ಜನ್ಯ ಹಾಗೂ ಭದ್ರತಾ ಪಡೆವರಿಂದಲೇ ನಡೆಯುತ್ತಿರುವ ದಬ್ಬಾಳಿಕೆಯನ್ನು ಪೂರ್ವ ಯೋಚಿತವಾಗಿಯೇ ಬಿಜೆಪಿಯ ನೇತೃತ್ವದ ಕೇಂದ್ರ ಸರ್ಕಾರ ನಡೆಸುತ್ತಿರುವುದು ತೀರ ಖಂಡನೀಯ. ಕಳೆದ ತಿಂಗಳು ಯುವತಿಯರ ಬೆತ್ತಲೆ ಪೆರೇಡ್ ನಡೆಸಿ ಅತ್ಯಾಚಾರ ಎಸಗಿದ ಪ್ರಕರಣವು ತಡವಾಗಿ ಬೆಳಕಿಗೆ ಬಂದಿರುವುದು ದುರಂತ. ನಾಗರಿಕ ಸಮಾಜವೇ ಬೀಳಿಸುವಂತಹ ಇಂತಹ ಆರೋಪಿಗಳನ್ನು ಬಂಧಿಸಿ ಶೀಘ್ರ ಕಠಿಣ ಶಿಕ್ಷೆಗೆ ಒಳಪಡಿಸದಿರುವುದು ಈ ದೇಶದ ದುರಂತ ” ಎಂದು ತಿಳಿಸಿದರು.
” ಪ್ರಕರಣ ನಡೆದು ಎರಡು ತಿಂಗಳಾಗಿದ್ದರೂ ಯಾವುದೇ ಆರೋಪಿಗಳನ್ನು ಇದುವರೆಗೂ ಬಂಧಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ವರದಿಯಾದ ನಂತರವೂ ಆರೋಪಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳದೆ ಇರುವುದನ್ನು ನೋಡಿದರೆ ಬಿಜೆಪಿ ಮಹಿಳೆಯರ ವಿರೋಧಿ ಹಾಗೂ ಅತ್ಯಾಚಾರಿಗಳ ಪರ ಇರುವುದು ಸಾಬೀತಾಗುತ್ತದೆ. ಮಣಿಪುರದ ಮುಖ್ಯಮಂತ್ರಿಗಳ ನೇರ ಪಾತ್ರವಿರುವುದು ಸಹ ಈ ಪ್ರಕರಣದಿಂದ ಸಾಬೀತಾಗುತ್ತದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೇಶದ ಜನ ತಕ್ಕ ಪಾಠವನ್ನು ಕಲಿಸಿಕೊಡುತ್ತಾರೆ ” ಎಂದು ಮೋಹನ್ ದಾಸರಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ , ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ದರ್ಶನ್ ಜೈನ್, ಉಷಾ ಮೋಹನ್, ನಂಜಪ್ಪ ಕಾಳೇಗೌಡ, ಸುಷ್ಮಾ ವೀರ್, ವಿಶ್ವನಾಥ್, ರವಿಕುಮಾರ್, ಪ್ರಕಾಶ್ ನೆಡುಗಡಿ , ಜಗದೀಶ್ ಬಾಬು, ಅಕ್ರಮ್ ಇನ್ನಿತರ ನಾಯಕರುಗಳು ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw