ರೈತರು ಅಶಾಂತಿ ಸೃಷ್ಟಿಸಿಲ್ಲ ಎಂದ ರೈತ ಮುಖಂಡರು | ಶಾಂತಿ ಕಾಪಾಡಲು ಪೊಲೀಸರಿಂದ ಮನವಿ
ದೆಹಲಿ: ರೈತರ ಆಂದೋಲವನ್ನು ಕೆಡಿಸಲು ಕೆಲವ ರಾಜಕೀಯ ಪಕ್ಷಗಳ ಜನರು ಯತ್ನಿಸಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಇದೆ ಎಂದು ರೈತ ಮುಖಂಡ ರಾಕೇಶ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ರೈತರು ಯಾವುದೇ ಅಶಾಂತಿ ಸೃಷ್ಟಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಇದೇ ಸಂದರ್ಭದಲ್ಲಿ ದೆಹಲಿಯ ನಂಗ್ಲೋಯ್ ಪೊಲೀಸ್ ಅಧಿಕಾರಿ ಶಾಲಿನಿ ಸಿಂಗ್ ಪ್ರತಿಕ್ರಿಯಿಸಿ, ನಾವು ಬೆಳಗ್ಗಿನಿಂದಲೂ ರೈತರಿಗೆ ಪೂರ್ವ ಅನುಮೋದಿತ ಮಾರ್ಗದಲ್ಲಿಯೇ ಹೋಗುವಂತೆ ಮನವಿ ಮಾಡಿದ್ದೇವೆ. ಆದರೆ, ಕೆಲವರು ಪೊಲೀಸ್ ಬ್ಯಾರಿಕೇಡ್ ಗಳನ್ನು ಮುರಿದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಂತಿ ಕಾಪಾಡುವಂತೆ ರೈತರಿಗೆ ಮನವಿ ಮಾಡುತ್ತಿದ್ದೇವೆ. ಗಣರಾಜ್ಯೋತ್ಸವದಂದು ಇಂತಹ ಪ್ರತಿಭಟನೆ ಸರಿಯಲ್ಲ ಎಂದು ಹೇಳಿದರು.
ದೆಹಲಿಯಲ್ಲಿ ರೈತರ ಪ್ರತಿಭಟನೆ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಇದೀಗ ದೆಹಲಿಯ ವಿವಿಧ ರಸ್ತೆಗಳನ್ನು ಮುಚ್ಚಲಾಗಿದೆ. ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಇದೀಗ ಪೊಲೀಸರು ಹಾಗೂ ರೈತರ ತಿಕ್ಕಾಟ ಆರಂಭವಾಗಿದ್ದು, ರೈತರನ್ನು ಹಿಮ್ಮೆಟ್ಟಿಸಲು ಪೊಲೀಸರು ಅಶ್ರುವಾಯು ಹಾಗೂ ಲಾಠಿ ಚಾರ್ಜ್ ನಡೆಸುತ್ತಿದ್ದಾರೆ. ರೈತರು ಕೂಡ ತಮ್ಮ ಧ್ವಜದ ಕೋಲುಗಳನ್ನು ಪೊಲೀಸರ ಮೇಲೆ ಪ್ರಯೋಗಿಸುತ್ತಿದ್ದಾರೆ.
We know the people who are trying to create disturbance, they are identified. There are people from political parties who are trying to malign the agitation: Rakesh Tikait, Spox, BKU, when asked that there are allegations that protests have gone out of the hands of farmer leaders pic.twitter.com/LRwPnFz2Xx
— ANI (@ANI) January 26, 2021
Since morning we had been appealing to farmers to go by pre-approved route but some of them broke police barricades, attacked police personnel. Appeal to farmer unions to help maintain peace. This isn't a peaceful protest on Republic Day: Shalini Singh, Jt CP, in Nangloi, Delhi pic.twitter.com/zVIw2CaQGB
— ANI (@ANI) January 26, 2021
#WATCH: Security personnel resort to lathicharge to push back the protesting farmers, in Nangloi area of Delhi. Tear gas shells also used.#FarmLaws pic.twitter.com/3gNjRvMq61
— ANI (@ANI) January 26, 2021