ಮಣಿಪುರದಲ್ಲಿ ಬೆತ್ತಲೆ ಮೆರವಣಿಗೆ: ಮೋದಿ ಪ್ರತಿಕ್ರಿಯೆ ‘ಮೊಸಳೆ ಕಣ್ಣೀರು’ ಎಂದು ‘ದಿ ಟೆಲಿಗ್ರಾಫ್’ ಲೇವಡಿ

ಮಣಿಪುರದಲ್ಲಿ ಇಬ್ಬರು ಯುವತಿಯರ ಮೇಲೆ ದೌರ್ಜನ್ಯ ನಡೆದು 79 ದಿನಗಳಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದನ್ನು ‘ಮೊಸಳೆ ಕಣ್ಣೀರು’ ಎಂದು ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ ಲೇವಡಿ ಮಾಡಿದೆ.
ಶುಕ್ರವಾರದ ಪತ್ರಿಕೆಯ ಮುಖಪುಟದಲ್ಲಿ ಕಣ್ಣೀರು ಸುರಿಸುತ್ತಿರುವ ಮೊಸಳೆಯೊಂದಿಗೆ 79 ಸಣ್ಣಸಣ್ಣ ಮೊಸಳೆ ಚಿತ್ರಗಳನ್ನು ಮುದ್ರಿಸಿ, ‘ನೋವು ಮತ್ತು ಅವಮಾನಗಳು 56 ಇಂಚಿನ ಚರ್ಮವನ್ನು ಚುಚ್ಚಲು 79 ದಿನಗಳನ್ನು ತೆಗೆದುಕೊಂಡಿತು’ ಎಂಬ ತಲೆಬರಹ ನೀಡಿದೆ.
ಮಣಿಪುರದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಘರ್ಷಣೆಯಲ್ಲಿ ಯುವತಿಯರ ಬೆತ್ತಲೆ ಮೆರವಣಿಗೆ ವಿಡಿಯೋ ವೈರಲ್ ಆಗಿ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಈ ವಿಡಿಯೋ ವೈರಲ್ ಆದ ಬಳಿಕ ಪ್ರಧಾನಿ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದರು.
ಶುಕ್ರವಾರ ದಿನವಿಡೀ ಟೆಲಿಗ್ರಾಫ್ ಮುಖಪುಟ ಸುದ್ದಿ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೀಡಾಗಿತ್ತು.
ಮಣಿಪುರದಲ್ಲಿ ಗಲಭೆ ಪ್ರಾರಂಭವಾದ ಬಳಿಕ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮಣಿಪುರ ಹೊತ್ತಿಉರಿಯುತ್ತಿರುವಾಗಲೇ ಅವರು ವಿದೇಶ ಪ್ರವಾಸ ಕೈಗೊಂಡಿದ್ದರು ಎನ್ನುವುದು ಟೀಕೆಗೆ ಕಾರಣವಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw