ಮಣಿಪುರದ ಜನತೆಗೆ ಸೌಹಾರ್ದ ಬೆಂಬಲ ಕೂಳೂರು ಜಂಕ್ಷನ್ ನಲ್ಲಿ ಪ್ರತಿಭಟನೆ

ಮಣಿಪುರ ಹಿಂಸಾಚಾರ ಹಾಗೂ ಸಾರ್ವಜನಿಕವಾಗಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯನ್ನು ಖಂಡಿಸಿ ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಒತ್ತಾಯಿಸಿ ಮಣಿಪುರ ಬಿಜೆಪಿ ಸರಕಾರದ ಹಾಗೂ ಕೇಂದ್ರ ಸರಕಾರದ ಮೌನದ ವಿರುದ್ದ ಡಿವೈಎಫ್ ಐ ಪಂಜಿಮೊಗರು ಘಟಕದ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಕೂಳೂರು ಜಂಕ್ಷನ್ ನಲ್ಲಿ ನಡೆಯಿತು..
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಮಣಿಪುರ ಸರಕಾರದ ಹಾಗೂ ಕೇಂದ್ರ ಸರಕಾರದ ಜಾಣ ಮೌನದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಮಣಿಪುರದಲ್ಲಿ ವ್ಯಾಪಕ ಹಿಂಸಾಚಾರ ತಡೆಗಟ್ಟಲು ಮಿಲಿಟರಿ ಹಾಗೂ ಪೊಲೀಸರು ಶಕ್ತರಾಗಿದ್ದರೂ ಸರಕಾರ ಗಲಭೆಯನ್ನು ಜೀವಂತವಿರಿಸಲು ಪ್ರಯತ್ನಿಸುತ್ತಿದೆ. ಇಂಟರ್‌ನೆಟ್ ಸೇವೆ ಅಮಾನತು ಮಾಡಿದ ಹೊರತಾಗಿ ಭೀಕರವಾದ ವೀಡೀಯೋವೊಂದು ದೇಶಾದ್ಯಂತ ಸಂಚಲನ ಮೂಡಿಸಿದ್ದು ಇಂತಹ ಹಲವಾರು ಅತ್ಯಾಚಾರ ಪ್ರಕರಣಗಳು ನಡೆದಿದೆ ಇದು ಗಲಭೆಯ ಸ್ಯಾಂಪಲ್ ಅಷ್ಟೇ ಇಂತಹ ಹತ್ಯಾಕಾಂಡ ರಾಜಕೀಯ ಕಾರಣಕ್ಕಾಗಿಯೇ ನಡೆಯುತ್ತಿದೆ. ಮಣಿಪುರದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಮೇಲೆ ದೊಡ್ಡ ಮಟ್ಟದ ಹಿಂಸಾಚಾರ ನಡೆದಿದ್ದು ದೇಶದ ಸೌಹಾರ್ದಪ್ರಿಯ ಸರ್ವಧರ್ಮ ಜನತೆ ಅವರೊಂದಿಗಿದ್ದಾರೆ ಎಂಬ ಸಂದೇಶ ನೀಡಿದರು.
ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ ಪ್ರಧಾನಿಗಳು ಮಾತನಾಡಬೇಕಾದ ಸಮಯ ಮೌನವಾಗಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಗುಜರಾತ್ ಮಾದರಿಯಂತೆ ಮಣಿಪುರದಲ್ಲೂ ಗಲಭೆ ಸೃಷ್ಟಿಸಲಾಗಿದೆ ಎಂದು ದೂರಿದರು. ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಪ್ರತಿಭಟನೆ ಉದ್ದೇಶಿಸಿ ಡಿವೈಎಫ್ ಐ ನಗರಾಧ್ಯಕ್ಷ ನವೀನ್ ಕೊಂಚಾಡಿ ಮಾತನಾಡಿ ಮಣಿಪುರದಲ್ಲಿ ನಡೆದ ಕೃತ್ಯ, ಪ್ರಧಾನಿ ಮೌನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮುಖಂಡರಾದ ಅನಿಲ್ ಡಿಸೋಜ, ನೌಶಾದ್, ಹನುಮಂತ, ಸೌಮ್ಯ, ಆಶಾ, ಅಸುಂತ ಡಿಸೋಜ, ಶ್ರೀನಾಥ್ ಕಾಟಿಪಳ್ಳ, ಸಾಮಾಜಿಕ ಮುಂದಾಳುಗಳಾದ ಕನಕದಾಸ್ ಕೂಳೂರು, ವಿನ್ಸೆಂಟ್, ಡೆನ್ನಿಸ್, ಜಾನ್ ಕೂಳೂರು, ಸಿದ್ದಿಕ್, ಸುಲೈಮಾನ್ ಮುಂತಾದವರು ಉಪಸ್ಥಿತರಿದ್ದರು. ಸಂತೋಷ್ ಡಿಸೋಜ ಸ್ವಾಗತಿಸಿ, ಪ್ರಮೀಳಾ ವಂದಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw