ಭೂಮಿ ಗಢಗಢ: ಉತ್ತರಖಂಡ್ ನಲ್ಲಿ ಭೂಮಿ ಕಂಪನ - Mahanayaka
12:02 PM Friday 20 - September 2024

ಭೂಮಿ ಗಢಗಢ: ಉತ್ತರಖಂಡ್ ನಲ್ಲಿ ಭೂಮಿ ಕಂಪನ

23/07/2023

ಉತ್ತರಾಖಂಡ್‌ನ ಪಿಥೋರಗಢದಲ್ಲಿ ಭೂಮಿ ಕಂಪಿಸಿದೆ.‌ ರಿಕ್ಟರ್ ಮಾಪಕದಲ್ಲಿ 3.2ರಷ್ಟು ಕಂಪನದ ತೀವ್ರತೆ ದಾಖಲು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಅದೃಷ್ಟವಶಾತ್​ ಯಾವುದೇ ಸಾವು ನೋವು ಸಂಭವಿಸಿಲ್ಲ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ ಸಂಜೆ 6.34 ರ ಸುಮಾರಿಗೆ ಭೂಕಂಪನದ ಅನುಭವ ಆಗಿದೆ. ತಕ್ಷಣ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪನದ ಆಳವು ನೆಲದಿಂದ 5 ಕಿಲೋಮೀಟರ್​​ ಒಳಗೆ ಸಂಭವಿಸಿದೆ.

ಇದಕ್ಕೂ ಮುನ್ನ ಮೇ 11ರಂದು ಬೆಳಿಗ್ಗೆ ಉತ್ತರಾಖಂಡದ ಪಿಥೋರಗಢದಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಮೇ 8 ರಂದು ಬಾಗೇಶ್ವರ ಜಿಲ್ಲೆಯಲ್ಲಿ 2.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದೇ ರೀತಿಯಾಗಿ ಮೇ 5 ಮತ್ತು 7 ರಂದು ಸಹ ಭೂಕಂಪನ ಆಗಿತ್ತು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ