ಕೆಡಿಪಿ ಸಭೆ: ಅಸ್ಪಷ್ಟ ಮಾಹಿತಿ ನೀಡುತ್ತಿದ್ದ ಅಧಿಕಾರಿಗಳ ವಿರುದ್ಧ ಸಚಿವ ವೆಂಕಟೇಶ್ ಕೆಂಡಾಮಂಡಲ - Mahanayaka
5:17 PM Saturday 21 - September 2024

ಕೆಡಿಪಿ ಸಭೆ: ಅಸ್ಪಷ್ಟ ಮಾಹಿತಿ ನೀಡುತ್ತಿದ್ದ ಅಧಿಕಾರಿಗಳ ವಿರುದ್ಧ ಸಚಿವ ವೆಂಕಟೇಶ್ ಕೆಂಡಾಮಂಡಲ

chamaraja nagara
24/07/2023

ಚಾಮರಾಜನಗರ: ರೇಷ್ಮೆ ಹಾಗೂ ಪಶುಸಂಗೋಪನೆ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಇಂದು ಬೆಳಗ್ಗೆಯಿಂದ ಸಂಜೆವರೆಗೆ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಕೆಡಿಪಿ ಸಭೆ ನಡೆಸಿದರು.

ಸಭೆ ಆರಂಭದಲ್ಲೇ ಪ್ರಶ್ನೆಗಳ ಗೂಗ್ಲಿ ಎಸೆದ ಸಚಿವ ಕೆ.ವೆಂಕಟೇಶ್ ಅಧಿಕಾರಿಗಳು ನೀಡುತ್ತಿದ್ದ ಅಸ್ಪಷ್ಟ, ಅಪೂರ್ಣ ಮಾಹಿತಿಗೆ ಕೆಂಡಾಮಂಡಲರಾಗಿ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.

ರೇಷ್ಮೆ ಇಲಾಖೆಯಲ್ಲಿ ಜಿಲ್ಲೆಯಲ್ಲಿರುವ ಜಮೀನು, ನರ್ಸರಿ, ಆಸ್ತಿ ಬಗ್ಗೆ ಸಚಿವರು ಕೇಳಿದ ಪ್ರಶ್ನೆಗೆ ತಡಬಡಾಯಸಿದ ರೇಷ್ಮೆ ಇಲಾಖೆ ಡಿಡಿ ನಾಗೇಂದ್ರಪ್ಪ ವಿರುದ್ಧ ಹರಿಹಾಯ್ದ ಸಚಿವ-; ಆಫೀಸ್ ಲ್ಲಿ ಕುಳಿತು ಸರ್ಕಾರದ ಹಣ ಜನರಿಗೆ ಕೊಡುವುದು ಸಾಧನೆಯಲ್ಲ, ರೇಷ್ಮೆಗೆ ಏನು ಉತ್ತೇಜನ ಕೈಗೊಂಡಿದ್ದೀರಿ, ಸಾಮಾನ್ಯ ಅಂಕಿ-ಅಂಶದ ವಿವರವೂ ನಿನ್ನಲ್ಲಿ ಇಲ್ಲವಲ್ಲಾ ಎಂದು ಕಿಡಿಕಾರಿ ಸಿಇಒ ಪೂವಿತಾಗೆ ಅಧಿಕಾರಿ ವಿರುದ್ಧ ರಿಪೋರ್ಟ್ ಸಲ್ಲಿಸುವಂತೆ ಸೂಚಿಸಿದರು.


Provided by

ಇನ್ನು, ಜಿಲ್ಲೆಯಲ್ಲಿ ಡೆಂಗೆ ಜ್ವರ ಉಲ್ಭಣಗೊಂಡ ಮಾಹಿತಿ ಪಡೆದ ಕೆ.ವೆಂಕಟೇಶ್ ತಡೆಗಟ್ಟಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿದ್ದಕ್ಕೆ, ಮನೆಮನೆ ಸರ್ವೆ ಮಾಡುತ್ತಿದ್ದೇವೆ ಎಂದು ಉತ್ತರಿಸಿದ ಡಿಎಚ್ಒ ವಿಶ್ವೇಶ್ವರಯ್ಯಗೆ- ನಾನೇನು ಕೇಳುತ್ತಿದ್ದೀನಿ, ನೀನೇನೂ ಬಡಿದುಕೊಳ್ಳುತ್ತಿದ್ದೀಯಾ.., ಸರ್ವೆ ಮಾಡೋದು ಜ್ವರ ಯಾರಿಗೆ ಬಂದಿದೆ ಅಂಥಾ ತಿಳಿಯಲು, ನಗರಸಭೆ ಜೊತೆಗೂಡಿ ನೈರ್ಮಲ್ಯ ಕಾಪಾಡಿ, ನೀರು ನಿಲ್ಲದಂತೆ ಎಚ್ಚರವಹಿಸಿ ಎಂದು ಸೂಚಿಸಿದರು.

ಗೃಹಜ್ಯೋತಿ 63%- ಶಕ್ತಿ ಯೋಜನೆ ಸಕ್ಸಸ್

ಗ್ಯಾರಂಟಿ ಯೋಜನೆಗಳ‌ ಬಗ್ಗೆ ಸಭೆಯ ಆರಂಭದಲ್ಲೇ ಚರ್ಚೆ ಆಯಿತು.‌ ಗೃಹಜ್ಯೋತಿ ಯೋಜನೆಗೆ ಜಿಲ್ಲೆಯಲ್ಲಿ ಶೇ. 63 ರಷ್ಟು ಮಂದಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಜಿಲ್ಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದ್ದು ನಿತ್ಯ 1.60 ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದಾರೆ, ಕಳೆದ ತಿಂಗಳು 8 ಕೋಟಿ ರೂ.‌ನಷ್ಟು ಬಿಲ್ ನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇನ್ನು , ಅನ್ನಭಾಗ್ಯ ನಗದು ವರ್ಗಾವಣೆಯಡಿ ಶೇ. 100 ರಷ್ಟು ಹಣ ವರ್ಗಾವಣೆಗೊಂಡಿದೆ, ಗೃಹಜ್ಯೋತಿ ಯೋಜನೆಯಡಿ 28 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆಯಿಂದ ಅರ್ಹ ಫಲಾನುಭವಿ ಯಾರೂ ತಪ್ಪಿಸಿಕೊಳ್ಳಬಾರದು, ಗೃಹಲಕ್ಷ್ಮಿ ಯೋಜನೆಗೆ ಮತ್ತಷ್ಟು ವೇಗ ಕೊಡಬೇಕೆಂದು ಸಚಿವರು ಸೂಚಿಸಿದರು.ಸಭೆಯಲ್ಲಿ ಶಾಸಕರುಗಳಾದ ಗಣೇಶ್ ಪ್ರಸಾದ್, ಎಂ.ಆರ್.ಮಂಜುನಾಥ್, ವಿಧಾನ ಪರಿಷತ್ ಸದಸ್ಯರುಗಳಾದ ಮರಿತಿಬ್ಬೇಗೌಡ, ತಿಮ್ಮಯ್ಯ, ಮಂಜೇಗೌಡ ಇದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

 

ಇತ್ತೀಚಿನ ಸುದ್ದಿ