ಸ್ವಾತಂತ್ರ್ಯ ನಂತರ ಎಸ್‌ ಸಿ, ಎಸ್‌ ಟಿ ಹೊರತುಪಡಿಸಿ ಇತರೆ ಯಾವುದೇ ಜಾತಿವಾರು ಜನಗಣತಿ ನಡೆದೇ ಇಲ್ವಂತೆ: ಸತ್ಯ ಬಾಯ್ಬಿಟ್ಟ ಕೇಂದ್ರ ಸರ್ಕಾರ - Mahanayaka

ಸ್ವಾತಂತ್ರ್ಯ ನಂತರ ಎಸ್‌ ಸಿ, ಎಸ್‌ ಟಿ ಹೊರತುಪಡಿಸಿ ಇತರೆ ಯಾವುದೇ ಜಾತಿವಾರು ಜನಗಣತಿ ನಡೆದೇ ಇಲ್ವಂತೆ: ಸತ್ಯ ಬಾಯ್ಬಿಟ್ಟ ಕೇಂದ್ರ ಸರ್ಕಾರ

25/07/2023

ಸ್ವಾತಂತ್ರ್ಯ ನಂತರ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್‌ಟಿ) ಹೊರತುಪಡಿಸಿ ಇತರೆ ಯಾವುದೇ ಜಾತಿವಾರು ಜನಗಣತಿಯನ್ನು ನಡೆಸಿಲ್ಲ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ತಿಳಿಸಿದೆ.


Provided by

ಮುಂಬರುವ ಜನಗಣತಿಯಲ್ಲಿ ಜಾತಿ ವಿವರಗಳನ್ನು ಸಂಗ್ರಹಿಸಲು ಕೆಲವು ರಾಜಕೀಯ ಪಕ್ಷಗಳು ಮತ್ತು ಕೆಲವು ಸಂಘಟನೆಗಳು ಮನವಿ ಮಾಡಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಹೇಳಿದ್ದಾರೆ.

ಜನಗಣತಿಯಲ್ಲಿ, ಸಂವಿಧಾನ(ಪರಿಶಿಷ್ಟ ಜಾತಿಗಳು)ದ ಆದೇಶ, 1950 ಮತ್ತು ಸಂವಿಧಾನ(ಪರಿಶಿಷ್ಟ ಪಂಗಡಗಳು) ಆದೇಶ, 1950ರ ಪ್ರಕಾರ ಪರಿಶಿಷ್ಟ ಜಾತಿಗಳು(ಎಸ್‌ಸಿಗಳು) ಮತ್ತು ಪರಿಶಿಷ್ಟ ಪಂಗಡಗಳು (ಎಸ್‌ಟಿಗಳು) ಎಂದು ನಿರ್ದಿಷ್ಟವಾಗಿ ಅಧಿಸೂಚಿಸಲಾದ ಜಾತಿಗಳು ಮತ್ತು ಬುಡಕಟ್ಟುಗಳನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


Provided by

‘ಸ್ವಾತಂತ್ರ್ಯದ ನಂತರ ಕೇಂದ್ರ ಸರ್ಕಾರವು ಜನಗಣತಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳನ್ನು ಹೊರತುಪಡಿಸಿ ಜಾತಿವಾರು ಜನಗಣತಿ ನಡೆಸಿಲ್ಲ’ ಎಂದು ನಿತ್ಯಾನಂದ ರೈ ಅವರು ಲಿಖಿತ ಪ್ರಶ್ನೆಗೆ ಉತ್ತರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ