ಪಬ್ ಜಿ ಲವ್ ಗೆ ಸಂಕಷ್ಟ: ಸೀಮಾ ಮತ್ತು ಸಚಿನ್ ಮದುವೆಗೆ ಸಹಾಯ ಮಾಡಿದ್ದ ಇಬ್ಬರು ಅರೆಸ್ಟ್
ಆನ್ ಲೈನ್ ಮೊಬೈಲ್ ಗೇಮ್ ಪಬ್ ಜಿ ಮೂಲಕ ಪರಿಚಯವಾದ ತನ್ನ ಪ್ರೇಮಿಯನ್ನು ಮದುವೆಯಾಗಲು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಗೆ ನಕಲಿ ಗುರುತಿನ ದಾಖಲೆಗಳನ್ನು ರಚಿಸುವಲ್ಲಿ ಭಾಗಿಯಾಗಿದ್ದ ಇಬ್ಬರು ವ್ಯಕ್ತಿಗಳನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಉತ್ತರ ಪ್ರದೇಶದ ಬುಲಂದ್ ಶಹರ್ ಮೂಲದ ಪುಷ್ಪೇಂದ್ರ ಮತ್ತು ಪವನ್ ಎಂದು ಗುರುತಿಸಲಾಗಿದ್ದು, ಅವರಿಂದ ಒಟ್ಟು 15 ನಕಲಿ ಆಧಾರ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರಿಬ್ಬರನ್ನು ಕಳೆದ ಮೂರು ದಿನಗಳಿಂದ ನಿರಂತರ ವಿಚಾರಣೆ ಮಾಡಲಾಗಿತ್ತು. ಈ ಸಮಯದಲ್ಲಿ ಇವರು ದೊಡ್ಡ ಮೋಸದ ದಾಖಲೆಗಳ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದರು.
ಸೀಮಾ ಹೈದರ್ ಗ್ರೇಟರ್ ನೋಯ್ಡಾಕ್ಕೆ ಆಗಮಿಸಿದಾಗ ಅವರನ್ನು ತನಿಖೆ ಮಾಡಲು ಪ್ರಾರಂಭಿಸಲಾಯಿತು. ಸೀಮಾ ಅವರೊಂದಿಗೆ ಅವರ ಪತಿ ಸಚಿನ್ ಮೀನಾ ಇದ್ದರು. ಇಬ್ಬರೂ ಮದುವೆಯಾಗುವ ಉದ್ದೇಶದಿಂದ ಬುಲಂದ್ ಶಹರ್ ಗೆ ಪ್ರಯಾಣಿಸಿದ್ದರು.
ಪುಷ್ಪೇಂದ್ರ ಮತ್ತು ಪವನ್ ಉತ್ತರ ಪ್ರದೇಶದ ಬುಲಂದ್ ಶಹರ್ ನ ಅಹ್ಮದ್ ಗಢದಲ್ಲಿ ಜನ ಸೇವಾ ಕೇಂದ್ರವನ್ನು ನಡೆಸುತ್ತಿದ್ದರು. ಇದೇ ಕೇಂದ್ರದಲ್ಲಿ ಸಚಿನ್ ಮೀನಾ ಮತ್ತು ಸೀಮಾ ಹೈದರ್ ತಮ್ಮ ಮದುವೆಗೆ ಅಗತ್ಯವಾದ ದಾಖಲೆಗಳನ್ನು ಪಡೆಯಲು ಸಹಾಯವನ್ನು ಕೋರಿದ್ದರು.
ತನಿಖೆಯ ಸಮಯದಲ್ಲಿ ಆಧಾರ್ ಕಾರ್ಡ್ ಗಳನ್ನು ನಕಲಿ ಮಾಡುವಲ್ಲಿ ಪುಷ್ಪೇಂದ್ರ ಮತ್ತು ಪವನ್ ಭಾಗಿಯಾಗಿದ್ದಾರೆ ಎಂದು ಸೂಚಿಸುವ ಪುರಾವೆಗಳು ಪೊಲೀಸರಿಗೆ ಸಿಕ್ಕಿವೆ. ನಕಲಿ ದಾಖಲೆಗಳ ಜೊತೆಗೆ, ಈ ನಕಲಿ ಕಾರ್ಡ್ ಗಳ ಸೃಷ್ಟಿಯಲ್ಲಿ ಬಳಸಲಾದ ಉಪಕರಣಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw