21 ದಿನಕ್ಕೇ ಮಾದಪ್ಪನ ಹುಂಡಿಯಲ್ಲಿ ಒಂದೂವರೆ ಕೋಟಿ ಹಣ: ಉಚಿತ ಬಸ್ ಹಿನ್ನೆಲೆ ಹರಿದು ಬಂದ ಮಹಿಳಾ ಸಾಗರ

ಚಾಮರಾಜನಗರ: ಪ್ರಸಿದ್ಧ ಯಾತ್ರಸ್ಥಳವಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು ಹುಂಡಿ ಎಣಿಕೆ ನಡೆದಿದ್ದು ಕೇವಲ 21 ದಿನಗಳಿಗೆ ಒಂದೂವರೆ ಕೋಟಿ ಹಣ ಸಂಗ್ರಹಗೊಂಡಿದೆ.
21 ದಿನಗಳ ಅವಧಿಯಲ್ಲಿ 1,56,38,122 ರೂ. ಹಣ ಸಂಗ್ರಹಗೊಂಡಿದೆ. ಕಾಣಿಕೆ ರೂಪದಲ್ಲಿ ದೇವರಿಗೆ 30 ಗ್ರಾಂ ಚಿನ್ನ ಹಾಗೂ 1.26 ಕೆಜಿ ಬೆಳ್ಳಿ ಆಭರಣಗಳನ್ನು ಭಕ್ತರು ಹುಂಡಿಗೆ ಅರ್ಪಿಸಿದ್ದಾರೆ.
ಉಚಿತ ಬಸ್ ಪ್ರಯಾಣದ ಹಿನ್ನೆಲೆ ಹುಣ್ಣಿಮೆ, ಭೀಮನ ಅಮಾವಾಸ್ಯೆ ಹಾಗೂ ಸರ್ಕಾರಿ ರಜಾ ದಿನಗಳಂದು ಮಾದಪ್ಪನ ಸನ್ನಿಧಿಗೆ ಮಹಿಳಾ ಸಾಗರವೇ ಹರಿದು ಬಂದ ಪರಿಣಾಮ ಶ್ರೀಕ್ಷೇತ್ರಕ್ಕೆ ಭರ್ಜರಿ ಆದಾಯ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw