ಪುಣೆಗೆ ಶಾಕ್..! ಸಾಲ ತೀರಿಸಲಿಲ್ಲ ಎಂಬ ಕಾರಣಕ್ಕೆ ಪತಿಯ ಎದುರೇ ಪತ್ನಿ ಮೇಲೆ ಅತ್ಯಾಚಾರ
ಸಾಲ ಮರುಪಾವತಿಸಲು ಸಾಧ್ಯವಾಗದ ವ್ಯಕ್ತಿಯ ಮುಂದೆನೇ ಆತನ ಪತ್ನಿಯ ಮೇಲೆ ದುರುಳರು ಅತ್ಯಾಚಾರ ಎಸಗಿದ ಭಯಾನಕ ಪ್ರಕರಣ ಮಹಾರಾಷ್ಟ್ರದ ಪುಣೆಯಲ್ಲಿ ವರದಿಯಾಗಿದೆ.
ಆರೋಪಿಯು 34 ವರ್ಷದ ಮಹಿಳೆಯನ್ನು ಚಾಕುವಿನಿಂದ ಬೆದರಿಸಿ ಆಕೆಯ ಪತಿಯ ಮುಂದೆಯೇ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಈ ಘಟನೆಯ ವೀಡಿಯೊವನ್ನು ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
47 ವರ್ಷದ ಆರೋಪಿ ಇಮ್ತಿಯಾಜ್ ಶೇಖ್ ಸಂತ್ರಸ್ತೆಯ ಪತಿಗೆ 40,000 ರೂ.ಗಳ ಬಡ್ಡಿರಹಿತ ಸಾಲವನ್ನು ನೀಡಿದ್ದ. ಕೆಲ ಕಾರಣಗಳಿಂದ ದಂಪತಿಗೆ ಸಾಲದ ಮೊತ್ತವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಶೇಖ್ ಅವರನ್ನು ನಿಂದಿಸಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದ. ಅಲ್ಲದೇ ದಂಪತಿಯನ್ನು ಹಡಪ್ಸರ್ ಸರ್ಕಾರಿ ಕಾಲೋನಿಯ ನಿರ್ಜನ ಸ್ಥಳಕ್ಕೆ ಕರೆದು ಮತ್ತೆ ಅವರಿಂದ ಬಾಕಿ ಹಣವನ್ನು ಕೇಳಿದ್ದ ಆರೋಪಿ. ಆದರೆ ದಂಪತಿಗೆ ಪಾವತಿಸಲು ಅವರ ಬಳಿ ಹಣವಿರಲಿಲ್ಲ. ನಂತರ ಶೇಖ್ ಚಾಕುವನ್ನು ಹೊರತೆಗೆದು, ಗಂಡನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಅಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ನಂತರ ಆರೋಪಿ ಮತ್ತೆ ಮಹಿಳೆಯೊಂದಿಗೆ ಪದೇ ಪದೇ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಮಹಿಳೆ ನಿರಾಕರಿಸಿದಾಗ, ಅವನು ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಸೈಟ್ ಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಅಂತಿಮವಾಗಿ ಧೈರ್ಯವನ್ನು ಒಟ್ಟುಗೂಡಿಸಿದ ಸಂತ್ರಸ್ತೆ ಹಡಪ್ಸರ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ರವೀಂದ್ರ ಶೆಲ್ಕೆ ತಿಳಿಸಿದ್ದಾರೆ.
ನಾವು ಆರೋಪಿಯನ್ನು ಪತ್ತೆಹಚ್ಚಿ ಅವನನ್ನು ಬಂಧಿಸಿದ್ದೇವೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಎರಡು ದಿನಗಳ ರಿಮಾಂಡ್ ನೀಡಿದೆ ಅಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw