ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಓವರ್ ಲೋಡ್ ಲಾರಿ! | ವಿಡಿಯೋ ನೋಡಿ - Mahanayaka
10:22 PM Thursday 12 - December 2024

ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಓವರ್ ಲೋಡ್ ಲಾರಿ! | ವಿಡಿಯೋ ನೋಡಿ

manjanady
29/07/2023

ಓವರ್ ಲೋಡ್ ಇದ್ದ ಲಾರಿಯೊಂದು ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ಮಂಗಳೂರು ನಗರದ ಹೊರವಲಯದ ನಾಟೆಕಲ್ –- ಮಂಜನಾಡಿ ಮಾರ್ಗ ಮಧ್ಯೆ ನಡೆದಿದೆ.

ಈ ಘಟನೆಯಲ್ಲಿ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇರಳಕಟ್ಟೆ ಕಡೆಯಿಂದ ತೌಡುಗೋಳಿ ಕಡೆಗೆ ಪ್ಲೈವುಡ್ ಇದ್ದ ಲಾರಿ ತೆರಳುತ್ತಿತ್ತು. ಈ ನಡುವೆ ತಿರುವಿನಲ್ಲಿ  ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಎದುರಿನಿಂದ ಬಂದಿದೆ.

ಲಾರಿಯಲ್ಲಿ ಓವರ್ ಲೋಡ್ ಇದ್ದ ಹಿನ್ನೆಲೆಯಲ್ಲಿ ಚಾಲಕ ಎದುರಿನ ಲಾರಿಗೆ ಸೈಡ್ ಕೊಡುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.

ವಿಡಿಯೋ ನೋಡಿ:

manjanady

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ