ನಿಮಗೆ ಧೈರ್ಯ ಇದ್ರೆ ಸಂಪೂರ್ಣ ವಿಡಿಯೋ ಶೇರ್ ಮಾಡಿ: ಸೌಜನ್ಯ ಪರ ಹೋರಾಟ ಹಳ್ಳ ಹಿಡಿಸಲು ಯತ್ನಿಸಿದವರಿಗೆ ಒಡನಾಡಿ ಸ್ಟಾನ್ಲಿ ಸವಾಲು
ಮೈಸೂರು: ಒಡನಾಡಿ ಸಂಸ್ಥೆಯ ಸ್ಟಾನ್ಲಿ ಅವರ ಹೇಳಿಕೆಯನ್ನು ತಿರುಚಿ ಸೌಜನ್ಯ ಅತ್ಯಾಚಾರ ಪ್ರಕರಣದ ಹೋರಾಟದ ಕಾವನ್ನು ಹಳ್ಳಹಿಡಿಸಲು ವ್ಯವಸ್ಥಿತ ಪಿತೂರಿ ನಡೆದಿದ್ದು, ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಟಾನ್ಲಿ ಅವರು, ವಸಂತ್ ಗಿಳಿಯಾರ್ ಎನ್ನುವಂತಹ ಒಬ್ಬ ವ್ಯಕ್ತಿ, ಒಂದು ಕೆಟ್ಟ ಸಂದೇಶವನ್ನು ಜನರ ಮುಂದೆ ಕಳಿಸ್ತಾ ಇದ್ದಾನೆ. ಒಡನಾಡಿಯ ಸ್ಟಾನ್ಲಿ, “ಧರ್ಮಸ್ಥಳವನ್ನು ಹಂದಿ ಹೊಡೆದಂಗೆ ಹೊಡಿಬೇಕು” ಎಂದು ಹೇಳಿದ್ದಕ್ಕೆ ಸಂಬಂಧಪಟ್ಟ ದಾಖಲೆ ನನ್ನ ಬಳಿ ಇದೆ ಅಂತ. ಬಹುಶಃ ಇದಕ್ಕಿಂತ ನೀಚತನ ಇನ್ನೊಬ್ಬ ಮಾಡಲಾರ ಅಂತ ನಾನಂತೂ ಅಂದ್ಕೊಂಡಿದ್ದೀನಿ ಎಂದಿದ್ದಾರೆ.
ಸಾಧ್ಯವಾದ್ರೆ, ಸೌಜನ್ಯಳ ನ್ಯಾಯದ ಹೋರಾಟದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಾಗುತ್ತದೆ. ಆದ್ರೆ ಒಂದು ನ್ಯಾಯಬದ್ಧ ಹೋರಾಟವನ್ನ ಹಳ್ಳ ಹಿಡಿಸ್ಲಿಕ್ಕೆ ಅದೇ ರೀತಿಯಾಗಿ ಒಬ್ಬ ವ್ಯಕ್ತಿಯ ಘನತೆಯನ್ನ ಚ್ಯುತಿ ಮಾಡ್ಲಿಕ್ಕೆ, ಧರ್ಮಗಳ ನಡುವೆ ಇರುವ ಸಾಮರಸ್ಯವನ್ನು ಕದಡ್ಲಿಕ್ಕೋಸ್ಕರ, ಅಲ್ಲಿ ಯಾವುದೇ ರೀತಿಯ ಹಿಂಸಾಚಾರವನ್ನು ತರ್ಲಿಕ್ಕೋಸ್ಕರ ತನ್ನದೇ ಆದ ರೀತಿಯಲ್ಲಿ ಕೆಲವು ವಿಚಾರಗಳನ್ನ ಹೇಳ್ತಾ ಇದ್ದಾರೆ… ನೋಡಿ… ಸತ್ಯ ಹೇಳ್ಲಿಕ್ಕೆ ಎದೆಗಾರಿಕೆ ಬೇಕು, ಸುಳ್ಳು ಹೇಳ್ಲಿಕ್ಕಲ್ಲ. ಸತ್ಯ ಹೇಳುವುದನ್ನು ಕೂಡ ಸ್ಪಷ್ಟವಾಗಿ ಜನರ ಮುಂದೆ ಹೇಳ್ಬೇಕು, ಆ ಕೆಲಸ ನಾನು ಮಾಡ್ತೇನೆ, ನಾನೊಬ್ಬ ಅಪ್ಪಟ ಭಾರತೀಯನಾಗಿ ಎಲ್ಲ ಧರ್ಮಗಳನ್ನು ಕೂಡ ನಾನು ಗೌರವಿಸ್ತೇನೆ ಎಂದರು.
ವಸಂತ ಬಂಗೇರ ಅಂದ್ರೆ ನಾನು ಕೇಳಿದ್ದೀನಿ ಬಿಟ್ರೆ.. ನನಗೆ ಅವರ ಪರಿಚಯವೂ ಇಲ್ಲ, ಅವರ ಫೋನ್ ನಂಬರ್ ಇಲ್ಲ… ನನಗೆ ತಿಮರೋಡಿಯವರು ಕೂಡ ಇತ್ತೀಚೆಗೆ ಪರಿಚಯವಾಗಿದ್ದು. ನೀವು ಹೇಳಿದ ಹಾಗೆ ನಾವು ಯಾವುದೇ ಫೋನ್ ಸಂಭಾಷಣೆಯಲ್ಲಿ ಮಾತನಾಡಿದ್ದೇ ಇಲ್ಲ. ಆದ್ರೆ ಸತ್ಯ ವಿಚಾರವನ್ನು ಜನರ ಮುಂದಿಡ್ಲಿಕ್ಕೋಸ್ಕರ ಈ ವೊಂದು ವಿಡಿಯೋವನ್ನು ಮಾಡ್ತಾ ಇದ್ದೇನೆ. ಬಹಳ ಮುಖ್ಯವಾಗಿ ನೊಂದವರ ಸಭೆ ನಡೆಯುತ್ತಿದ್ದಾಗ, ನೂರು ಜನರು ಕೂಡ ನೂರು ಸಮಸ್ಯೆಗಳನ್ನು ಹೇಳುತ್ತಿದ್ದರು. ಹಿಂದೆ 80ರಲ್ಲಿ ಈ ರೀತಿಯಾಗಿತ್ತು, 90ರಲ್ಲಿ ಈ ರೀತಿ ಜನ ಸತ್ತೋಗಿದ್ದರು, ಇಷ್ಟು ಜಮೀನು ಕಬ್ಜ ಮಾಡಲಾಗಿದೆ. ಹಾಗೆಯೇ ಸೌಜನ್ಯನ ವಿಚಾರವಾಗಿ ನೂರಾರು ಪ್ರಕರಣಗಳನ್ನು ಮುಂದಿಡುತ್ತಿದ್ದರು. ಆಗ ನಾನು ಅವರ ಜೊತೆಗೆ ನಿವೇದಿಸಿಕೊಂಡಿದ್ದು ಇಷ್ಟು…
ನೋಡಿ… ಇದು ನಾವು ಸೌಜನ್ಯಳಿಗೋಸ್ಕರ ಕೈ ಎತ್ತಿ ಮುಷ್ಠಿ ಹಿಡಿದು ನ್ಯಾಯ ಕೇಳುವ ಸಮಯ, ಇಲ್ಲಿ ನೂರಾರು ಸಮಸ್ಯೆಗಳ ಬಗ್ಗೆ ಯೋಚನೆ ಮಾಡಬಾರದು. ಬರೇ ಸೌಜನ್ಯಳ ಬಗ್ಗೆ ಮಾತನಾಡಿ, ಹೇಗೆ ಮಾತನಾಡಬೇಕು ಅಂದ್ರೆ, ಹನ್ನೊಂದು ವರ್ಷಗಳ ಹಿಂದೆ, ಒಂದು ಮಗುವನ್ನು ಬರ್ಬರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿ, ತಂದು ಬಿಸಾಕಿದಂತಹ ವ್ಯಕ್ತಿಗಳು ಇನ್ನೂ ತಪ್ಪಿಸ್ಕೊಂಡು ಓಡಾಡುತ್ತಿದ್ದಾರಂದ್ರೆ, ಅವರು ಬಹಳ ಪ್ರಬಲರಿದ್ದಾರೆ ಅಂತನೇ ಅರ್ಥ, ಅವರಿಗೆ ಒಂದು ಹಿನ್ನೆಲೆಯಲ್ಲಿ ಕೆಲ್ಸ ಮಾಡ್ತಿರೋವಂತಹ ದೊಡ್ಡ ಶಕ್ತಿ ಇದೆ ಎಂದರ್ಥ ಹಾಗಾಗಿ ಹಿಂದೆ ನಡೆದಂತಹ ನೂರಾರು ಪ್ರಕರಣಗಳನ್ನು ತಂದು ಗುಡ್ಡೆ ಹಾಕೊಂಡು ಮಾತನಾಡ್ಬೇಡಿ, ಇದು ಹೇಗಿರ್ಬೇಕು ಅಂದ್ರೆ, ಇದು ತನಿಖೆ ಮಾಡುವ ಅಧಿಕಾರಿಗಳಿಗೂ ಇದು ಅನ್ವಯಿಸುತ್ತೇ, ಹೋರಾಟಗಾರರಿಗೂ ಇದು ಅನ್ವಯಿಸುತ್ತೆ, ಲಕ್ಷ್ಯ(ಏಕಾಗ್ರತೆ) ಕಳೆದುಕೊಳ್ಬಾರ್ದು, ಒಬ್ಬ ಕಾಡು ಪ್ರಾಣಿಯನ್ನು ಬೇಟೆಯಾಡ್ಲಿಕ್ಕೆ ನೀವು ಇಳಿಯಬೇಕಾದ್ರೆ, ನೀವು ಲಕ್ಷ್ಯ ಕಳಕೊಳ್ಬಾರ್ದು, ಬೇರೆಯದ್ದರ ಬಗ್ಗೆ ನೀವು ಯೋಚನೆ ಮಾಡಬಾರದು ಎಲ್ಲರೂ ಕೂಡ ಐಕ್ಯಮತ್ಯದಿಂದ ಕೆಲ್ಸ ಮಾಡ್ಬೇಕಾಗುತ್ತದೆ, ಒಂದೇ ಗುರಿಯಲ್ಲಿ ಸಾಗ್ಬೇಕಾಗುತ್ತೆ ಅಂತ ಹೇಳೋದಕ್ಕೋಸ್ಕರ ನಾನು ರೂಪಕವಾಗಿ ಹೇಳಿದ್ದೇನೆ ಎಂದರು.
ಒಬ್ಬ ಬೇಟೆಗಾರನಿಗೆ ಇರಬೇಕಾದ ಮನೋಸ್ಥಿತಿ, ತನಿಖಾಧಿಕಾರಿಗಳಿಗೂ ಇರಬೇಕಾಗುತ್ತದೆ, ಹೋರಾಟಗಾರರಿಗೂ ಇರಬೇಕಾಗುತ್ತೆ ಇದರಲ್ಲಿ ಯಾವುದೇ ಉತ್ಪ್ರೇಕ್ಷೆಗಳಿಲ್ಲ, ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಹೇಳ್ತೇನೆ, ನಾನಲ್ಲ ಈ ದೇಶದ ಎಲ್ಲ ಸಜ್ಜನರು ಕೂಡ, ಈ ಅಪರಾಧ(ಸೌಜನ್ಯ ಅತ್ಯಾಚಾರ ಕೊಲೆ) ಮಾಡಿದವರನ್ನ ಹಂದಿಗಿಂತ ಕೆಟ್ಟದಾಗಿ ಕಾಣ್ತಾರೆ. ಅದೇನಾದ್ರೂ ಸಾಬೀತಾದ್ರೆ ಮುಂದೆ ಎಲ್ಲರೂ ಒಕ್ಕೊರಳಿನಿಂದ ಹೇಳ್ತಾರೆ, ಇವರನ್ನು ಹಂದಿ ಹೊಡೆದಂಗೆ ಹೊಡಿರಿ ಅಂತ. ನಾನು ಮಾತನಾಡುವ ಒಂದೊಂದು ಪದಕ್ಕೂ ಕೂಡ ನಾನು ಜವಾಬ್ದಾರಿಯನ್ನು ಹೊತ್ತುಕೊಳ್ಳುವವನು. ಎಲ್ಲವನ್ನೂ ಸಂವಿಧಾನ ಬದ್ಧವಾಗಿಯೇ ಮಾತನಾಡೋನು. ಸತ್ಯ ಬಿಟ್ರೆ ಬೇರೊಂದಕ್ಕೆ ನಾನು ತಲೆಯನ್ನು ಕೊಡೋದಿಲ್ಲ. ಎಲ್ಲ ಧರ್ಮಗಳನ್ನು ಕೂಡ ಮಾತನಾಡುವಷ್ಟು ಎದೆಗಾರಿಕೆಯನ್ನು ಇಟ್ಕೋಳ್ತೇನೆ ಯಾಕೆಂದ್ರೆ, ನಾನು ಆ ಚೌಕಟ್ಟಿನಿಂದ ನಾನು ಹೊರಗೆ ಬಂದವನು. ಇದು ನಾನು ನಿಮ್ಗೆ ಎಚ್ಚರಿಕೆ ಕೊಡ್ತಾ ಇದ್ದೇನೆ. ಮುಂದಿನ ದಿನಗಳಲ್ಲಿ ಈ ಸಾಮರಸ್ಯ ಹಾಳು ಮಾಡುವಂತಹ ಕೆಟ್ಟ ಸಂದೇಶವನ್ನು ಸಾರುವಂತಹ ಕೆಲಸಕ್ಕೇನಾದ್ರು ಇಳಿದ್ರೆ, ನಾನು ಕಾನೂನಿನ ರೀತಿಯ ಕೆಲ್ಸಗಳನ್ನು ಮಾಡ್ಬೇಕಾಗುತ್ತೆ, ಹುಷಾರ್… ಎಂದು ಹೇಳ್ತೇನೆ, ಅದೇ ರೀತಿ ನಿಮ್ಮ ಬಗ್ಗೆ ಮರುಕನೂ ಪಡ್ತೇನೆ. ಇಷ್ಟು ತಿಳುವಳಿಕೆ ಪಡ್ಕೊಂಡಂತಹ ಯುವಕರಿದ್ದೀರಿ… ಇದನ್ನ ನೀವು ಸೌಜನ್ಯಳಿಗೋಸ್ಕರ ವಿನಿಯೋಗಿಸಬೇಕಿತ್ತು. ಯಾರನ್ನೂ ಸಂತೈಸಿಸುವುದಕ್ಕೋಸ್ಕರ ನೀವು ಈ ವಿಡಿಯೋವನ್ನು ಹರಿಯಬಿಡುತ್ತಿದ್ದೀರಾ? ನಿಮಗೆ ಧೈರ್ಯ ಇದ್ರೆ, ಸಂಪೂರ್ಣ ಮಾತುಕತೆಯನ್ನ ನೀವು ಹರಿಯಬಿಡಿ, ಅದು ನಿಮ್ಮ ಎದೆಗಾರಿಕೆಯಾಗುತ್ತೆ. ಅದು ಬಿಟ್ಟು ಇಲ್ಲಿ ವಸಂತ ಬಂಗೇರನ ತರೋದು, ತಿಮರೋಡಿಯವರನ್ನ ತರೋದು, ಜಾತಿಗಳನ್ನ ತರೋದು, ಮತ್ತೊಂದು ಮಗದೊಂದನ್ನ ತಂದು, ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸ್ಲಿಕ್ಕೆ ಹೋದ್ರೆ, ಇದು ನಡಿಯಲ್ಲ ಅಂತ ಹೇಳ್ಲಿಕ್ಕೆ ಇಷ್ಟ ಪಡ್ತೇನೆ, ಧರ್ಮ ಮಾರ್ಗದಲ್ಲಿ ನಡೆಯುತ್ತಿರುವ ಸಜ್ಜನರು, ಹೋರಾಟಗಾರರು ಇದನ್ನ ಅರ್ಥ ಮಾಡಿಕೊಳ್ತೀರಿ ಅನ್ನೋ ಪ್ರಬಲವಾದ ನಂಬಿಕೆ ನನ್ನದಾಗಿದೆ ಎಂದು ಸ್ಟಾನ್ಲಿ ಹೇಳಿದ್ದಾರೆ.
ವಿಡಿಯೋ ನೋಡಿ:
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw