ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ | World lung cancer day
- ರವಿನಂದನ್ ಎ.ಪಿ. ಮತ್ತು ಕವನ ಬಿ.ಕೆ. ಅವರಿಂದ ಉಪಯುಕ್ತ ಮಾಹಿತಿ
ಪ್ರತಿವರ್ಷ ಆಗಸ್ಟ್ 01 ರಂದು ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ತಡೆಗಟ್ಟುವಿಕೆ ಪತ್ತೆ ಮತ್ತು ಚಿಕಿತ್ಸೆಯನ್ನು ಉತ್ತೇಜಿಸುವ ಸಲುವಾಗಿ ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನವೆಂದು ಗುರುತಿಸಲಾಗಿದೆ.
ಆ ದಿನದಂದು ಶ್ವಾಸಕೋಶದ ಕ್ಯಾನ್ಸರ್ ಕಾರಣವಾಗುವ ಅಭ್ಯಾಸಗಳು ಮತ್ತು ಅಂಶಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಇಂತಹ ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಪ್ರಶ್ನೆ ಮತ್ತು ಉತ್ತರದ ಮೂಲಕ ತಿಳಿದುಕೊಳ್ಳೋಣ.
1. ಶ್ವಾಸಕೋಶದ ಕ್ಯಾನ್ಸರ್ ರಿಬ್ಬನ್ ಏಕೆ ಬಿಳಿ ಬಣ್ಣದಿಂದ ಪರಿಗಣಿಸಲಾಗುತ್ತದೆ ?
ಶ್ವಾಸಕೋಶದ ಕ್ಯಾನ್ಸರ್ ರಿಬ್ಬನ್ ಸಾಮಾನ್ಯವಾಗಿ ಬಿಳಿ ಅಥವಾ ಮುತ್ತಿನ ಬಣ್ಣದಿಂದ ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಶ್ವಾಸಕೋಶದ ಕ್ಯಾನ್ಸರ್ನಂತೆಯೇ ಕಂಡುಹಿಡಿಯುವುದು ಕಷ್ಟ.
ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದ `ಹೈಡಿ ಒಂಡಾ’ ಅವರ ಗೌರವಾರ್ಥವಾಗಿ ಶ್ವಾಸಕೋಶದ ರಿಬ್ಬನ್ ಬಣ್ಣವು ಬಿಳಿಯಾಗಿರುತ್ತದೆ ಮತ್ತು ಅವರು ಈ ನಿರ್ದಿಷ್ಟ ರೀತಿಯ ಕ್ಯಾನ್ಸರ್ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಲು ಬಯಸಿದ್ದರು.
2. ಶ್ವಾಸಕೋಶದ ಕ್ಯಾನ್ಸರ್ ಎಂದರೇನು ?
ಶ್ವಾಸಕೋಶದಲ್ಲಿ ಕಂಡು ಬರುವ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಾಗಿ ಅಥವಾ ಮನುಷ್ಯನ ಶ್ವಾಸಕೋಶದ ಭಾಗದಲ್ಲಿ ಕ್ಯಾನ್ಸರ್ ಕೋಶಗಳು ಕಂಡು ಬಂದರೆ ಅದನ್ನು ಶ್ವಾಸಕೋಶದ ಕ್ಯಾನ್ಸರ್ ಎಂದು ಕರೆಯುತ್ತಾರೆ.
ಶ್ವಾಸಕೋಶದ ಕ್ಯಾನ್ಸರ್ನಲ್ಲಿ ಎರಡು ವಿಧಗಳಿವೆ.
• ಸಣ್ಣ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್ (SCLC) ಮತ್ತು
• ನಾನ್- ಸ್ಮಾಲ್ ಶ್ವಾಸಕೋಶದ ಕ್ಯಾನ್ಸರ್ (NSCLS)
ಆರಂಭಿಕ ಹಂತದಲ್ಲಿ, ಯಾವುದೇ ರೋಗಲಕ್ಷಣಗಳು ಎಂದಿಗೂ ಕಂಡುಬರುವುದಿಲ್ಲ, ಆದ ಕಾರಣ ಶ್ವಾಸಕೋಶದ ಕ್ಯಾನ್ಸರ್ ರೋಗ ನಿರ್ಣಯ ತುಂಬಾ ಕಷ್ಟಕರ. ಹೀಗಾಗಿಯೇ ಇದು ಹೆಚ್ಚು ಆತಂಕ ಪಡುವ ವಿಷಯವಾಗಿದೆ.
• ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಕ್ಯಾನ್ಸರ್ ನಿಂದ ಉಂಟಾಗುತ್ತಿರುವ 5 ಸಾವುಗಳಲ್ಲಿ ಒಂದಾಗಿದೆ.
• ಶ್ವಾಸಕೋಶದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಒಂದೇ ದರದಲ್ಲಿ (11.6 ಪ್ರತಿಶತ) ರೋಗನಿರ್ಣಯ ಮಾಡಲಾಗುತ್ತದೆ ಎಂದು ಕೆಲವು ಸಂಶೋಧನಾ ವರದಿ ಪ್ರಕಾರ ವರದಿಯಾಗಿದೆ.
• ಶ್ವಾಸಕೋಶದ ಕ್ಯಾನ್ಸರ್, ಸ್ತನ , ಕೊಲೊನ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ಗಳಿಗಿಂತ ಹೆಚ್ಚು ಜೀವಗಳನ್ನು ಬಲಿ ಪಡೆಯುತ್ತಿದೆ.
• ಶ್ವಾಸಕೋಶದ ಕ್ಯಾನ್ಸರ್ನ ಸಾವುಗಳು 2030 ರವೇಳೆಗೆ 2.45 ಮಿಲಿಯನ್ ತಲುಪುತ್ತದೆ
ಎಂದು ವೈಜ್ಙಾನಿಕವಾಗಿ ಅಂದಾಜಿಸಲಾಗಿದೆ.
3. ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣಗಳು ಯಾವುವು ?
ಜೀವಿಸುವ ಪ್ರತಿಯೊಬ್ಬರಲ್ಲೂ ಕೂಡ ಕ್ಯಾನ್ಸರ್ ಸಮಸ್ಯೆ ಬರುತ್ತದೆ. ಎಂದರೆ ಅದು ತಪ್ಪಾಗುತ್ತದೆ. ಇದು ಕೆಲವು ದಟ್ಟವಾದ ಕಾರಣಗಳಿಂದ ಮಾತ್ರ ಕಂಡುಬರುತ್ತದೆ ಎಂದು ಹೇಳಬಹುದು.
1) ಧೂಮಪಾನ:- ಧೂಮಪಾನ ಮಾಡುವುದು ಶೇಕಡ 90% ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗಿ ಜನರನ್ನು ಕಾಡುತ್ತದೆ.
ಸಿಗರೇಟ್ ಅಥವಾ ಬೀಡಿಯಿಂದ ಹೊಗೆ ಎಳೆದುಕೊಂಡಾಗ ಅದು ನೇರವಾಗಿ ಶ್ವಾಸಕೋಶಕ್ಕೆ ಹೋಗಿ ಅಲ್ಲೆಲ್ಲ ಸುತ್ತು ಹೊಡೆದು ಶ್ವಾಸಕೋಶದ ಅಂಗಾಶಗಳನ್ನು ಹಾನಿ ಮತ್ತು ನಾಶವನ್ನು ಮಾಡುತ್ತದೆ.
ಒಂದು ಅಥವಾ ಎರಡು ಬಾರಿ ಈ ರೀತಿ ಆದರೆ ಶ್ವಾಸಕೋಶ ತಾನೇ ಇದನ್ನು ಸರಿ ಮಾಡಿಕೊಳ್ಳುತ್ತದೆ. ಆದರೆ ಪ್ರತಿದಿನವೂ ಅಥವಾ ದಿನಗಳಲ್ಲಿ/ ದಿನದಲ್ಲಿ ಹಲವು ಬಾರಿ ಇದೇ ರೀತಿ ಮುಂದುವರೆದರೆ ಸಂಪೂರ್ಣ ಶ್ವಾಸಕೋಶವೇ ಹಾಳಾಗಿ ಹೋಗುತ್ತದೆ. ಇದರಿಂದ ಶ್ವಾಸಕೋಶಗಳಲ್ಲಿ ಕಂಡು ಬರುವ ಸಣ್ಣ ಸಣ್ಣ ಜೀವ ಕೋಶಗಳು ಕ್ಯಾನ್ಸರ್ ಕೋಶಗಳಾಗಿ ಬದಲಾಗಿ ಉಸಿರಾಟದ ತೊಂದರೆಯನ್ನು ನೀಡುತ್ತದೆ.
ಪರೋಕ್ಷ ಧೂಮಪಾನ ಹೊಗೆ ( ಸೆಕೆಂಡ್ ಹ್ಯಾಂಡ್ ಸ್ಮೊಕಿಂಗ್) :-
ಧೂಮಪಾನ ಮಾಡದಿದ್ದರು ಸಹ ಸೆಕೆಂಡ್ ಹ್ಯಾಂಡ್ ಸ್ಮೊಕಿಂಗ್ ಹೊಗೆಗೆ ಒಡ್ಡಿಕೊಂಡರೆ ಅಥವಾ ಪರೊಕ್ಷವಾಗಿ ಧೂಮಪಾನದ ಹೊಗೆಯನ್ನು ಒಳಕ್ಕೆದುಕೊಂಡರು ಕೂಡ ಶ್ವಾಸಕೋಶದ ಕ್ಯಾನ್ಸರ್ ಅಪಾಯವು ದುಪ್ಪಟ್ಟು ಹೆಚ್ಚಾಗುತ್ತದೆ.
2) ರೇಡಾನ್ ಎಂಬುದು ಒಂದು ವರ್ಣ ರಹಿತ ಮತ್ತು ವಾಸನೆ ರಹಿತ ಅನಿಲವಾಗಿದ್ದು ವಿಕಿರ ಶೀಲಾ ರೇಡಿಯಂನ ವಿಗಟನೆಯಿಂದ ಅದು ಉತ್ಪಾದಿಸಲ್ಪಡುತ್ತದೆ. ಈ ನೈಸರ್ಗಿಕವಾದ ರೇಡಿಯೋ ಆಕ್ಟಿವ್ ಗ್ಯಾಸ್ ಧೂಮಪಾನ ಮಾಡದೆ ಇರುವವರಲ್ಲಿಯೂ ಕೂಡ ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಅಮೇರಿಕಾದ ಶ್ವಾಸಕೋಶದ ಸಂಘಟನೆ ಸ್ಪಷ್ಟಪಡಿಸಿದೆ.
3) ಕೆಲವೊಂದು ಹಾನಿಕಾರಕ ಪದಾರ್ಥಗಳಾದ ಆರ್ಸೇನಿಕ್, ಕ್ಯಾಡ್ಮಿಯಂ, ಕ್ರೋಮಿಯಂ, ನಿಖಲ್, ಯುರೇನಿಯಂ ಮತ್ತು ಕೆಲವು ಬಗೆಯ ಪೆಟ್ರೋಲಿಯಂ ಉತ್ಪನ್ನಗಳ ಒಡನಾಟದಲ್ಲಿ ಕೆಲಸ ಮಾಡುವವರಿಗೆ ಶ್ವಾಸಕೋಶದ ಕ್ಯಾನ್ಸರ್ ಕಂಡು ಬರುವ ಸಾಧ್ಯತೆ ಇರುತ್ತದೆ.
4) ವೈರಾಣುಗಳು :- ಮಾನವ ಪ್ಯಾಪಿಲ್ಲೋಮಾ ವೈರಾಣು, ಜೆಸಿ ವೈರಾಣು ಸೈಟೋಮೆಗಾಲೋ ವೈರಾಣು ಇತ್ಯಾದಿ.
ಈ ವೈರಾಣುಗಳು ಜೀವ ಕೋಶದ ಚಕ್ರದ ಮೇಲೆ ಪ್ರಭಾವ ಬೀರಬಹುದು ಮತ್ತು ಅಫೋಪ್ಟೋಸಿಸ್ ನು ಪ್ರತಿಬಂದಿಸಬಹುದು ಇದರಿಂದಾಗಿ ಅನಿಂತ್ರಿಕ ಜೀವಕೋಶ ವಿಭಜನೆಗೆ ಅವಕಾಶ ನೀಡಿದಂತಾಗುತ್ತದೆ.
4. ಶ್ವಾಸಕೋಶದ ಕ್ಯಾನ್ಸರ್ನ ರೋಗ ಲಕ್ಷಣಗಳು ಏನು?
* ಸಣ್ಣದಾಗಿ ಶುರುವಾದ ಕೆಮ್ಮು ಇದ್ದಕ್ಕಿದ್ದಂತೆ ವಿಪರೀತವಾಗುವುದು
ಕೆಮ್ಮುವಾಗ ಕಫ ಅಥವಾ ರಕ್ತ ಬೀಳವುದು.
* ಉಸಿರಾಡುವಾಗ, ಕೆಮ್ಮುವಾಗ ಅಥವಾ ನಗುವಾಗ ತುಂಬ ಎದೆ ನೋವು ಕಾಣಿಸುವುದು
* ಉಸಿರಾಟದ ತೊಂದರೆ ಎದ್ದು ಕಾಣುವುದು
* ದಮ್ಮು ಸಮಸ್ಯೆ
* ಆಯಾಸ ಮತ್ತು ದೇಹ ದೌರ್ಬಲ್ಯ
* ಹೊಟ್ಟೆ ಹಸಿವಾಗದಿರುವಿಕೆ ಜೊತೆಗೆ ದೇಹದ ತೂಕ ಕಡಿಮೆಯಾಗುವುದು.
* ಇದರ ಜೊತೆಗೆ ನ್ಯೂಮೋನಿಯ ಅಥವಾ ಬ್ರಾಕೈಟಿಸ್ ಸೋಂಕುಗಳನ್ನು ಒಳಗೊಂಡಿರುವುದು
ಇನ್ನು ಕೆಲವು ರೋಗ ಲಕ್ಷಣಗಳು
ಶ್ವಾಸಕೋಶದ ಕ್ಯಾನ್ಸರ್ ನಿಧಾನವಾಗಿ ಹಬ್ಬುತ್ತಿದ್ದಂತೆ. ಈ ಕೆಳಗಿನ ಬಗೆಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
• ನಿಮ್ಮ ಕುತ್ತಿಗೆ ಭಾಗದಲ್ಲಿ ಗಂಟು ಕಂಡು ಬರುವುದು.
• ಬೆನ್ನು, ಸೊಂಟ, ಎದೆ ಮತ್ತು ಪಕ್ಕೆ ಮೂಳೆಗಳಲ್ಲಿ ತುಂಬಾ ನೋವು ಶುರುವಾಗುವುದು.
• ಆಗಾಗ ವಿಪರೀತವಾಗಿ ಕಾಡುವ ತಲೆ ನೋವು, ತಲೆ ಸುತ್ತು , ಕೈ ಕಾಲುಗಳು ಮರ ಗಟ್ಟಿದಂತೆ ಆಗುವುದು, ನಡೆಯುವಾಗ ಸಮತೋಲನ ತಪ್ಪಿ ಬೀಳುವುದು ದೇಹದಲ್ಲಿ ಲಿವರ್ ಸರಿಯಾಗಿ ಕಾರ್ಯ ನಿರ್ವಹಣೆ ಮಾಡದೆ ಕಣ್ಣುಗಳು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು ಅಂದರೆ ಜಾಂಡಿಸ್ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ.
ಎದೆಯಲ್ಲಿ ದ್ರವ ( ಪ್ಲುರಲ್ ಎಪ್ಯೂಷನ್) ಮೇಲೆ ಹೇಳಿದ ಕೆಲವೊಂದು ರೋಗ ಲಕ್ಷಣಗಳು ಒಬ್ಬ ವ್ಯಕ್ತಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವ ಬಗ್ಗೆ ಸೂಚನೆಯನ್ನು ಕೊಡುತ್ತದೆ ಆದರೂ ಕೂಡ ರೋಗದ ಸರಿಯಾದ ನಿರ್ಣಯಕ್ಕೆ ಆಸ್ಪತ್ರೆಯಲ್ಲಿ ಕೆಲವೊಂದು ಪರೀಕ್ಷೆಗಳನ್ನು ಮಾಡಿ ಶ್ವಾಸಕೋಶದ ಕ್ಯಾನ್ಸರ್ ಇದೆ ಅಥವಾ ಇಲ್ಲ ಎಂಬುದನ್ನು ಪತ್ತೆ ಹಚ್ಚುತ್ತಾರೆ.
ಇದರಲ್ಲಿ ಪ್ರಮುಖವಾದ ಪರೀಕ್ಷೆಗಳು ಎಂದರೆ
1) ಇಮೇಜಿಗ್ ಟೆಸ್ಟ್, ಎಕ್ಸರೇ, ಎಂಆರ್ಐ, ಸಿಟಿಸ್ಯ್ಕಾನ್
2) ಮೀಡಿಯ ಸ್ಪಿನೋಸ್ಕೋಪಿ
3) ನೀಡಲ್ ಬಯೋಪ್ಸಿ
4) ಬ್ರೊಂಚೊಸ್ಕೋಪಿ
5) ಕಫದ ಪರೀಕ್ಷೆ.
ಶ್ವಾಸಕೋಶದ ಕ್ಯಾನ್ಸರ್ನಲ್ಲಿ ಎಷ್ಟು ಹಂತಗಳಿವೆ?
ಶ್ವಾಸಕೋಶದ ಕ್ಯಾನ್ಸರ್ ಒಬ್ಬ ವ್ಯಕ್ತಿಯಲ್ಲಿ ಪ್ರಮುಖವಾಗಿ ನಾಲ್ಕು ಹಂತಗಳಲ್ಲಿ ಕಾಣಿಸುತ್ತದೆ ಎಂದು ಹೇಳುತ್ತಾರೆ. ಒಂದೊಂದು ಹಂತದಲ್ಲಿ ಒಂದೊಂದು ಬಗೆಯ ಆರೋಗ್ಯ ವೈಪರೀತ್ಯಗಳು ಕಾಣಿಸುತ್ತವೆ.
ಹಂತ-01 : ಶ್ವಾಸಕೋಶದ ಕ್ಯಾನ್ಸರ್ ಕೇವಲ ಶ್ವಾಸಕೋಶದಲ್ಲಿ ಮಾತ್ರ ಇರುತ್ತದೆ. ಶ್ವಾಸಕೋಶದಿಂದ ಹೊರ ಭಾಗಕ್ಕೆ ಹಬ್ಬಿರುವುದಿಲ್ಲ.
ಚಿಕಿತ್ಸೆ : ಶ್ವಾಸಕೋಶದ ಕ್ಯಾನ್ಸರ್ ಭಾಧಿತ ಭಾಗವನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆದು ಹಾಕುವುದು ಕಿಮೋತೆರಪಿ ಕೂಡ ಮಾಡಬಹುದು.
ಹಂತ-02: ಕ್ಯಾನ್ಸರ್ ಕೋಶಗಳಿಂದ ತುಂಬಿರುವ ಶ್ವಾಸಕೋಶ ಮತ್ತು ಹತ್ತಿರದ ದುಗ್ಧರಸ ಗ್ರಂಥಿಗಳಲ್ಲಿ ಕಂಡು ಬರುವ ಕ್ಯಾನ್ಸರ್ ಸಮಸ್ಯೆ ಕಾಣಿಸುತ್ತದೆ.
ಚಿಕಿತ್ಸೆ : ಕ್ಯಾನ್ಸರ್ ಕೋಶಗಳಿಂದ ತುಂಬಿರುವ ಶ್ವಾಸಕೋಶದ ಸ್ವಲ್ಪ ಭಾಗವನ್ನು / ಸಂಪೂರ್ಣ ಶ್ವಾಸಕೋಶವನ್ನು ತೆಗೆದು ಹಾಕುವುದು. ಕಿಮೊತೆರಪಿ ಇಲ್ಲಿ ಅವಶ್ಯಕವಿರುತ್ತದೆ.
ಹಂತ-೦3: ಶ್ವಾಸಕೋಶ ಮತ್ತು ದುಗ್ಧರಸ ಗ್ರಂಥಿಗಳಲ್ಲಿರುವ ಕ್ಯಾನ್ಸರ್ ಸಮಸ್ಯೆ ಎದೆಯ ಮಧ್ಯ ಭಾಗದವರೆಗೂ ಹಬ್ಬುತ್ತದೆ.
ಹಂತ 03A : ದುಗ್ಧರಸ ಗ್ರಂಥಿಗಳಲ್ಲಿ ಕಂಡು ಬರುವ ಕ್ಯಾನ್ಸರ್ ಸಮಸ್ಯೆ.
ಅದುಪ್ರಾಂಭವಾದ ಎದೆಯ ಒಂದು ಕಡೆ ಭಾಗದಲ್ಲಿ ಮಾತ್ರ ಕಂಡು ಬರುತ್ತದೆ
ಹಂತ 3B : ಕ್ಯಾನ್ಸರ್ ಸಮಸ್ಯೆ ಶ್ವಾಸಕೋಶದಲ್ಲಿ ಪ್ರಾರಂಭವಾದ ಭಾಗದಿಂದ ಮತ್ತೊಂದು ಭಾಗದಲ್ಲಿರುವ ದುಗ್ಧರಸ ಗ್ರಂಥಿಗಳನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಬಿಡುತ್ತದೆ.
ಚಿಕಿತ್ಸೆ : ಕಿಮೋಥೆರಪಿ, ಶಸ್ತ್ರ ಚಿಕಿತ್ಸೆ ಮತ್ತು ರೇಡಿಯೇಶನ್ ಚಿಕಿತ್ಸೆಯ ಸಂಯೋಜನೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಾರೆ.
ಹಂತ-04 : ಇದು ಕೊನೆಯ ಹಂತವಾಗಿದ್ದು. ಇಲ್ಲಿ ಕ್ಯಾನ್ಸರ್ ಎರಡೂ ಶ್ವಾಸಕೊಶಗಳಿಗೆ ಹರಡಿ ದೇಹದ ಇತರ ಭಾಗಗಳಿಗೂ / ಅಂಗಾಗಗಳಿಗೂ ಕೂಡ ಹಬ್ಬಿರುತ್ತದೆ.
ಚಿಕಿತ್ಸೆ : ಕೊನೆಯ ಹಂತದ ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆಯನ್ನು ಹೊಂದಿದವರಿಗೆ ಈ ಹಂತದಲ್ಲಿ ಚಿಕಿತ್ಸೆಯ ನಂತರ ವ್ಯಕ್ತಿ ಬದುಕುಳಿಯುತ್ತಾನೆ ಎಂಬ ಯಾವುದೇ ಗ್ಯಾರಂಟಿಯನ್ನು ವೈದ್ಯರು ಕೊಡುವುದಿಲ್ಲ. ಶಸ್ತ್ರ ಚಿಕಿತ್ಸೆ ರೇಡಿಯೇಶನ್ ಕಿಮೋಥೆರಪಿ, ಇಮ್ಮುನಥೆರಪಿ, ಟಾರ್ಗೆಟ್ ತರಪಿ ಚಿಕಿತ್ಸೆಗಳು ಇಲ್ಲಿ ನೀಡಲಾಗುತ್ತದೆ.
ಶ್ವಾಸಕೋಶದ ಕ್ಯಾನ್ಸರ್ ಬರದಂತೆ ನೋಡಿಕೊಳ್ಳುವುದು ಹೇಗೆ ?
ಶ್ವಾಸಕೋಶದ ಕ್ಯಾನ್ಸರ್ ಬರದಂತೆ ನೋಡಿಕೊಳ್ಳಲು ಧೂಮಪಾನ ತ್ಯಜಿಸುವುದು ಮುಖ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹೊಗೆಯನ್ನು ಉಸಿರಾಡುವುದು ಧೂಮಪಾನಕ್ಕಿಂತ ಹೆಚ್ಚು ಅಪಾಯಕಾರಿ.
ಗಾಳಿಯಲ್ಲಿರುವ ಧೂಳು ಮತ್ತು ಹೊಗೆಯನ್ನು ಒಳಕ್ಕೆಳೆದುಕೊಳ್ಳುವುದು ಅನಾರೋಗ್ಯಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕಾಗಿ ಹೊರಗೆ ಹೋಗುವಾಗ ಮಾಸ್ಕ ಧರಿಸಿ.
ಆರೋಗ್ಯಕರ ಆಹಾರವು ಒಟ್ಟಾರೆ ಆರೋಗ್ಯದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಬಹುದು. ಸರಿಯಾದ ಸಮಯಕ್ಕೆ ತಿನ್ನಿರಿ ಮತ್ತು ನಿಮ್ಮ ಆಹಾರದಲ್ಲಿ ಸಾಧ್ಯವಾದಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ.
ಆಹಾರದ ಜೊತೆಗೆ ಸರಿಯಾದ ವ್ಯಾಯಾಮ ಮಾಡುವುದು ಬಹಳ ಮುಖ್ಯ, ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.
ಶ್ವಾಸಕೋಶದ ಕ್ಯಾನ್ಸರ್ ಒಂದು ಮತ್ತು ಎರಡನೇ ಹಂತದಲ್ಲಿದ್ದರೆ ಈ ಕೆಳಗಿನ ಪದ್ದತಿಯನ್ನು ಪ್ರಯತ್ನಿಸಬಹುದು. ಅಷ್ಟೇನು ಪರಿಣಮಕಾರಿಯಾಗಿ ಕೆಲಸ ಮಾಡದಿದ್ದರೂ ಕೂಡ ಒಂದು ಹಂತಕ್ಕೆ ನಿಮ್ಮ ಆರೋಗ್ಯವನ್ನು ಕಾಪಾಡುವ ಭರವಸೆ ನೀಡುತ್ತದೆ.
* ಒಳ್ಳೆಯ ಅನುಭವಿ ಮಸಾಜ್ ತೆರಪಿಸ್ಟ್ ಬಳಿ ನೋವು ನಿರ್ವರಣೆಗೆ ಮಸಾಜ್ಗೆ ಒಳಗಾಗುವುದು
* ಆಕ್ಯುಪಂಕ್ಟರ್ ಪದ್ದತಿಯನ್ನು ಅನುಸರಿಸುವುದು.
* ಧ್ಯಾನ ಮಾಡುವುದು
* ಯೋಗಾಭ್ಯಾಸ ಮಾಡುವುದು.
ಕೊನೆ ಮಾತು:
ಮನುಷ್ಯನಿಗೆ ಎದುರಾಗುವ ಹಲವಾರು ಆರೋಗ್ಯ ಸಮಸ್ಯೆಯಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆ ತುಂಭಾ ಗಂಭೀರ ಸ್ವರೂಪದ್ದಾಗಿರುತ್ತದೆ, ಕೇವಲ ಕಾಯಿಲೆಯನ್ನು ಒಳಗೊಂಡ ವ್ಯಕ್ತಿ ಮಾತ್ರವಲ್ಲದೆ ಆತನ ಮನೆಯವರು ಬಂಧು-ಮಿತ್ರರು ಮಾನಸಿಕವಾಗಿ ಕುಗ್ಗಿಹೋಗಿರುತ್ತಾರೆ.
ಅಷ್ಟೇ ಅಲ್ಲದೆ ವೈದ್ಯರೂ ಕೂಡ ೩ ನೇ ಹಂತದ ಶ್ವಾಸಕೋಶದ ಕ್ಯಾನ್ಸರ್ ಹೊಂದಿದ ವ್ಯಕ್ತಿಗೆ ಚಿಕಿತ್ಸೆ ಕೊಡುವುದು ದೊಡ್ಡ ಸವಾಲಿನ ಕೆಲಸ ಎಂದು ನಮಗೆಲ್ಲಾ ತಿಳಿದಿದೆ.
ಆದರೆ 3 ನೇ ಹಂತದ ಶ್ವಾಸಕೋಶದ ಕ್ಯಾನ್ಸರ್ ನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ ಆದರ ಪರಿಣಾಮಕಾರಿಯಾದ ಚಿಕಿತ್ಸೆಯಿಂದ ಕಾಯಿಲೆಯ ತೀವ್ರತೆಯನ್ನು ಕಡಿಮೆ ಮಾಡಬಹುದು ಮತ್ತು ವ್ಯಕ್ತಿಯ ಆಯಸನ್ನು ಹೆಚ್ಚಿಸಬಹುದು.
ಸದ್ಯಕ್ಕೆ ಶ್ವಾಸಕೋಶದ ಕ್ಯಾನ್ಸರ್ ಹೊಂದಿದ ವ್ಯಕ್ತಿ ಆರೋಗ್ಯಕರ ಜೀವನ ಶೈಲಿಯನ್ನು ರೂಪಿಸಿಕೊಂಡು ತನ್ನು ಕಾಯಿಲೆಯ ಬಗೆಗ ಸದಾ ಅರಿವನ್ನು ಹೊಂದಿದ್ದರೆ ತನ್ನ ಕುಟುಂಬದವ ಜೊತೆ ಆರೋಗ್ಯಕರವಾಗಿ ಜೀವಿಸಬಹುದು ಎಂಬುದು ವೈದ್ಯರ ಕೊನೆಮಾತು.
ಈ ಮಾಹಿತಿಯನ್ನು ಸಾರ್ವಜನಿಕರ ಉಪಯೋಕ್ಕಾಗಿ ಮತ್ತು ಸದ್ದುದೇಶದಿಂದ ಬರೆಯಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw