ಆಘಾತ: ರಶ್ಯದ ಫುಡ್ ಡಯಟ್ ಪ್ರಚಾರಕಿ ಹಸಿವೆಯಿಂದ ಸಾವು..!
ಸಂಪೂರ್ಣವಾಗಿ ಕಚ್ಚಾ ವೇಗನ್ ಅರ್ಥಾತ್ ಸಸ್ಯಜನ್ಯ ಆಹಾರವನ್ನು ಸೇವಿಸುತ್ತಿದ್ದ ರಶ್ಯದ ಪ್ರಜೆ, ವೇಗನ್ ಪ್ರಭಾವಿ ಝನ್ನಾ ಸ್ಯಾಮ್ಸೊನೋವಾ ಅವರು ನಿಧನರಾಗಿದ್ದಾರೆ. ಅವರಿಗೆ 39 ವರ್ಷವಾಗಿತ್ತು.
ಹಸಿವೆಯಿಂದ ಅವರ ಸಾವು ಸಂಭವಿಸಿದೆ ಎನ್ನಲಾಗಿದೆ.
ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಚ್ಚಾ ಆಹಾರಗಳನ್ನು ಪ್ರಚಾರ ಮಾಡುತ್ತಿದ್ದ ಝನ್ನಾ ಕನಿಷ್ಠ ನಾಲ್ಕು ವರ್ಷಗಳಿಂದ ಸಂಪೂರ್ಣ ಕಚ್ಚಾ ವೇಗನ್ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು. ಅವರು ಕೇವಲ ಹಣ್ಣುಗಳು, ಮೊಳಕೆ ಬರಿಸಿದ ಸೂರ್ಯಕಾಂತಿ ಬೀಜಗಳು, ಹಣ್ಣುಗಳ ರಸಗಳನ್ನು ಸೇವಿಸುತ್ತಿದ್ದರು.
ತನ್ನ ಮಗಳ ಸಾವಿಗೆ ‘ಕಾಲರಾ ತರಹದ ಸೋಂಕು ’ ಕಾರಣವೆಂದು ಝನ್ನಾರ ತಾಯಿ ಹೇಳಿದ್ದು, ಅವರ ಸಾವಿಗೆ ಅಧಿಕೃತ ಕಾರಣವನ್ನು ಘೋಷಿಸಲಾಗಿಲ್ಲ. ತಮ್ಮ ಪುತ್ರಿಯ ಸಾವಿಗೆ ಕಾರಣವನ್ನು ನಿರ್ಧರಿಸುವ ವೈದ್ಯಕೀಯ ವರದಿ ಮತ್ತು ಮರಣ ಪ್ರಮಾಣಪತ್ರಕ್ಕಾಗಿ ಕುಟುಂಬವು ಕಾಯುತ್ತಿದ್ದು, ಆಲ್ – ವೀಗನ್ ಡಯಟ್ನಿಂದ ಬಳಲಿಕೆ ಮತ್ತು ಅವಳ ದೇಹದ ಮೇಲೆ ಒತ್ತಡ ಉಂಟಾಗಿ ಮೃತಟ್ಟಿರಬಹುದು ಎಂದೂ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ನಿರ್ಬಂಧಿತ ಆಹಾರ ಕ್ರಮವನ್ನು ಬಣ್ಣಿಸುವಾಗ ಝನ್ನಾ,‘ನನ್ನ ಶರೀರ ಮತ್ತು ಮನಸ್ಸು ಪ್ರತಿದಿನ ಪರಿವರ್ತನೆಗೊಳ್ಳುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಹೊಸ ರೂಪದಲ್ಲಿರುವ ನನ್ನನ್ನೇ ನಾನು ಪ್ರೀತಿಸುತ್ತೇನೆ, ನನ್ನ ಹಳೆಯ ಅಭ್ಯಾಸಗಳಿಗೆ ಎಂದೂ ಮರಳುವುದಿಲ್ಲ’ ಎಂದು ಹೇಳಿಕೊಂಡಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw