ಜಾಮೀನಿಗಾಗಿ ವಕೀಲರನ್ನೇ ಕಿಡ್ನಾಪ್ ರೌಡಿಶೀಟರ್
ಬೆಂಗಳೂರು:ಜಾಮೀನಿಗಾಗಿ ವಕೀಲರನ್ನೇ ಕಿಡ್ನಾಪ್ ಮಾಡಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.ಜೈಲಿನಲ್ಲಿರುವ ತನ್ನ ಕಡೆಯ 8 ಜನರಿಗೆ ಜಾಮೀನು ಕೊಡಿಸಲು ಮೂರು ಜನ ರೌಡಿಶೀಟರ್ ವಕೀಲ ಗಿರಿಧರ್‌ನನ್ನು ಕಿಡ್ನಾಪ್ ಮಾಡಿದ್ದಲ್ಲದೇ ವಕೀಲರಿಂದ ಹಣಕಸಿದುಕೊಂಡಿದ್ದಾರೆ.
ವಕೀಲ ಗಿರಧರ್ ಎಂಬುವವರನ್ನು ಅವರ ಕಾರ್‌ನಲ್ಲೇ ಅಪಹರಿಸಿ ಜೈಲಿನಲ್ಲಿರುವ ತಮ್ಮ ಕಡೆಯ 8 ಜನರಿಗೂ ಬೇಲ್ ವ್ಯವಸ್ಥೆ ಮಾಡಬೇಕು ಎಂದು ಹೇಳಿ, ಬ ಳಿಕ ವಕೀಲರ ಬಟ್ಟೆ ಬಿಚ್ಚಿಸಿ ಕಾರಿನ ಜಾಕ್ ರಾಡ್ ಹಾಗೂ ಸ್ಪಾನರ್ ಬಳಸಿ ಹಲ್ಲೆ ಮಾಡಲಾಗಿದೆ. 5 ಲಕ್ಷ ರೂ. ಹಣ ತಂದು ಕೊಡಬೇಕು ಅಲ್ಲದೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾರೆ. ಬಳಿಕ ಗಿರಿಧರ್ ರಿಂದ 10 ಸಾವಿರ ರೂ. ಕಸಿದುಕೊಂಡು ಕಳಿಸಿದ್ದಾರೆ.
ರೌಡಿಶೀಟರ್ ಗಳಾದ ರಾಜೇಶ್ ಅಲಿಯಾಸ್ ಕೋಳಿ ರಾಜೇಶ್, ಹರ್ಷಿತ್ ಅಲಿಯಾಸ್ ಆಪಲ್, ಜಾನ್ ಹಾಗೂ ಭರತ್ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಟಗಿದ್ದಯ, ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw