ಜನಪದ ಗೀತೆ ಗಾಯನ | ಡಾ.ಗಂಗೂಬಾಯಿ ಹಾನಗಲ್ ಸಂಗೀತ,  ಪ್ರದರ್ಶಕ ಕಲೆಗಳ ವಿ.ವಿ. ಮೈಸೂರು  ತಂಡ ಪ್ರಥಮ - Mahanayaka
9:55 PM Saturday 9 - November 2024

ಜನಪದ ಗೀತೆ ಗಾಯನ | ಡಾ.ಗಂಗೂಬಾಯಿ ಹಾನಗಲ್ ಸಂಗೀತ,  ಪ್ರದರ್ಶಕ ಕಲೆಗಳ ವಿ.ವಿ. ಮೈಸೂರು  ತಂಡ ಪ್ರಥಮ

30/01/2021

ರಾಮನಗರ: ರಾಮನಗರದಲ್ಲಿ ನಡೆದ ರಾಜ್ಯ ಮಟ್ಟದ ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು  ಪ್ರಥಮ ಬಹುಮಾನ ಪಡೆದಿದೆ.

ರಾಮನಗರ ಜಾನಪದ ಲೋಕದಲ್ಲಿ ಹೆಚ್.ಎನ್.ನಂಜರಾಜ್ ಸ್ಮರಣಾರ್ಥ ಗುರುವಾರ ನಡೆದ ರಾಜ್ಯ ಮಟ್ಟದ ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಪಡೆದಿದ್ದಾರೆ.

ತಂಡದ ವಿಶ್ವನಾಥ್ ಎಲ್ ಚಂಗಚಹಳ್ಳಿ, ದೀಪಕ್ ನಾಗಣ್ಣವರ್, ರಶ್ಮಿ,ಮನೋಜ್, ಪುನೀತ್, ನಾಗರತ್ನ, ಹಾಗೂ ಸ್ಪೂರ್ತಿ ಯವರು ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡು 10,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಪಡೆದಿದ್ದಾರೆ. ವಿಜೇತರನ್ನು  ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ನಾಗೇಶ್ ವಿ ಬೆಟ್ಟಕೋಟೆಯವರು ಅಭಿನಂದಿಸಿದ್ದಾರೆ

ಇತ್ತೀಚಿನ ಸುದ್ದಿ