ಮಳೆ ಮಧ್ಯೆ ಕಿರಿಯರ ಮೇಲೆ ಹಿರಿಯ ವಿದ್ಯಾರ್ಥಿಗಳ ದೌರ್ಜನ್ಯ: ಅಮಾನುಷ ವೀಡಿಯೋ ವೈರಲ್ - Mahanayaka

ಮಳೆ ಮಧ್ಯೆ ಕಿರಿಯರ ಮೇಲೆ ಹಿರಿಯ ವಿದ್ಯಾರ್ಥಿಗಳ ದೌರ್ಜನ್ಯ: ಅಮಾನುಷ ವೀಡಿಯೋ ವೈರಲ್

03/08/2023

ಮುಂಬೈ ಸಮೀಪದ ಥಾಣೆಯ ಕೆಜಿ ಜೋಶಿ ಕಾಲೇಜ್ ಆಫ್ ಆರ್ಟ್ಸ್ ಮತ್ತು ಎನ್‌ ಜಿ ಬೇಡಕರ್ ಕಾಲೇಜ್ ಆಫ್ ಕಾಮರ್ಸ್ (ಸ್ವಾಯತ್ತ)ದಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ತರಬೇತಿ ವೇಳೆ ಕಿರಿಯ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳು ಕೋಲಿನಿಂದ ಥಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.


Provided by

ಮುಂಬೈನಲ್ಲಿ ಸುರಿಯುತ್ತಿರುವ ಮಳೆಯ ಮಧ್ಯೆ ಎಂಟು ಯುವಕರನ್ನು ಕೆಸರು ನೀರಿನಲ್ಲಿ ಪುಶ್-ಅಪ್‌ ಮಾಡುವಂತೆ ಒತ್ತಾಯಿಸಲಾಗುತ್ತದೆ. ಆ ಹುಡುಗರ ಮುಖವನ್ನು ನೀರಲ್ಲಿ ಮುಳುಗಿಸಿ ಆಮೇಲೆ ಯುವಕನೊಬ್ಬ ದೊಡ್ಡ ಕೋಲಿನಿಂದ ಅವರ ಬೆನ್ನಿಗೆ ಬಾರಿಸುತ್ತಿರುವುದು ಈ ವೀಡಿಯೊದಲ್ಲಿದೆ.

ಕೋಲು ಹಿಡಿದು ಬಾರಿಸುತ್ತಿರುವವ ಹಿರಿಯ ಎನ್‌ ಸಿಸಿ ಕೆಡೆಟ್. ಕಠಿಣ ಕಸರತ್ತನ್ನು ಪೂರ್ಣಗೊಳಿಸಲು ವಿಫಲರಾದ ಎನ್‌ ಸಿಸಿ ಕೆಡೆಟ್‌ ಗಳಿಗೆ ಈ ರೀತಿ ಶಿಕ್ಷೆ ನೀಡಲಾಗಿದ್ದು, ಇದನ್ನು ಕಾಲೇಜಿನ ವಿದ್ಯಾರ್ಥಿಯೊಬ್ಬ ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿದ್ದಾನೆ.


Provided by

ಇಂತಹ ವರ್ತನೆಯನ್ನು ನಾವು ಸಹಿಸುವುದಿಲ್ಲ ಹಿರಿಯ ವಿದ್ಯಾರ್ಥಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ನಾಯ್ಕ್ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ