18 ವರ್ಷಗಳ ದಾಂಪತ್ಯಕ್ಕೆ ಬ್ರೇಕ್: ಪತ್ನಿಯಿಂದ ದೂರವಾದ ಕೆನಡಾ ಪ್ರಧಾನಿ

ಅವರು ದೇಶವೊಂದರ ಪ್ರಧಾನಿ. ಅವ್ರದ್ದು ಬರೋಬ್ಬರಿ 18 ವರ್ಷಗಳ ದಾಂಪತ್ಯ ಜೀವನ. ಮಧ್ಯೆ ಬಂದೇಬಿಡ್ತು ಬಿರುಗಾಳಿ. ಹೌದು. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಪತ್ನಿ ಸೋಫಿ ವಿಚ್ಛೇದನ ಪಡೆದಿದ್ದಾರೆ. ಈ ಮೂಲಕ ತಮ್ಮ 18 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ.
ಜಸ್ಟಿನ್ ಟ್ರುಡೊ ಹಾಗೂ ಪತ್ನಿ ಸೋಫಿ ಈ ಹಿಂದೆ ದಾಂಪತ್ಯ ಜೀವನ ಸರಿಯಾಗಿಲ್ಲ ಎಂದು ಹೇಳಿಕೊಂಡಿದ್ದರು. ಅಲ್ಲದೇ ಸಾರ್ವಜನಿಕವಾಗಿ ಒಟ್ಟಿಗೆ ಓಡಾಡುವುದನ್ನು ನಿಲ್ಲಿಸಿದ್ದರು. ಅಂತಿಮವಾಗಿ ವಿಚ್ಛೇದನ ಪದೆದಿರುವುದಾಗಿ ಘೋಷಿಸಿದ್ದಾರೆ. ಮೇ 2005ರಲ್ಲಿ ವಿವಾಹವಾಗಿದ್ದ ಟ್ರುಡೊ ಹಾಗೂ ಸೋಫಿಗೆ ಮೂರು ಮಕ್ಕಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಟ್ರುಡೊ, 2015ರಲ್ಲಿ ಕೆನಡಾದ ಪ್ರಧಾನಿಯಾದ ನಂತರ ದಾಂಪತ್ಯದಲ್ಲಿನ ಬಿಕ್ಕಟ್ಟು ಹೆಚ್ಚಾಯಿತು. ಸೋಫಿ ಮತ್ತು ನಾನು ಅನೇಕ ಅರ್ಥಪೂರ್ಣ ಮತ್ತು ಕಷ್ಟಕರ ದಿನಗಳನ್ನು ಕಳೆದಿದ್ದೇವೆ. ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw