ನನಗೆ ಮದುವೆ ಆಗಿ 45 ವರ್ಷ ಆದ್ರೂ ಎಂದಿಗೂ ಕೋಪಗೊಂಡಿಲ್ಲ ಎಂದು ಹೇಳಿ ನಗೆ ಬೀರಿದ ರಾಜ್ಯಸಭೆಯ ಸಭಾಪತಿ..! - Mahanayaka
8:40 AM Saturday 21 - September 2024

ನನಗೆ ಮದುವೆ ಆಗಿ 45 ವರ್ಷ ಆದ್ರೂ ಎಂದಿಗೂ ಕೋಪಗೊಂಡಿಲ್ಲ ಎಂದು ಹೇಳಿ ನಗೆ ಬೀರಿದ ರಾಜ್ಯಸಭೆಯ ಸಭಾಪತಿ..!

03/08/2023

ರಾಜ್ಯಸಭೆ ವಿಶೇಷ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್ಖರ್ ನಡುವಿನ ಮಾತಿನ ಚಕಮಕಿ ವೇಳೆ ಈ ಹಾಸ್ಯದೋಕುಳಿ ನಡೆಯಿತು. ರಾಜ್ಯಸಭೆಯ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ನಿಯಮ 267ರ ಅಡಿಯಲ್ಲಿ ಮಣಿಪುರದಲ್ಲಿ ನಡೆದ ಹಿಂಸಾಚಾರದ ಚರ್ಚೆಯ ಪರವಾಗಿ ಕಾಂಗ್ರೆಸ್ ಅಧ್ಯಕ್ಷರು ವಾದಿಸುತ್ತಿದ್ದರು. ಆಗ ಅಧ್ಯಕ್ಷರು, ಅಲ್ಪಾವಧಿಯ ಚರ್ಚೆಗೆ ಅವಕಾಶ ಕಲ್ಪಿಸುವ ನಿಯಮ 176 ರ ಅಡಿಯಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ನಿಯಮ 267ರ ಅಡಿಯಲ್ಲಿ ಚರ್ಚೆ ನಡೆಸಲು ಕಾರಣವನ್ನು ತಿಳಿಸಿದ್ದೇವೆ. ನಿನ್ನೆ ನಾನು ನಿಮ್ಮಲ್ಲಿ ವಿನಂತಿಸಿದೆ, ಆದರೆ ನೀವು ಬಹುಶಃ ಕೋಪಗೊಂಡಿದ್ದೀರಿ ಖರ್ಗೆ ಹೇಳಿದರು. ಇದಕ್ಕೆ ಸಭಾಪತಿಯವರು ನಗುತ್ತಾ, ‘ನಾನು ಮದುವೆಯಾಗಿ 45 ವರ್ಷಗಳೇ ಕಳೆಯಿತು. ನಾನು ಎಂದಿಗೂ ಕೋಪಗೊಂಡಿಲ್ಲ ಎಂದಾಗ ಸದನದಲ್ಲಿ ನಗೆಗಡಲು. ನಂತರ ಅವರು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರನ್ನು ಉಲ್ಲೇಖಿಸಿ, ಅತ್ಯಂತ ಪ್ರತಿಷ್ಠಿತ ಹಿರಿಯ ವಕೀಲರಾದ ಚಿದಂಬರಂ ಅವರಿಗೆ ತಿಳಿದಿದೆ. ನಮ್ಮ ಕೋಪವನ್ನು ಕನಿಷ್ಠ ಅಧಿಕಾರಿ ಮೇಲಾದರೂ ತೋರಿಸಲು ನಮಗೆ ಹಕ್ಕಿಲ್ಲ. ನೀವು (ಖರ್ಗೆ) ಒಬ್ಬ ಅಧಿಕಾರಿ ಸರ್ ಎಂದಿದ್ದಾರೆ.


Provided by

ಖರ್ಗೆ ಅವರ ಟೀಕೆಯಲ್ಲೂ ಮಾರ್ಪಾಡು ಮಾಡುವಂತೆ ಸಭಾಪತಿ ಒತ್ತಾಯಿಸಿದಾಗ ಕಾಂಗ್ರೆಸ್ ಅಧ್ಯಕ್ಷರು ನೀವು ಒಳಗೆ ಕೋಪಗೊಂಡಿದ್ದೀರಿ. ನೀವು ಅದನ್ನು ತೋರಿಸುತ್ತಿಲ್ಲ ಎಂದಿದ್ದಾರೆ. ಇದನ್ನು ಕೇಳಿ ಸದನದಲ್ಲಿ ಅಧ್ಯಕ್ಷರೂ ಸೇರಿ ಎಲ್ಲರೂ ನಗಲು ಶುರು ಮಾಡಿದರು.

ನಿಯಮ 267ರ ಅಡಿಯಲ್ಲಿ ಚರ್ಚೆ ನಡೆಸುವುದು ಏಕೆ ಎಂಬ ಬಗ್ಗೆ ಪ್ರತಿಪಕ್ಷಗಳ ವಾದಗಳ ಹೊರತಾಗಿಯೂ ಈ ನಿಯಮದಡಿಯಲ್ಲಿ ಚರ್ಚೆ ನಡೆಸಲು ಯಾವುದೇ ಕಾರಣವಿಲ್ಲ ಎಂದು ಅಧ್ಯಕ್ಷರು ಹೇಳಿದ್ದಾರೆ ಎಂದು ಖರ್ಗೆ ಪುನರುಚ್ಚರಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ