ಧರ್ಮಸ್ಥಳ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸೌಜನ್ಯಳ ತಾಯಿಯನ್ನು ತಳ್ಳಾಡಿದ ಭಕ್ತರು!: ಕಣ್ಣೀರು ಹಾಕಿದ ತಾಯಿ
ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದದ ನೇತೃತ್ವದಲ್ಲಿ ಧರ್ಮಸ್ಥಳದ ವಿರುದ್ದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ದ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಸೌಜನ್ಯ ಪ್ರಕರಣದ ಬಗ್ಗೆ ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಉಜಿರೆ ಜನಾರ್ದನ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯ ಬಳಿಕ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಎಸ್.ಡಿಎಂ ಕಾಲೇಜಿನ ವರೆಗೆ ಮೆರವಣಿಗೆ ನಡೆಯಿತು ಎಸ್. ಡಿ.ಎಂ ಕಾಲೇಜಿನ ಎದುರು ಪ್ರತಿಭಟನಾಕಾರರು ಆಗಮಿಸುವ ವೇಳೆ ಸೌಜನ್ಯಳ ತಾಯಿ ಕುಸುಮಾವತಿ ಅವರೂ ಅಲ್ಲಿಗೆ ಆಗಮಿಸಿದ್ರು. ಈ ವೇಳೆ ಅಲ್ಲಿ ನೂಕು ನುಗ್ಗಲು ಸಂಭವಿಸಿತು.
ಕುಸುಮಾವತಿ ಅವರನ್ನು ವೇದಿಕೆ ಬಳಿ ಹೋಗಲು ಪ್ರತಿಭಟನಾಕಾರರು ಅವಕಾಶ ನೀಡಲಿಲ್ಲ ಹಾಗೂ ಕುಸುಮಾವತಿ ಅವರನ್ನು ಹಾಗೂ ಅವರೊಂದಿಗೆ ಬಂದ ಮಕ್ಕಳನ್ನು ಹಾಗೂ ಇತರರನ್ನು ಪ್ರತಿಭಟನಾಕಾರರು ತಳ್ಳಾಡಿದ್ದಾರೆ. ಅವರು ಇಲ್ಲಿಗೆ ಯಾಕೆ ಬಂದರು ಎಂದು ಪ್ರತಿಭಟನಾಕಾರರ ಗುಂಪು ಆಕ್ರೋಶ ವ್ಯಕ್ತಪಡಿಸಿ ಕೂಗಾಟ ನಡೆಸಿದರು.
ಕುಸುಮಾವತಿ ಅವರು ವೇದಿಕೆ ಹತ್ತಲು ಹೋದಾಗ ಅದಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಪೊಲೀಸರು ಅವರನ್ನು ಅಲ್ಲಿಯೇ ತಡೆದರು. ಕೆಲ ಹೊತ್ತು ಇಲ್ಲಿ ಗೊಂದಲದ ವಾತಾವರಣ ಮುಂದುವರಿಯಿತು.
ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದ್ರು. ಸೌಜನ್ಯಳಿಗೆ ನ್ಯಾಯಕೇಳಿ ನಡೆಯುವ ಹೋರಾಟ ಎಂದು ಹೇಳಿದ್ದರು. ಅದಕ್ಕಾಗಿ ಸೌಜನ್ಯ ಕುಟುಂಬಸ್ಥರು ಅಲ್ಲಿಗೆ ಹೋಗಿದ್ದಾರೆ. ಆದರೆ ಅವರಿಗೆ ವೇದಿಕೆಗೆ ಹತ್ತಲು ಅವಕಾಶ ನೀಡಲಿಲ್ಲ. ಸೌಜನ್ಯಳ ತಾಯಿ ಕುಸುಮಾವತಿಯನ್ನು ತಳ್ಳಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw