ಮೇಯರ್ ಪತ್ನಿ ಹೆಸರಲ್ಲಿ ಪತಿಯ ಲಂಚದಾಟ: ಗಂಡ ಮಾಡಿದ ತಪ್ಪಿಗೆ ಮೇಯರ್ ಸ್ಥಾನ ಕಳೆದುಕೊಂಡ ಹೆಂಡ್ತಿ..! - Mahanayaka
11:24 PM Thursday 12 - December 2024

ಮೇಯರ್ ಪತ್ನಿ ಹೆಸರಲ್ಲಿ ಪತಿಯ ಲಂಚದಾಟ: ಗಂಡ ಮಾಡಿದ ತಪ್ಪಿಗೆ ಮೇಯರ್ ಸ್ಥಾನ ಕಳೆದುಕೊಂಡ ಹೆಂಡ್ತಿ..!

06/08/2023

ಜೈಪುರದ ಮಹಾನಗರ ಪಾಲಿಕೆಯ ಮೇಯರ್ ಮುನೇಶ್ ಗುರ್ಜರ್ ಅವರ ಮನೆ ಮೇಲೆ ಎಸಿಬಿ ದಾಳಿ ಮಾಡಿದೆ. ಮೇಯರ್ ಮುನೇಶ್ ಗುರ್ಜಾರ್ ವಿರುದ್ಧ ಜೈಪುರ ಎಸಿಬಿಗೆ ಎರಡು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ತಿಳಿದು ಬಂತು. ಇದಾದ ನಂತರ ಜೈಪುರ ಎಸಿಬಿ ತಂಡ ಮೇಯರ್ ಮೇಲೆ ಕಣ್ಣಿಟ್ಟಿತ್ತು. ಜೈಪುರ ಎಸಿಬಿ ತಂಡವು ಮೇಯರ್ ಕಚೇರಿಯ ಎಲ್ಲಾ ಬಾಗಿಲುಗಳು ಮತ್ತು ಕಪಾಟುಗಳನ್ನು ಸೀಲ್ ಮಾಡಿದೆ.
ಮೇಯರ್ ಮುನೇಶ್ ಗುರ್ಜಾರ್ ಅವರ ಪತಿ ಸುಶೀಲ್ ಗುರ್ಜಾರ್ ಅವರು ಜಮೀನು ಗುತ್ತಿಗೆಗಾಗಿ ದಲ್ಲಾಳಿಗಳ ಮೂಲಕ ಎರಡು ಲಕ್ಷ ರೂಪಾಯಿ ಲಂಚ ಪಡೆದಿದ್ದರು. ಹೀಗಾಗಿ ಎಸಿಬಿ ತಂಡವು ಅವರನ್ನು ಬಲೆಗೆ ಬೀಳಿಸಿದೆ.
ಜೈಪುರ ಹೆರಿಟೇಜ್ ಮುನ್ಸಿಪಲ್ ಕಾರ್ಪೊರೇಷನ್​ ಮೇಯರ್​ ಮುನೇಶ್ ಗುರ್ಜನ್ ಅವರ ಪತಿ ಸುಶೀಲ್ ಗುರ್ಜನ್ ಭೂ ದಾಖಲೆಗಳ ವಿತರಣೆಗೆ ಸಂಬಂಧಿಸಿದಂತೆ 2 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಅವರನ್ನು ಅಮಾನತುಗೊಳಿಸಿ ರಾಜ್ಯ ಸ್ಥಳೀಯ ಸ್ವಯಂ ಆಡಳಿತ ಇಲಾಖೆ ಆದೇಶ ಹೊರಡಿಸಿದೆ.
ಮುನೇಶ್ ಗುರ್ಜರ್ ಅವರ ಪತಿ ಸುಶೀಲ್ ಗುರ್ಜರ್ ಮತ್ತು ಇತರ ಆರೋಪಿ ನಾರಾಯಣ್ ಸಿಂಗ್ ಮತ್ತು ಅನಿಲ್ ದುಬೆ ಅವರನ್ನು ಭ್ರಷ್ಟಾಚಾರ ನಿಗ್ರಹ ದಳವು ಭೂ ಗುತ್ತಿಗೆ ನೀಡುವ ಬದಲು 2 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಬಂಧಿಸಿದೆ. ನಂತರ ಅಧಿಕಾರಿಗಳು ಗುರ್ಜರ್ ಅವರ ಮನೆಯಲ್ಲಿ 40 ಲಕ್ಷ ರೂಪಾಯಿ ನಗದು ಮತ್ತು ಗುತ್ತಿಗೆಯ ಕಡತವನ್ನು ವಶಪಡಿಸಿಕೊಂಡರು. ಅಲ್ಲದೆ, ನಾರಾಯಣ ಸಿಂಗ್ ಅವರ ನಿವಾಸದಲ್ಲಿ 8 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.
ಜೈಪುರ ಹೆರಿಟೇಜ್ ಮುನ್ಸಿಪಲ್ ಕಾರ್ಪೊರೇಶನ್‌ನ ನಿರ್ದೇಶಕ ಮತ್ತು ವಿಶೇಷ ಕಾರ್ಯದರ್ಶಿ ಹೃದೇಶ್ ಕುಮಾರ್ ಶರ್ಮಾ ಅವರು ಹೊರಡಿಸಿದ ಅಮಾನತು ಆದೇಶವು ತನಿಖೆ ಮುಗಿಯುವವರೆಗೆ ಮೇಯರ್ ಅವರನ್ನು ಅಮಾನತುಗೊಳಿಸಲಾಗಿದೆ.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ