ವಿಜಯ್ –ಸ್ಪಂದನಾ ಇಬ್ಬರ ಮೊದಲ ಪರಿಚಯ ಆಗಿದ್ದು ಮಲ್ಲೇಶ್ವರಂನ ಕಾಫಿ ಡೇನಲ್ಲಿ
ಬೆಂಗಳೂರು: 2004ರಲ್ಲಿ ಮಲ್ಲೇಶ್ವರಂನ ಕಾಫಿ ಡೇನಲ್ಲಿ ವಿಜಯ್ –ಸ್ಪಂದನಾ ಇಬ್ಬರ ಮೊದಲ ಪರಿಚಯವಾಗಿತ್ತು. ಅದಾದ ಮೂರು ವರ್ಷಗಳ ಬಳಿಕ ಮತ್ತೆ ಅದೇ ಕಾಫಿ ಡೇನಲ್ಲಿ ಮತ್ತೆ ಭೇಟಿ ಮಾಡಿದ್ದರು. ಆಗ ವಿಜಯ ರಾಘವೇಂದ್ರ ಸ್ಪಂದನಾರನ್ನ ಪರಿಚಯ ಮಾಡಿಕೊಂಡು ಮಾತನಾಡಿಸಿದ್ದರು. ಬಳಿಕ ಮದುವೆ ಮಾತುಕತೆ ನಡೆದಿತ್ತು.
ಆಗ ಎಂಇಎಸ್ ಕಾಲೇಜಿನಲ್ಲಿ ಫೈನಲ್ ಬಿ.ಎ ವ್ಯಾಸಂಗ ಮಾಡುತ್ತಿದ್ದ ಸ್ಪಂದನಾ ವಿಜಯ ರಾಘವೇಂದ್ರ ಜೊತೆಗೆ 2007ರಲ್ಲಿ ಆಗಸ್ಟ್ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಕಾಲೇಜು ಸ್ನೇಹಿತರೊಂದಿಗೆ ಥಾಯ್ ಲ್ಯಾಂಡ್ಗೆ ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ಭಾನುವಾರ ಶಾಪಿಂಗ್ ಗೆ ಹೊರಟಿದ್ದರು. ಸಂಜೆ ಶಾಪಿಂಗ್ ಮುಗಿಸಿ ಹೋಟೆಲ್ ಕಡೆ ಹೋಗುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಸ್ನೇಹಿತರು ಕೂಡಲೇ ಸಮೀಪದ ಆಸ್ಪತ್ರೆಗೆ ಸ್ಪಂದನಾರನ್ನು ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಸ್ಪಂದನಾ ಸಾವನ್ನಪ್ಪಿದ್ದಾರೆ.
2007ರ ಆಗಸ್ಟ್ 26ರಂದು ವಿಜಯ್–ಸ್ಪಂದನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ವಾರ್ಷಿಕೋತ್ಸವಕ್ಕೆ ಇನ್ನು 19 ದಿನಗಳಷ್ಟೇ ಬಾಕಿಯಿತ್ತು. ಅಷ್ಟರಲ್ಲಿ ಅನಾಹುತ ಸಂಭವಿಸಿದೆ. ಸದ್ಯ ಜಕ್ಕೂರಿನಲ್ಲಿರುವ ವಿಜಯ ರಾಘವೇಂದ್ರ ಅವರ ಅಪಾರ್ಟ್ಮೆಂಟ್ ಖಾಲಿ ಖಾಲಿಯಾಗಿದೆ. ಸ್ಥಳಕ್ಕೆ ಆಗಮಿಸಿರುವ ಯಲಹಂಕ ಪೊಲೀಸರು ಭೇಟಿ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw