ರಾಜ್ಯಸಭೆಯಲ್ಲಿ ಪಾಸ್ ಆಯ್ತು ದಿಲ್ಲಿ ಸೇವಾ ಮಸೂದೆ: ಮತ ಚಲಾವಣೆಯಲ್ಲಿ ಕುತೂಹಲ..! - Mahanayaka
3:15 PM Saturday 21 - September 2024

ರಾಜ್ಯಸಭೆಯಲ್ಲಿ ಪಾಸ್ ಆಯ್ತು ದಿಲ್ಲಿ ಸೇವಾ ಮಸೂದೆ: ಮತ ಚಲಾವಣೆಯಲ್ಲಿ ಕುತೂಹಲ..!

08/08/2023

ಎಎಪಿ ಮತ್ತು ಬಿಜೆಪಿ ಸರ್ಕಾರದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದ ದಿಲ್ಲಿ ಸೇವಾ ಮಸೂದೆ ಕೊನೆಗೂ ರಾಜ್ಯಸಭೆಯಲ್ಲಿ ಪಾಸ್ ಆಗಿದೆ. ಈ ಮಸೂದೆಯ ಪರ 131 ಮತಗಳು ಚಲಾವಣೆಯಾಗಿದ್ದರೆ ವಿರುದ್ಧ 102 ಮತಗಳ ಚಲಾವಣೆಯಾಗಿದೆ.
ದೆಹಲಿ ಆಡಳಿತ ಸೇವೆಗಳ ನಿಯಂತ್ರಣ ಸಂಬಂಧ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಬದಲಾಯಿಸುವ ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ ತಿದ್ದುಪಡಿ ಮಸೂದೆ 2023 ರಾಜ್ಯಸಭೆಯಲ್ಲಿ ಪಾಸ್‌ ಆಗಿದೆ. ಗೃಹ ಸಚಿವ ಅಮಿತ್‌ ಶಾ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದು, ಮಸೂದೆಯ ಪರ 131 ಮತಗಳು ಬಿದ್ದರೆ, 102 ಮತಗಳು ವಿರುದ್ಧ ಚಲಾವಣೆಯಾದವು. ಈ ಮಸೂದೆಯನ್ನ ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೇ ಲೋಕಸಭೆಯಲ್ಲೂ ಧ್ವನಿಮತದ ಮೂಲಕ ಅಂಗೀಕರಿಸಲಾಗಿತ್ತು.
ಬಿಜೆಡಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಸದಸ್ಯರು ಬೆಂಬಲ ನೀಡಿದ್ದರಿಂದ ಮಸೂದೆ ಪಾಸ್‌ ಆಗಿದೆ. ಈ ಮಸೂದೆಗೆ ರಾಷ್ಟ್ರಪತಿಗಳ ಸಹಿ ಬಿದ್ದ ಬಳಿಕ ಅಧಿಕೃತ ಕಾನೂನಾಗಿ ಜಾರಿಯಾಗಲಿದೆ.
ನವೀನ್ ಪಟ್ನಾಯಕ್ ಅವರ ಬಿಜೆಡಿ ಮತ್ತು ವೈಎಸ್‌ಆರ್‌ಸಿಪಿ ಮಸೂದೆಗೆ ಬೆಂಬಲ ಸೂಚಿಸಿದವು. ಹೀಗಾಗಿ ಸಣ್ಣಮಟ್ಟಿನ ಅಡೆತಡೆಗಳ ಹೊರತಾಗಿಯೂ ಮಸೂದೆ ಸುಲಭವಾಗಿ ಅಂಗೀಕಾರಗೊಂಡಿತು. ಆದರೆ ಇದು ವಿರೋಧ ಪಕ್ಷದ ಮೈತ್ರಿಕೂಟ ಇಂಡಿಯಾದಿಂದ ಬಲವಾದ ಹಿನ್ನಡೆಯನ್ನು ಪಡೆಯಿತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಸ್ವಸ್ಥ ಶಿಬು ಸೊರೆನ್ ಅವರನ್ನೂ ನಿರ್ಣಾಯಕ ಮತದಾನಕ್ಕಾಗಿ ಸದನಕ್ಕೆ ಕರೆತರಲಾಯಿತು.
ರಾಜ್ಯಸಭೆಯಲ್ಲಿ ಬಿಜೆಪಿಗೆ ಬೆಂಬಲ ಇಲ್ಲದ ಕಾರಣ ಈ ಮಸೂದೆ ಹೇಗೆ ಪಾಸ್‌ ಆಗುತ್ತದೆ ಎಂಬ ಕುತೂಹಲ ಇತ್ತು. ಸುಗ್ರೀವಾಜ್ಞೆ ವಿರುದ್ಧ ಬೆಂಬಲ ನೀಡುವಂತೆ ದೆಹಲಿ ಸಿಎಂ ಕೇಜ್ರಿವಾಲ್ ವಿಪಕ್ಷಗಳನ್ನು ಕೋರಿದ್ದರು. ಆದರೆ ಮತದಾನದ ವೇಳೆ ಮಸೂದೆಯನ್ನು ಬೆಂಬಲಿಸಿ 139 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 102 ಮತಗಳು ಚಲಾವಣೆಯಾದವು. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರ (ತಿದ್ದುಪಡಿ) ಮಸೂದೆ 2023 ಅನ್ನು ಲೋಕಸಭೆಯು ಗುರುವಾರ ಅಂಗೀಕರಿಸಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B


Provided by

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ