ಮಹಿಳಾ ಪೊಲೀಸ್ ಠಾಣೆಗೆ ಕಾಲ್ ಮಾಡಿ ಟಾರ್ಚರ್: ಮಾಡಬಾರದ್ದನ್ನು ಮಾಡಿ ಜೈಲಿಗೋದ ಭೂಪ..!
ಮಹಿಳಾ ಪೊಲೀಸ್ ಠಾಣೆಯೊಂದಕ್ಕೆ ಕರೆ ಮಾಡಿ ಕಿರುಕುಳ ನೀಡಿದ ವ್ಯಕ್ತಿಗೆ ಕೇರಳ ಕೋರ್ಟ್ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.
2019ರಲ್ಲಿ ನಡೆದ ಪ್ರಕರಣ ವಿಚಾರಣೆ ನಡೆಸಿದ ಕೋರ್ಟ್ ಇದೀಗ ತೀರ್ಪು ನೀಡಿದ್ದು, ಕಿರುಕುಳ ನೀಡಿದ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ ನೀಡಿದೆ.
ಕೇರಳ ವನಿತಾ ಪೊಲೀಸ್ ಠಾಣೆಗೆ ಜುಲೈ 11, 2019ರಲ್ಲಿ ಜೋಸ್ ಅನ್ನೋ ವ್ಯಕ್ತಿ ಎರಡು ದಿನ ಸತತ ಕರೆ ಮಾಡಿದ್ದು, ಫೋನ್ ಸ್ವೀಕರಿಸುವ ಮಹಿಳಾ ಪೊಲೀಸ್ ಪೇದೆಗಳ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಜೊತೆಗೆ ಲೈಂಗಿಕ ಕಿರುಕುಳ ನೀಡಿದ್ದು, ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗೆ ಜೋಸ್ ಪದೇ ಪದೇ ಕರೆ ಮಾಡಿ ಕಿರುಕುಳ ನೀಡಿದ್ದಾನೆ.
ಇಷ್ಟೇ ಅಲ್ಲ ಮಹಿಳಾ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದು, 2 ದಿನದಲ್ಲಿ ಸುಮಾರು 300 ಫೋನ್ ಕರೆ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಿದ ಮಹಿಳಾ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ನಡೆಸಿ ಫೋನ್ ಟ್ರೇಸ್ ಮಾಡಿ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ನಂಬರ್ ಪಡೆದು ಲೋಕೇಶ್ ಟ್ರೇಸ್ ಮಾಡಿದ್ದಾರೆ. ಜೋಸ್ ಕಾಲ್ ಹಿಸ್ಟರಿ ಪಡೆದಿದ್ದು, ಸಮಗ್ರ ದಾಖಲೆಯೊಂದಿಗೆ ತನಿಖೆ ನಡೆಸಿದ ಪೊಲೀಸರು ಜೋಸ್‌ನನ್ನು ಬಂಧಿಸಿದ್ದಾರೆ.
ಇನ್ನು ಹಲವು ಸುತ್ತಿನ ವಿಚಾರಣೆ, ದಾಖಲೆ, ಸಾಕ್ಷಿಗಳ ಪರೀಶೀಲನೆ ನಡೆಸಿದ ಕೋರ್ಟ್ ಇದೀಗ ತೀರ್ಪು ನೀಡಿದ್ದು, ಮಹಿಳಾ ಪೊಲೀಸ್ ಠಾಣೆಗೆ ಕರೆ ಮಾಡಿ ಕಿರುಕುಳ ನೀಡಿರುವುದು ಲೈಂಗಿಕ ಪ್ರಕರಣಕ್ಕೆ ಸಮ. ಮಹಿಳಾ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಲಾಗಿದೆ. ಮಹಿಳಾ ಪೊಲೀಸರ ಸ್ವತಂತ್ರವಾಗಿ ಕೆಲಸ ಮಾಡಲು ಇಂತಹ ಕಿಡಿಗೇಡಿಗಳು ಅಡ್ಡಿಯಾಗಿದ್ದಾರೆ.
ಈ ಕಿಡೇಗೇಡಿಗಳು ಮಹಿಳಾ ಪೊಲೀಸರಿಗೆ ಈ ರೀತಿ ಕಿರುಕುಳ ನೀಡಿದರೆ, ಇನ್ನು ಸಾಮಾನ್ಯ ಮಹಿಳೆಯರ ಪಾಡೇನು ಎಂದು ಕೋರ್ಟ್ ಪ್ರಶ್ನಿಸಿದೆ. ಮಹಿಳಾ ಪೊಲೀಸರಿಗೆ ಕಿರುಕುಳ ನೀಡಿದ ಜೋಸ್‌ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw