ಸಂಸದ ಸ್ಥಾನದ ಜತೆ ಸಿಕ್ತು ಸರ್ಕಾರಿ ಬಂಗಲೆ: ‘ಹಿಂದೂಸ್ತಾನವೇ ನನ್ನ ಮನೆʼ ಎಂದ ರಾಹುಲ್ ಗಾಂಧಿ
ಸಂಸದ ಸ್ಥಾನಮಾನವನ್ನು ಮರಳಿ ಪಡೆದ ಬಳಿಕ ಸಂಸದ ರಾಹುಲ್ ಗಾಂಧಿ ಅವರಿಗೆ ಈ ಹಿಂದೆ ಅವರು ನೆಲೆಸಿದ್ದ ತುಘಲಕ್ ಲೇನ್ ಬಂಗಲೆಯನ್ನು ಮರುಹಂಚಿಕೆ ಮಾಡಲಾಗಿದೆ.
ಮೋದಿ ಉಪನಾಮ ಪ್ರಕರಣದಲ್ಲಿ ಎರಡು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿದ್ದ ವೇಳೆ ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನು ರದ್ದುಪಡಿಸಿ, ತುಘಲಕ್ ಲೇನ್ ಬಂಗಲೆಯಿಂದ ಅವರನ್ನು ಖಾಲಿ ಮಾಡಿಸಲಾಗಿತ್ತು. ಕಳೆದ 19 ವರ್ಷಗಳಿಂದ ರಾಹುಲ್ ದೆಹಲಿಯ ತುಘಲಕ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದರು.
ಇದೀಗ ಮಾನನಷ್ಟ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ಗಾಂಧಿಯವರ ಶಿಕ್ಷೆಗೆ ತಡೆ ನೀಡಿದ ನಂತರ ಅವರು ಸಂಸದ ಸ್ಥಾನ ಪುನರ್ ಸ್ಥಾಪಿಸಲಾಗಿದೆ. ಇದೀಗ, ರಾಹುಲ್ ಗಾಂಧಿ ತಮ್ಮ ಹಳೆಯ ಬಂಗಲೆಗೆ ಮರಳಿದ್ದು, ಈ ವೇಳೆ ತಮ್ಮ ಹಳೆಯ ಬಂಗಲೆಗೆ ಮರಳುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಡೀ ಹಿಂದೂಸ್ತಾನವೇ ನನ್ನ ಮನೆʼ ಎಂದು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw