ಒಡಿಶಾ ರೈಲು ದುರಂತದ ಸಂತ್ರಸ್ತರಿಗಾಗಿ ಮಿಡಿದ ಮನ: ನೊಂದ ಜೀವಕ್ಕೆ ಸಾಥ್ ನೀಡಲು ಅಮೆರಿಕನ್ ಭಾರತೀಯ ಯುವತಿ ಪಣ
ಕೆಲ ತಿಂಗಳ ಹಿಂದೆ ಒಡಿಶಾದ ಬಾಲಾಸೋರ್ ನಲ್ಲಿ ನಡೆದಿದ್ದ ಭೀಕರ ರೈಲು ದುರಂತದ ಸಂತ್ರಸ್ತರಿಗಾಗಿ ಭಾರತೀಯ ಮೂಲದ ಅಮೆರಿಕನ್ ಯುವತಿಯೊಬ್ಬಳ ಮನ ಮಿಡಿದಿದೆ. ಸಂತ್ರಸ್ತರ ಸಹಾಯಕ್ಕಾಗಿ ನಿಧಿ ಸಂಗ್ರಹಿಸುವ ಕೆಲಸದಲ್ಲಿ ನಿರತರಾಗಿರುವ ಈಕೆ ಈಗಾಗಲೇ ಸುಮಾರು 8 ಲಕ್ಷದ 27 ಸಾವಿರ ರೂಪಾಯಿಗಳಷ್ಟು ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
16 ವರ್ಷ ಪ್ರಾಯದ ಅಮೆರಿಕನ್ ಭಾರತೀಯ ಯುವತಿಯಾಗಿರುವ ತನಿಷ್ಕಾ ಧರಿವಾಲ್ ಎಂಬುವವರು ಈ ಮಾನವೀಯ ಕಾರ್ಯಕ್ಕೆ ಮುಂದಾದವರು. ಒಡಿಶಾದ ಬಾಲಸೋರ್ ನಲ್ಲಿ ನಡೆದ ಭೀಕರ ರೈಲು ದುರಂತದ ಬಗ್ಗೆ ನನಗೆ ತಿಳಿದ ಬಳಿಕ ಆ ದುರಂತದಲ್ಲಿ ಸಂತ್ರಸ್ತರಾದವರಿಗೆ ಮತ್ತು ಅವರ ಕುಟುಂಬಗಳಿಗೆ ನನ್ನ ಕೈಲಾದಷ್ಟು ನೆರವು ನೀಡುವ ಉದ್ದೇಶದಿಂದ ಅಮ್ಮನೊಂದಿಗೆ ಚರ್ಚಿಸಿ ಅವರ ಬೆಂಬಲದೊಂದಿಗೆ ನಿಧಿ ಸಂಗ್ರಹಕ್ಕೆ ಮುಂದಾಗಿದ್ದೇನೆ.
ಈ ಉದ್ದೇಶಕ್ಕಾಗಿ ನಾನು ಶಾಲೆಯನ್ನು, ಗೆಳೆಯರನ್ನು ಮತ್ತು ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಅವರಿಗೆ ನನ್ನ ಉದ್ದೇಶವನ್ನು ತಿಳಿಸಿ, ಇಲ್ಲಿಯವರೆಗೆ 10 ಸಾವಿರ ಡಾಲರ್ ಗಳಷ್ಟು ಹಣವನ್ನು ಸಂಗ್ರಹಿಸಿದ್ದೇನೆ. ನನ್ನ ಸಣ್ಣದೊಂದು ಪ್ರಯತ್ನ ಆ ಭೀಕರ ರೈಲು ದುರಂತದಲ್ಲಿ ಸಂತ್ರಸ್ತರಾದವರಿಗೆ ನೆರವಾಗಲಿದೆ ಎಂಬ ತೃಪ್ತಿ ನನಗಿದೆ’ ಎಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw