ಪ್ರಜಾ ಮಿತ್ರರೇ, ನಮ್ಮ ಮುಂದಿರುವ ಸವಾಲುಗಳೇನು? - Mahanayaka
7:08 AM Wednesday 11 - December 2024

ಪ್ರಜಾ ಮಿತ್ರರೇ, ನಮ್ಮ ಮುಂದಿರುವ ಸವಾಲುಗಳೇನು?

siddesh gowda usa
08/08/2023

  • ಪ್ರೊ.ಸಲವಮ್ಮನಳ್ಳಿ ಸಿದ್ದೇಶ್ ಗೌಡ, USA

ನಾನಾ ಪತ್ರಿಕೆಗಳಲ್ಲಿ ನಾನಾ ಟಿವಿ ಮಾಧ್ಯಮಗಳಲ್ಲಿ ದಿನಂಪ್ರತಿ ಈ ಕೆಲವೊಂದು ವರ್ಷಗಳಲ್ಲಿನ ಮೂರೂ ಪಕ್ಷಗಳ  ಸಿದ್ಧಾಂತಗಳಿಲ್ಲದ, ಸ್ವಾರ್ಥ ಹೊಂದಾಣಿಕೆಗಳ, ಸರ್ಕಾರಗಳ ಅಸಹ್ಯಕರ ವಿದ್ಯಮಾನಗಳನ್ನ,

ರಾಜಕೀಯ ನೋಡಿನೋಡಿ,ಓದಿ ಓದಿ ಕೋಟಿಕೋಟಿ,ಸ್ವತಂತ್ರಭಾರತದ ಜತೆಜತೆಗೇ ಹೆಜ್ಜೆ ಹಾಕುತ್ತಿರುವ, ನಿಸ್ಸಹಾಯಕ ನಾಗರಿಕರು ತಲೆ ಬಿಸಿ ಮಾಡಿಕೊಂಡು ನಿಜಕ್ಕೂ ಖಿನ್ನತೆಗೆ ಒಳಗಾಗುತ್ತಿದ್ದೇವೆ.

ಇದಕ್ಕೆ ಹೊಣೆಗಾರರು ಸರ್ಕಾರಗಳಲ್ಲಿನ ಕೆಲವು ನಾಚಿಗೆಟ್ಟ ರಾಜಕಾರಣಿಗಳ ಹುಚ್ಚ ನಡವಳಿಕೆಗಳೇ? ಅಥವಾ ಅವರನ್ನ ಬಿಂಬಿಸುತ್ತಿರುವ ಮಾಧ್ಯಮಗಳೆ? ಇದು ರಾಜಕೀಯ ದುರಾಡಳಿತದ, ಅರಾಜಕತೆಯ ಅತಿರೇಕದ ಪರಮಾವಧಿ ಎನಿಸುವುದು. ಈ ಸರ್ಕಾರಗಳಲ್ಲಿನ ಕೆಲವು ಅತಿರೇಕ ಹಗಲು ದರೋಡೆಕೋರರ ಉಪಟಳ ಸಹಿಸಲಸಾಧ್ಯ.

ಪ್ರಾಮಾಣಿಕರಾಗಿ, ದಕ್ಷತೆಯಿಂದ ದುಡಿದು ಬಿರುದಾವಳಿಗಳ ಪಡೆದು ರಾರಾಜಿಸಿ ನಿವ್ರತ್ತಿಯ ಸಂಬಳದಲ್ಗಿ ಸಂಭ್ರಮಿಸಿ ವಿರಮಿಸುತ್ತಿರುವ ಐಎಎಸ್,ಐಪಿಎಸ್ ಅಧಿಕಾರಿವರ್ಗವೇ,ನಿವೃತ್ತ ನ್ಯಾಯಾಧೀಶರುಗಳೇ,ಮೇಲ್ಪಂಕ್ತಿ ಶಿಕ್ಷಕವರ್ಗವೇ, ಹೆಸರಾಂತಸಾಹಿತಿಗಳೇ,ಚಲನಚಿತ್ರನಟರೇ, ಮುತ್ಸದ್ದಿಗಳೇ, ಚಿಂತಕರೇ ತಮ್ಮ ಆತ್ಮಸಾಕ್ಷಿ ಗೆ ಸರಿ ಎನಿಸಿದಲ್ಲಿ  ಒಗ್ಗೂಡಿ ಬನ್ನಿ ಬೀದಿಗೆ.ಗೋಕಾಕ್ ಚಳುವಳಿ ತರಹ ಮಾರ್ಗದರ್ಶಕರಾಗಿ, ಹಿಂದಿನ ಸ್ವಾತಂತ್ರ್ಯ ಸಂಗ್ರಾಮದ ರೀತಿ,  ಉತ್ಸಾಹಿ ಯುವ ಜನಾಂಗವನ್ನ ಮುನ್ನೆಡೆಸಿ .ಈ ಸರ್ಕಾರಗಳಿಗೆ ಲಗಾಮು, ಕಡಿವಾಣಗಳ, ಲಕ್ಷ್ಮಣ ರೇಖೆಗಳ, ಅಂಕುಶಗಳ ಹಾಕಲು. ಕಲುಷಿತಗೊಂಡ ರಾಜಕೀಯಕ್ಕೆ ಬದಲಾವಣೆ ತರಲು.  ಭ್ರಷ್ಟತೆ ತಾಂಡವ ವಾಡುತ್ತಿರುವಾಗ ಕಸಗುಡಿಸಿ ಸ್ವಚ್ಛ ಭಾರತ ಮಾಡುವ ರೀತಿ ಪೂಜ್ಯ ಮಠಾಧೀಶರುಗಳು ರಾಜ್ಯದಲ್ಲಿ ಸ್ವಚ್ಛ ರಾಜಕಾರಣ, ಸ್ವಚ್ಛ ಸಮಾಜ ನಿರ್ಮಿಸಲು ಮಹತ್ತರ ಪಾತ್ರವಹಿಸುವ ಸಂದರ್ಭ ಬಂದಿದೆ ತಡವಾಗಬಾರದು. ನನ್ನoತ ಸಮಾನ ಮನಸ್ಕರ ಕಳಕಳಿಯ ಬೇಡಿಕೆ.ಸ್ವಾತಂತ್ರ್ಯ ಬಂದದ್ದು ದೊಡ್ಡದಲ್ಲ ಈ ಪ್ರಜಾಪ್ರಭುತ್ವದಲ್ಲಿ ಭ್ರಷ್ಟತೆ, ದುಷ್ಟತೆ,ದುರ್ವರ್ತನೆ, ದುರಾಡಳಿತಕ್ಕೆ ತಡೆ ಒಡ್ಡಲೇ ಬೇಕು, ಮಂಗಳ ಹಾಡಲೇ ಬೇಕು. ನಿಮ್ಮಗಳ ಪಾತ್ರ  ಹಿರಿದು.

ಮುಂದಿನ ಪೀಳಿಗೆಗೆ ಸ್ವತಂತ್ರಪೂರ್ವ ಹಾಗೂ 50 ರ, 70 ರ ದಶಕಗಳ ಸೂಕ್ಷ್ಮಮತಿಯ ಮೇಧಾವಿ, ಸರಳ ರಾಜಕಾರಣಿಗಳು( ಶ್ರೀಯುತಗುಲ್ಜಾರಿಲಾಲ್ ನಂದಾ, ಶಾಸ್ತ್ರೀಜಿ, ನಿಜಲಿಂಗಪ್ಪ, ಕಾಮರಾಜ್, ಸಂಜೀವರೆಡ್ಡಿ, ಮೊರಾರ್ಜಿದೇಸಾಯಿ, ನಜೀರ್ಸಾಬಿ ಮುಂತಾದವರು) ಮಾದರಿಯಾಗಿ ಉತ್ತಮ ಉದಾಹರಣೆಯಾಗಿ ಉಳಿಯಬೇಕೇ ಹೊರತು ಕೀಳುಮಟ್ಟದ ರಾಜಕೀಯ ನೇತಾರರನ್ನಲ್ಲ .ತಾವುಗಳು ಏನಂತೀರಾ.

ಹಾಗೇ ಇಲ್ಲಿ ಸಾಂದರ್ಭಿಕವಾಗಿ ಖ್ಯಾತ ರಷ್ಯನ್ ಲೇಖಕ ಮ್ಯಾಕ್ಷಿoನ ಮಾತು ಉಲ್ಲೇಖಿಸಿರುವೆ.ಓದಿ ದಯಮಾಡಿ. “ಜನತೆ ಜಾಗೃತಗೊಂಡ ಹೊರತೂ ಅನ್ಯಾಯ, ಕ್ರೌರ್ಯಗಳಿಗೆ ಮುಕ್ತಿ ಇಲ್ಲ.ದರ್ಪ,ದಬ್ಬಾಳಿಕೆಗಳನ್ನ ನಿರ್ಭೀತಿಯಿಂದ ಎದುರಿಸದ ಹೊರತು ಏಳಿಗೆಯಿಲ್ಲ”.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ