ಶಾಕಿಂಗ್: ಕುಡಿದ ಮತ್ತಿನಲ್ಲಿ ಮಹಿಳೆಗೆ ದೌರ್ಜನ್ಯ ಎಸಗಿ ವಸ್ತ್ರ ಹರಿದು ಹಾಕಿ ಬೆತ್ತಲೆ ಮಾಡಿ ಹಿಂಸೆ
ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 28 ವರ್ಷದ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ಹೈದರಾಬಾದ್ ಹೊರವಲಯದ ಬಾಲಾಜಿ ನಗರದಲ್ಲಿ ನಡೆದಿದೆ. ಪೆದ್ದಮಾರಯ್ಯ (30) ಎಂಬಾತ ಆರೋಪಿ. ಈತ ಕುಡಿದ ಮತ್ತಿನಲ್ಲಿದ್ದ ಎಂದು ಗುರುತಿಸಲಾಗಿದೆ. ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಜವಾಹರ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಬಾಲಾಜಿ ನಗರ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ಐಎಎನ್ ಎಸ್ ವರದಿ ಮಾಡಿದೆ.
ಕುಡಿತದ ಚಟ ಹೊಂದಿದ್ದ ಕೂಲಿ ಕಾರ್ಮಿಕ ಪೆದ್ದಮಾರಯ್ಯ ಮಹಿಳೆಗೆ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿ ವಿವಸ್ತ್ರಗೊಳಿಸಿ, ಬಟ್ಟೆಗಳನ್ನು ಹರಿದು ಹಾಕಿ ದೈಹಿಕ ಹಿಂಸೆ ಮಾಡಿದ್ದಾನೆ. ಮಹಿಳೆ ಅವನನ್ನು ದೂರ ತಳ್ಳುವ ಮೂಲಕ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ ಪೆದ್ದಮಾರಯ್ಯ ಅವಳ ಬಟ್ಟೆಗಳನ್ನು ಹರಿದು ಹಾಕಿ ಬೆತ್ತಲೆ ಮಾಡಿದ್ದಾನೆ.
ಈ ಭಯಾನಕ ದಾಳಿ ಸಮಯದಲ್ಲಿ, ಆರೋಪಿಯ ತಾಯಿ ಘಟನಾ ಸ್ಥಳದ ಸಮೀಪ ಇದ್ದರು ಎನ್ನಲಾಗಿದೆ. ಆದರೆ ಅವರು ಈ ಹಲ್ಲೆಯನ್ನು ತಡೆಯಲು ಮಧ್ಯಪ್ರವೇಶಿಸಲಿಲ್ಲ. ಇದೇ ವೇಳೆ ದಾರಿಯಲ್ಲಿ ಹೋಗುತ್ತಿದ್ದ ಬೈಕ್ ಸವಾರ ಮಹಿಳೆ ಮೇಲಿನ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಆರೋಪಿ ಪೆದ್ದಮಾರಯ್ಯ ಈತನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ.
ಆರೋಪಿಯ ವಿರುದ್ಧ ಸೆಕ್ಷನ್ 354 (ಬಿ) ಅಡಿಯಲ್ಲಿ ಕಿರುಕುಳ, ಸೆಕ್ಷನ್ 323 ರ ಅಡಿಯಲ್ಲಿ ನೋವುಂಟು ಮಾಡುವುದು ಮತ್ತು ಸೆಕ್ಷನ್ 506 ಮತ್ತು ಸೆಕ್ಷನ್ 34 ರ ಅಡಿಯಲ್ಲಿ ಸಾಮಾನ್ಯ ಉದ್ದೇಶದೊಂದಿಗೆ ಕ್ರಿಮಿನಲ್ ಬೆದರಿಕೆ ಸೇರಿದಂತೆ ಅನೇಕ ಅಪರಾಧಗಳ ಕೇಸ್ ಅನ್ನು ದಾಖಲಿಸಲಾಗಿದೆ.
ಆಘಾತಕಾರಿ ಸಂಗತಿ ಏನೆಂದರೆ ನೊಂದ ಮಹಿಳೆ ಸುಮಾರು 15 ನಿಮಿಷಗಳ ಕಾಲ ರಸ್ತೆಯಲ್ಲಿ ಬೆತ್ತಲೆಯಾಗಿಯೇ ಇದ್ದರು. ದಾರಿಯಲ್ಲಿ ಬಂದವರು ಆಕೆಗೆ ಕವರ್ ನೀಡಿ ಮಾನ ಮುಚ್ಚಲು ಸಹಕರಿಸಿ ಘಟನೆ ಹಾಗೂ ಆರೋಪಿಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw