ಬಂಧನದ ನಂತರ ಮೊದಲ ಬಾರಿಗೆ ಜೈಲಲ್ಲಿ ಪತ್ನಿ ಬುಶ್ರಾ ಬೀಬಿ ಜತೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾತುಕತೆ..!
ತೋಷಾಖಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬಂಧನಕ್ಕೊಳಗಾದ ನಂತರ ಪಾಕಿಸ್ತಾನದ ಪದಚ್ಯುತ ಮತ್ತು ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ತಮ್ಮ ಪತ್ನಿ ಬುಶ್ರಾ ಬೀಬಿಯನ್ನು ಅಟೊಕ್ ಜೈಲಿನಲ್ಲಿ ಭೇಟಿಯಾದರು.
ಅವರನ್ನು ಭಯಾನಕ ‘ಸಿ–ಕ್ಲಾಸ್’ ಪರಿಸ್ಥಿತಿಗಳಲ್ಲಿ ಇರಿಸಲಾಗಿದೆ ಮತ್ತು ಕಾನೂನು ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಆರೋಪಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಖಾನ್ ಅವರ ವಕೀಲ ನಯೀಮ್ ಹೈದರ್ ಪಂಜುತಾ ಅವರು ನೀಡಿರುವ ವೀಡಿಯೊ ಸಂದೇಶದಲ್ಲಿ ಖಾನ್ ಮತ್ತು ಅವರ ಪತ್ನಿ ನಡುವಿನ ಸಭೆಯು ಸುಮಾರು ಒಂದು ಗಂಟೆಗಳ ಕಾಲ ನಡೆಯಿತು ಎಂದು ಹೇಳಿದರು. ಬುಶ್ರಾ ಅವರ ಪ್ರಕಾರ ಇಮ್ರಾನ್ ಖಾನ್ ಉತ್ತಮ ಆರೋಗ್ಯದಲ್ಲಿದ್ದಾರೆ. ಆದರೆ ಸಿ–ಕ್ಲಾಸ್ ವ್ಯವಸ್ಥೆಗಳಲ್ಲಿ ಅವರನ್ನು ಇರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಹೈಕೋರ್ಟ್ ಆದೇಶದ ಹೊರತಾಗಿಯೂ ಕಾನೂನು ತಂಡವನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ನಾವು ನಾಳೆ ಹೈಕೋರ್ಟ್ ನಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ವಕೀಲರು ಹೇಳಿದ್ದಾರೆ. ಕ್ರಿಕೆಟಿಗನಿಂದ ರಾಜಕಾರಣಿಯಾಗಿ ಮಾರ್ಪಟ್ಟ ಅವರು ಗುಲಾಮಗಿರಿಗೆ ತಲೆಬಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
48 ವರ್ಷದ ಬುಶ್ರಾ ಬೀಬಿ ಇಮ್ರಾನ್ ಖಾನ್ ಅವರ ಮೂರನೇ ಪತ್ನಿಯಾಗಿದ್ದು, ಪಾಕಿಸ್ತಾನದಲ್ಲಿ ಆಧ್ಯಾತ್ಮಿಕ ನಾಯಕಿಯಾಗಿ ಮತ್ತು ಸೂಫಿ ಪಂಥದ ಮೇಲಿನ ಭಕ್ತಿಗಾಗಿ ಹೆಸರುವಾಸಿಯಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw