ಹೆಣ್ಣು ಆನೆ ಮರಿಗೆ ಜನ್ಮ ನೀಡಿದ ಐಶ್ವರ್ಯ ಆನೆ
ಚಾಮರಾಜನಗರ: ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಾಯ್ತನದ ಸಂಭ್ರಮ ಮನೆ ಮಾಡಿದ್ದು ಐಶ್ವರ್ಯ ಹೆಣ್ಣು ಆನೆ ಮರಿಗೆ ಜನ್ಮ ನೀಡಿದ್ದಾಳೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ ಐಶ್ವರ್ಯ ಎಂಬ ಹೆಣ್ಣಾನೆ ಹೆಣ್ಣು ಮರಿಗೆ ಜನ್ಮ ಕೊಟ್ಟಿದ್ದು ಶಿಬಿರದಲ್ಲಿ ಸಂಭ್ರಮ ಮನೆ ಮಾಡಿದೆ. ತಾಯಿ ಮತ್ತು ಮರಿ ಆನೆ ಆರೋಗ್ಯವಾಗಿದ್ದು ಮರಿ ಆನೆ ತಾಯಿಯೊಂದಿಗೆ ಲವ-ಲವಿಕೆಯಿಂದ ಆಟವಾಡುತ್ತಿದೆ ಎಂದು ಅರಣ್ಯ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.
ರಾಂಪುರ ಆನೆ ಶಿಬಿರದಲ್ಲಿ ಒಟ್ಟು 21 ಆನೆಗಳಿದ್ದು, ಐಶ್ವರ್ಯ ಮರಿಗೆ ಜನ್ಮ ನೀಡಿದ ಬಳಿಕ ಈಗ ಅವುಗಳ ಸಂಖ್ಯೆ 22ಕ್ಕೆ ಏರಿಕೆ ಕಂಡಂತಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw