ಏರ್ ಇಂಡಿಯಾದ ಹೊಸ ಲಾಂಛನ ಅನಾವರಣ: ಏನಿದರ ಮರ್ಮ..?
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಇನ್ನು ಹೊಸ ಲೋಗೋ. ಹೌದು. ನವ ಭಾರತದ ಸಾರವನ್ನು ಹೊಂದಿರುವ ಈ ಹೊಸ ಲೋಗೋ ವಿಹಾನ್–ಎಐ ಹೊಸ ಸ್ವರೂಪಕ್ಕೊಂದು ಮಹತ್ವದ ಮೈಲುಗಲ್ಲಾಗಲಿದೆ.
ಸಂಸ್ಥೆಯ ನೂತನ ಲೋಗೋ ಜೊತೆಗೆ ಏರ್ ಕ್ರಾಫ್ಟ್ ಹೊಸ ಸ್ವರೂಪದ ಸಂಪೂರ್ಣ ಚಿತ್ರಣದ ಅನಾವರಣ ನಡೆಯಿತು. ಬಹು ಕೋಟಿ ಡಾಲರ್ ವ್ಯವಹಾರ ಒಪ್ಪಂದದಡಿಯಲ್ಲಿ ಏರ್ ಇಂಡಿಯಾ 470 ಏರ್ ಕ್ರಾಫ್ಟ್ ಗಳನ್ನು ಸದ್ಯದಲ್ಲೇ ಖರೀದಿಸಲಿದೆ.
ಈ ನೂತನ ಲೋಗೋ ‘ವಿಸ್ತಾ’ ದೃಢ ನವ ಭಾರತದ ಸಾರವನ್ನು ಹೊಂದಿದ್ದು ವಿಹಾನ್ ಎಐ ಪರಿವರ್ತನೆಯಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸಲಿದೆ.
ನೂತನ ಲೋಗೋ ‘ವಿಸ್ತಾ’ ಚಿನ್ನದ ವಿಂಡೋ ಪ್ರೇಂ ತುದಿಯಿಂದ ಸ್ಪೂರ್ತಿಗೊಂಡಿದ್ದು, ಇದು ಅಮಿತ ಅವಕಾಶಗಳು, ಸುಧಾರಣೆಗಳು ಮತ್ತು ಏರ್ ಲೈನ್ಸ್ ನ ಹೊಸ ಸ್ವರೂಪವನ್ನು ಪ್ರತಿನಿಧಿಸುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw