ಮಣಿಪುರದಲ್ಲಿ ದ್ವೇಷ ಹರಡಲು ಕಾಂಗ್ರೆಸ್ ಕಾರಣ: ಸಚಿವ ಅನುರಾಗ್ ಠಾಕೂರ್ ಹೇಳಿಕೆ
ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷವೇ ಅಲ್ಲಿ ದ್ವೇಷವನ್ನು ಬಿತ್ತಿದ್ದು ಎಂದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ. ಸಂಸತ್ ಭವನದ ಆವರಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಆಳ್ವಿಕೆಯಲ್ಲಿ ಈಶಾನ್ಯವು ಬಾಂಬ್, ಬಂದ್ ಮತ್ತು ಸ್ಫೋಟಗಳಿಗೆ ಹೆಸರುವಾಸಿಯಾಗಿತ್ತು. ಕಾಂಗ್ರೆಸ್ನವರ ನೀತಿ ‘ಲುಕ್ ಈಸ್ಟ್’ ಆಗಿತ್ತು. ಆದರೆ ಪ್ರಧಾನಿ ಮೋದಿ ಅವರು ‘ಆ್ಯಕ್ಟ್ ಈಸ್ಟ್’ ನೀತಿಯನ್ನು ಪ್ರಾರಂಭಿಸಿದರು ಎಂದರು.
‘ತುಕ್ಡೆ-ತುಕ್ಡೆ’ ಗ್ಯಾಂಗ್‌ನ ಬೆಂಬಲಿಗರು ಮಾತ್ರ ‘ಭಾರತ ಮಾತೆಯನ್ನು’ ವಿಭಜಿಸುವ, ಕೊಲ್ಲುವ ಬಗ್ಗೆ ಯೋಚಿಸಬಹುದು. ಆದರೆ ಅವರಿಗೆ ಮಣಿಪುರದ ಮಹಿಳೆಯರ ಬಗ್ಗೆ ಕಾಳಜಿ ಇಲ್ಲ. ಸಂವಿಧಾನದ ಹತ್ಯೆ, ಭಾರತ ಮಾತೆಯ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ರಾಜಸ್ಥಾನದ ಮಹಿಳೆಯರ ಬಗ್ಗೆ ಚಿಂತೆ ಇಲ್ಲ. ಕಾಂಗ್ರೆಸ್ನವರು ಪಶ್ಚಿಮ ಬಂಗಾಳ, ಬಿಹಾರ, ಮಣಿಪುರದ ಮಹಿಳೆಯರಲ್ಲಿ ತಾರತಮ್ಯ ಮಾಡಿ ಎಂದು ಠಾಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಭಾಷಣದ ಬಗ್ಗೆ ಕಾಂಗ್ರೆಸ್ ಸಂಸದರು ಮಾಡಿದ ಟೀಕೆಗೆ ಅನುರಾಗ್ ಠಾಕೂರ್ ಈ ರೀತಿಯಾಗಿ ತಿರುಗೇಟು ನೀಡಿದ್ದಾರೆ.
ಮಣಿಪುರದಲ್ಲಿ ಭಾರತ ಮಾತೆಯನ್ನು ಹತ್ಯೆ ಮಾಡಲಾಗಿದೆ ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಠಾಕೂರ್, ತುಕ್ಡೆ-ತುಕ್ಡೆ ಗ್ಯಾಂಗ್‌ನ ಬೆಂಬಲಿಗರು ಮಾತ್ರ ನಮ್ಮ ಭಾರತಮಾತೆಯನ್ನು ಕೊಲ್ಲುವ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದಾರೆ. ಅವರು (ರಾಹುಲ್ ಗಾಂಧಿ) ಮಣಿಪುರದ ಬಗ್ಗೆ ಕಾಳಜಿ ಹೊಂದಿಲ್ಲ, ಆದರೆ ಮಾಧ್ಯಮಗಳಲ್ಲಿ ತಮ್ಮ ವರ್ಚಸ್ಸಿನ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw