ಎಂಸಿಡಿ ಶಾಲೆಯಲ್ಲಿ ಅನಿಲ ಸೋರಿಕೆ: ದಿಲ್ಲಿ ಪೊಲೀಸರಿಂದ ಎಫ್ ಐಆರ್ ದಾಖಲು - Mahanayaka
11:15 AM Saturday 21 - September 2024

ಎಂಸಿಡಿ ಶಾಲೆಯಲ್ಲಿ ಅನಿಲ ಸೋರಿಕೆ: ದಿಲ್ಲಿ ಪೊಲೀಸರಿಂದ ಎಫ್ ಐಆರ್ ದಾಖಲು

12/08/2023

ಇಂದೇರ್ ಪುರಿಯ ನಿಗಮ್ ಪ್ರತಿಭಾ ವಿದ್ಯಾಲಯದಲ್ಲಿ ಅನಿಲ ಸೋರಿಕೆ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಮುನ್ಸಿಪಲ್ ಶಾಲೆಯಲ್ಲಿ ಶುಕ್ರವಾರ ವರದಿಯಾದ ಘಟನೆಯ ಬಗ್ಗೆ ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ವಿಚಿತ್ರಾ ವೀರ್ ಐಎಎನ್ಎಸ್ ಗೆ ತಿಳಿಸಿದ್ದಾರೆ.

28 ವಿದ್ಯಾರ್ಥಿಗಳಲ್ಲಿ 19 ಮಂದಿಯನ್ನು ಆರ್ ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, 9 ಮಂದಿಯನ್ನು ಆಚಾರ್ಯ ಭಿಕ್ಷುಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಬ್ಬರು ವಿದ್ಯಾರ್ಥಿಗಳು ಐಸಿಯುನಲ್ಲಿದ್ದರು. ನಂತರ ಅವರ ಪರಿಸ್ಥಿತಿ ಸಹ ಸುಧಾರಿಸಿದವು ಎಂದು ಡಿಸಿಪಿ ಹೇಳಿದ್ದಾರೆ.


Provided by

ರೈಲ್ವೆ ಹಳಿಗಳ ಬಳಿ ಅನಿಲ ಸೋರಿಕೆ ಸಂಭವಿಸಿದೆ ಎಂದು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಧಿಕೃತವಾಗಿ ಹೇಳಿದೆ. ಆದರೆ ಇದಕ್ಕೆ ರೈಲ್ವೆ ಇಲಾಖೆಯು ತಮ್ಮ ನಿಲ್ದಾಣಗಳಲ್ಲಿ ಅನಿಲ ಸೋರಿಕೆಯ ವರದಿಗಳನ್ನು ನಿರಾಕರಿಸಿದೆ. ತಮ್ಮ ವ್ಯಾಗನ್ ಗಳು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ವಿಷಕಾರಿ ಅನಿಲಗಳನ್ನು ಎಂದಿಗೂ ಸಾಗಿಸುವುದಿಲ್ಲ ಎಂದು ಒತ್ತಿಹೇಳಿತು.

ವಾಂತಿ ಮಾಡುತ್ತಿದ್ದ ಕೆಲವರು ಸೇರಿದಂತೆ ಕೆಲವು ಮಕ್ಕಳು ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ಪೊಲೀಸರಿಗೆ ಶಾಲೆಯಿಂದ ಪಿಸಿಆರ್ ಕರೆ ಬಂದಿದೆ. ಪೊಲೀಸ್ ತಂಡವು ತಕ್ಷಣ ಸ್ಥಳಕ್ಕೆ ತಲುಪಿ ಪೀಡಿತ ವಿದ್ಯಾರ್ಥಿಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ