ಸಿಸಿಬಿ ಪೊಲೀಸರಿಂದ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯಿದೆ ಜಾರಿ, ಬಂಧನ - Mahanayaka
11:25 AM Saturday 21 - September 2024

ಸಿಸಿಬಿ ಪೊಲೀಸರಿಂದ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯಿದೆ ಜಾರಿ, ಬಂಧನ

puneeth kerehalli
12/08/2023

ಬೆಂಗಳೂರು ನಗರ, ಬೆಂಗಳೂರು ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಆಸಾಮಿಯಾದ ಪುನೀತ್ ಕುಮಾರ್ @ ಪುನೀತ್ ಕೆರೆಹಳ್ಳಿ ಈತನು ರಾಷ್ಟ್ರ ರಕ್ಷಣಾ ಪಡೆ’ ಎಂಬ ಅನಧಿಕೃತ ಸಂಘಟನೆಯ ಹೆಸರಿನಲ್ಲಿ ತನ್ನ ಸಹಚರರುಗಳೊಂದಿಗೆ ಸೇರಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವುದು, ಕೋಮು ಗಲಭೆಗೆ ಪ್ರಚೋದಿಸುವಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರಿಂದ, ಈತನನ್ನು ಕರ್ನಾಟಕ ಗೂಂಡಾ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು (ಈತನ ವಿರುದ್ಧ ಕಳೆದ 10 ವರ್ಷಗಳ ಅವಧಿಯಲ್ಲಿ ಅಪರಾಧ ಪ್ರಕರಣ ದಾಖಲೆಗಳನ್ನು ಸಂಗ್ರಹಿಸಿ) ಈತನನ್ನು ಪ್ರತಿಬಂಧಕ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಪ್ರಸ್ತಾವನೆ ಸಲ್ಲಿಸಿದ್ದರು.

ಈತನ ವಿರುದ್ಧ ಈವರೆಗೆ ಹಲ್ಲೆ, ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿಗಳ ಮೇಲೆ ಹಲ್ಲೆ, ಜಾತಿ ನಿಂದನೆ, ಕೊಲೆ, ಜೀವ ಬೆದರಿಕೆ ಸೇರಿದಂತೆ 10 ಪ್ರಕರಣಗಳು ದಾಖಲಾಗಿರುತ್ತವೆ.

ಸಿಸಿಬಿ ಅಧಿಕಾರಿಗಳ ಪ್ರಸ್ತಾವನೆಯನ್ನು ಪರಿಶೀಲಿಸಿದ ಪೊಲೀಸ್ ಆಯುಕ್ತರು, ದಿನಾಂಕ:- 11,08,2023 ರಂದು ಈತನನ್ನು ಕರ್ನಾಟಕ ಗೂಂಡಾ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಆದೇಶ ಹೊರಡಿಸಿದ್ದರು. ಅದರಂತೆ ಸಿಸಿಬಿ ಅಧಿಕಾರಿಗಳು ಪುನೀತ್ ಕುಮಾರ್ @ ಪುನೀತ್ ಕೆರೆಹಳ್ಳಿ ಬನ್ ಮಟ್ಟಸಿದ್ದಯ್ಯ 32 ವರ್ಷ, ಜೆ.ಪಿ.ನಗರ 7ನೇ ಹಂತ ಬೆಂಗಳೂರು ಈತನನ್ನು ದಿನಾಂಕ:-12,08,2023 ರಂದು ವಶಕ್ಕೆ ಪಡೆದು ಪ್ರತಿಬಂಧಕ ಕಾಯಿದೆ ಜಡಿ ಕೇಂದ್ರ ಕಾರಾಗೃಹದಲ್ಲಿ ಬಂದನಕ್ಕೆ ಒಪ್ಪಿಸಿರುತ್ತಾರೆ.


Provided by

ಇತ್ತೀಚಿನ ಸುದ್ದಿ