ಮಧ್ಯಪ್ರದೇಶದಲ್ಲಿ 'ಕಮಿಷನ್' ಸದ್ದು: ಆರೋಪ ಮಾಡಿದ ಪ್ರಿಯಾಂಕಾ ಗಾಂಧಿ ಮೇಲೆ ಬಿಜೆಪಿ ಕೆಂಗಣ್ಣು - Mahanayaka
1:12 AM Friday 20 - September 2024

ಮಧ್ಯಪ್ರದೇಶದಲ್ಲಿ ‘ಕಮಿಷನ್’ ಸದ್ದು: ಆರೋಪ ಮಾಡಿದ ಪ್ರಿಯಾಂಕಾ ಗಾಂಧಿ ಮೇಲೆ ಬಿಜೆಪಿ ಕೆಂಗಣ್ಣು

12/08/2023

ಬಿಜೆಪಿ ಸರ್ಕಾರವು ಮಧ್ಯಪ್ರದೇಶದಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಈ ಆರೋಪವನ್ನು ಅಲ್ಲಗಳೆದಿರುವ ಸಂಸದ, ಗೃಹ ಸಚಿವ ನರೋತ್ತಮ್ ಮಿಶ್ರಾ, ತಾವು ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ನಾಯಕಿಯಿಂದ ಪುರಾವೆ ಕೇಳಿದ್ದೇವೆ. ಇಲ್ಲವಾದರೆ ಕ್ರಮಕ್ಕಾಗಿ ರಾಜ್ಯ ಸರ್ಕಾರ ಮತ್ತು ಬಿಜೆಪಿಯ ಮುಂದೆ ಆಯ್ಕೆಗಳಿವೆ ಎಂದಷ್ಟೇ ಹೇಳಿದ್ದೇವೆ. ಇಲ್ಲಿ ಯಾವುದೇ ವಿಚಾರವಿಲ್ಲದೇ ಇದ್ದರೂ ಕಾಂಗ್ರೆಸ್ ಅನಗತ್ಯ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮಧ್ಯಪ್ರದೇಶದ ಗುತ್ತಿಗೆದಾರರ ಒಕ್ಕೂಟವು ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆದಿದ್ದು, ಇದರಲ್ಲಿ ಅವರು ಶೇಕಡಾ 50 ಕಮಿಷನ್ ಪಾವತಿಸಿದ ಬಳಿಕವೇ ಅವರು ನಮಗೆ ಪಾವತಿಯಾಗುತ್ತದೆ ಎಂದು ಹೇಳಿರುವುದಾಗಿ ಪ್ರಿಯಾಂಕಾ ಗಾಂಧಿ ಅವರು ಎಕ್ಸ್ ನಲ್ಲಿ ಟ್ವಿಟ್ ಮಾಡಿದ್ದರು.


Provided by

ಕರ್ನಾಟಕದಲ್ಲಿ ಬಿಜೆಪಿ ಶೇಕಡಾ 40 ಕಮಿಷನ್ ಪಡೆಯುತ್ತಿತ್ತು. ಇಲ್ಲಿ ತನ್ನ ಭ್ರಷ್ಟಾಚಾರದ ದಾಖಲೆಯನ್ನು ಮುರಿದಿದೆ. ಕರ್ನಾಟಕದಲ್ಲಿ ಜನರು ಬಿಜೆಪಿಯನ್ನು ಕಿತ್ತೊಗೆದಿದ್ದಾರೆ.‌ ಮುಂದೆ ಇಲ್ಲೂ ಕೂಡಾ ಹಾಗೆಯೇ ಆಗುತ್ತದೆ ಎಂದು ಅವರು ಟ್ವಿಟ್ ನಲ್ಲಿ ಹೇಳಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ