ಮರಕ್ಕೆ ಅಪ್ಪಳಿಸಿದ ಕಾರು | ಇಬ್ಬರು ಯುವಕರ ದಾರುಣ ಸಾವು - Mahanayaka

ಮರಕ್ಕೆ ಅಪ್ಪಳಿಸಿದ ಕಾರು | ಇಬ್ಬರು ಯುವಕರ ದಾರುಣ ಸಾವು

31/01/2021

ಮಂಡ್ಯ:  ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದು ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದ ಘಟನೆ  ನಾಗಮಂಗಲ ತಾಲೂಕಿನ ಬೆಂಗಳೂರು-ಮoಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹೊಸಕ್ಕಿಪಾಳ್ಯ ಗೇಟ್ ಬಳಿ ನಡೆದಿದ್ದು, ಪರಿಣಾಮವಾಗಿ ಇಬ್ಬರು ಸಾವನಪ್ಪಿದ್ದಾರೆ.


Provided by

ಬೆoಗಳೂರಿನ ಬಸವನಗುಡಿ ನಿವಾಸಿ ಎ.ಶಂಕರ್‌ಪ್ರಸಾದ್(20) ಮತ್ತು ಆಂಧ್ರಪ್ರದೇಶ ಮೂಲದ ಬೆಂಗಳೂರಿನ ಬಿಕಾಸಿಪುರ ನಿವಾಸಿ ಸಿ.ಷಣ್ಮುಖ ಶ್ರೀನಿವಾಸ್(22)  ಮೃತಪಟ್ಟವರು ಎಂದು ತಿಳಿದು ಬಂದಿದೆ.

ಬೆಂಗಳೂರಿನ ಅಕ್ಷರ್ ಗೌಡ , ಬಾಬ್ ಚಂಗಪ್ಪ ಮತ್ತು ಅಭಿಲಾಷ್ ಇದೇ ಅಪಘಾತದಲ್ಲಿ ಗಾಯಗೊಂಡಿದ್ದಾರೆ.  ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳೂರು ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ