ಮಣಿಪುರ ಹಿಂಸಾಚಾರ ಆತಂಕಕಾರಿ: ಅದನ್ನು ತಕ್ಷಣವೇ ನಿಲ್ಲಿಸಬೇಕು ಎಂದ ರಾಹುಲ್ ಗಾಂಧಿ
13/08/2023
ಮಣಿಪುರದಲ್ಲಿನ ಹಿಂಸಾಚಾರವು ವಿಭಜನೆ, ದ್ವೇಷ ಮತ್ತು ಕೋಪದ ನಿರ್ದಿಷ್ಟ ರೀತಿಯ ರಾಜಕೀಯದ ನೇರ ಪರಿಣಾಮವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಕೇರಳದ ಕೊಡೆಂಚೇರಿಯಲ್ಲಿರುವ ಸೇಂಟ್ ಜೋಸೆಫ್ ಹೈಸ್ಕೂಲ್ ಸಭಾಂಗಣದಲ್ಲಿ ಸಮುದಾಯ ವಿಕಲಚೇತನ ನಿರ್ವಹಣಾ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಆತಂಕಕಾರಿಯಾಗಿದ್ದು, ಅದನ್ನು ತಕ್ಷಣವೇ ನಿಲ್ಲಿಸಬೇಕು ಎಂದಿದ್ದಾರೆ.
ಹಿಂಸಾಚಾರದ ಪರಿಣಾಮವಾಗಿ ಉಂಟಾದ ಗಾಯಗಳು ವಾಸಿಯಾಗಲು ಹಲವು ವರ್ಷಗಳು ಬೇಕಾಗುತ್ತದೆ. ದುಃಖ ಮತ್ತು ಕೋಪವು ಅಷ್ಟು ಸುಲಭವಾಗಿ ಹೋಗುವುದಿಲ್ಲ ಎಂದು ಅವರು ಹೇಳಿದರು. ಮಣಿಪುರ ಹಿಂಸಾಚಾರವು ಒಂದು ರಾಜ್ಯದಲ್ಲಿ ವಿಭಜನೆ, ದ್ವೇಷ ಮತ್ತು ಕೋಪದ ರಾಜಕೀಯವನ್ನು ಬಳಸಿದಾಗ ಏನಾಗುತ್ತದೆ ಎಂಬುದಕ್ಕೆ ಪಾಠವಾಗಿದೆ ಎಂದರು.