ಬೆಂಕಿಬಿದ್ದ ಪ್ರಕರಣದ ಆಂತರಿಕ ತನಿಖೆ ಚುರುಕು - Mahanayaka
3:08 PM Thursday 12 - December 2024

ಬೆಂಕಿಬಿದ್ದ ಪ್ರಕರಣದ ಆಂತರಿಕ ತನಿಖೆ ಚುರುಕು

fire
14/08/2023

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಇರುವ ಗುಣನಿಯಂತ್ರಣ ಪ್ರಯೋಗಾಲಯಕ್ಕೆ ಬೆಂಕಿಬಿದ್ದ ಪ್ರಕರಣದ ಆಂತರಿಕ ತನಿಖೆ ಚುರುಕಾಗಿದೆ. ಘಟನಾ ಸ್ಥಳಕ್ಕೆ ಬಿಬಿಎಂಪಿ ಚೀಫ್ ಎಂಜಿನಿಯರ್ ಪ್ರಹ್ಲಾದ್ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದಾರೆ.

ಈ ಮಧ್ಯೆ ಹಲಸೂರು ಗೇಟ್ ಪೊಲೀಸರಿಂದ ಬಿಬಿಎಂಪಿ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದು ಮಾಹಿತಿ ಕೋರಿದ್ದಾರೆ. ನೊಟೀಸ್ ವಿಚಾರವಾಗಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಪ್ರತಿಕ್ರಿಯಿಸಿದ್ದು ನೊಟೀಸ್ ನೀಡಿರುವುದು ಅಸಮಂಜಸ ಎನಿಸುತ್ತಿದೆ. ದೂರುದಾರ ನಾನೇ ಆಗಿರುವುದರಿಂದ ನೊಟೀಸು ಏಕೆ ಕೊಟ್ಟರೂ ಗೊತ್ತಿಲ್ಲ. ಹಿರಿಯ ಅಧಿಕಾರಿ ಕಮಿಷನರ್ ಜೊತೆ ಮಾತನಾಡಿ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ.

ಬೆಂಕಿ ಅವಘಡದ ತನಿಖೆ ಚುರುಕಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಈ ಮಧ್ಯೆ ಮೂರು ಆಯಾಮಗಳ ತನಿಖೆ ಮತ್ತು ಎಫ್‍ಎಸ್‍ಎಲ್ ವರದಿ ಏನಿರಲಿದೆ ಎಂಬುದೇ ದೊಡ್ಡ ಕುತೂಹಲ ಕೆರಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hv1TpXr73MfF0Cet1rPZjq

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ