ನಾಯಿಗಳಿಗೆ ವಿಷವುಣಿಸಿ ಹತ್ಯೆ: 7 ಶ್ವಾನಗಳ ಕಳೇಬರ ಪತ್ತೆ
14/08/2023
ಬೆಂಗಳೂರು,ಆ.14: 18 ಶ್ವಾನಗಳಿಗೆ ವಿಷ ಉಣಿಸಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಆರ್‌ಆರ್ ನಗರದ ಹೊಸಕೆರೆಹಳ್ಳಿ ವಾರ್ಡ್ ಬೌಂಡ್ರಿಯಲ್ಲಿ ನಡೆದಿದೆ.
ನಗರದಲ್ಲಿ ಅನಿಮಲ್ ಆಕ್ಟಿವಿಸ್ಟ್ ತಂಡ (Animal Activist Team) ಮೃತ ಶ್ವಾನಗಳ ದೇಹ ಪತ್ತೆಗೆ ಶೋಧ ಆರಂಭಿಸಿದೆ. ಇದುವರೆಗೆ 7 ಶ್ವಾನಗಳ ಕಳೇಬರ ಪತ್ತೆಯಾಗಿದ್ದು, ಅದರಲ್ಲಿ 5 ಕಳೇಬರ ಸಂಪೂರ್ಣ ಕೊಳೆತುಹೋಗಿದೆ. ನಾಯಿಗಳ ದೇಹವನ್ನ ಹಗ್ಗ ಮತ್ತು ಚೀಲದಲ್ಲಿ ಹಾಕಿ ತುಂಬಲಾಗಿದೆ. ಈ ಬಗ್ಗೆ ಆರ್‌ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.