ಆಗಸ್ಟ್ 16 ರಂದು ಹರ್ಯಾಣದಲ್ಲಿ ಸರ್ಕಾರಿ, ಖಾಸಗಿ ಶಾಲೆಗಳು ಬಂದ್: ಅಚ್ಚರಿ ಮೂಡಿಸಿದ ಸಿಎಂ ಖಟ್ಟರ್ ಘೋಷಣೆ - Mahanayaka

ಆಗಸ್ಟ್ 16 ರಂದು ಹರ್ಯಾಣದಲ್ಲಿ ಸರ್ಕಾರಿ, ಖಾಸಗಿ ಶಾಲೆಗಳು ಬಂದ್: ಅಚ್ಚರಿ ಮೂಡಿಸಿದ ಸಿಎಂ ಖಟ್ಟರ್ ಘೋಷಣೆ

16/08/2023

ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಬುಧವಾರ (ಆಗಸ್ಟ್ 16) ಮುಚ್ಚಲಾಗುವುದು ಎಂದು ಘೋಷಿಸಿದ್ದಾರೆ.  ಫತೇಹಾಬಾದ್ ನಲ್ಲಿ ನಡೆದ ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಖಟ್ಟರ್, “ಹರಿಯಾಣದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ನಾಳೆ ಮುಚ್ಚಲ್ಪಡುತ್ತವೆ” ಎಂದು ಹೇಳಿದರು.

ಹರ್ಯಾಣದ ಜನರು ಸಾಮಾಜಿಕ, ಧಾರ್ಮಿಕ ಮತ್ತು ಕೋಮು ವ್ಯತ್ಯಾಸಗಳನ್ನು ಮರೆತು ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಖಟ್ಟರ್ ತಮ್ಮ ಭಾಷಣದಲ್ಲಿ ಹೇಳಿದರು.

ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಕಾರಣ, ಹರ್ಯಾಣದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ನಾಳೆ (ಆಗಸ್ಟ್ 16) ಮುಚ್ಚಲ್ಪಡುತ್ತವೆ.
ಕಳೆದ ತಿಂಗಳು, ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಮೆರವಣಿಗೆಯ ಮೇಲೆ ಗುಂಪೊಂದು ದಾಳಿ ನಡೆಸಿದ ನಂತರ ಹರ್ಯಾಣದ ನೂಹ್ ಜಿಲ್ಲೆಯಲ್ಲಿ ಘರ್ಷಣೆಗಳು ಭುಗಿಲೆದ್ದಿದ್ದವು. ಅದು ಗುರುಗ್ರಾಮ್ ಸೇರಿದಂತೆ ಪಕ್ಕದ ಪ್ರದೇಶಗಳಿಗೆ ಹರಡಿತ್ತು. ಹಿಂಸಾಚಾರದಲ್ಲಿ ಇಬ್ಬರು ಗೃಹರಕ್ಷಕರು ಮತ್ತು ಪಾದ್ರಿ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ.

ಇತ್ತೀಚಿನ ಸುದ್ದಿ