ಮಹಾಚೇತನ ಯುವ ವೇದಿಕೆ ಬೆಣಗಾಲು ವತಿಯಿಂದ ‘ನಮ್ಮ ಶಾಲೆ ನಮ್ಮ ಹೆಮ್ಮೆ’ ವಿಶೇಷ ಕಾರ್ಯಕ್ರಮ: ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಶಿಕ್ಷಕರಿಗೆ ಸನ್ಮಾನ - Mahanayaka
10:15 AM Sunday 22 - September 2024

ಮಹಾಚೇತನ ಯುವ ವೇದಿಕೆ ಬೆಣಗಾಲು ವತಿಯಿಂದ ‘ನಮ್ಮ ಶಾಲೆ ನಮ್ಮ ಹೆಮ್ಮೆ’ ವಿಶೇಷ ಕಾರ್ಯಕ್ರಮ: ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಶಿಕ್ಷಕರಿಗೆ ಸನ್ಮಾನ

namma shale
18/08/2023

ಬೆಣಗಾಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2022- 23ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100 ರಷ್ಟು ಫಲಿತಾಂಶ ಬಂದಿದ್ದು, ಜಿಲ್ಲಾಧಿಕಾರಿಯವರಿಂದ ಉತ್ತಮ ಶಾಲಾ ಪ್ರಶಸ್ತಿಯನ್ನು ಪಡೆದ ಹಿನ್ನಲೆಯಲ್ಲಿ ಮಹಾಚೇತನ ಯುವ ವೇದಿಕೆ ಬೆಣಗಾಲು, ಪಿರಿಯಾಪಟ್ಟಣ ತಾಲೂಕು,  ವತಿಯಿಂದ ನಮ್ಮ ಶಾಲೆ ನಮ್ಮ ಹೆಮ್ಮೆ ಎಂಬ ಶೀರ್ಷಿಕೆಯಡಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವೃಂದದವರಿಗೆ ಸನ್ಮಾನ ಕಾರ್ಯಕ್ರಮವನ್ನು ಮತ್ತು ನಿವೃತ್ತಿ  ಹೊಂದಿದ ಉಷಾ, ಫರೀದಾ ಹಾಗೂ ಅತ್ಯುತ್ತಮ ದೈಹಿಕ ಶಿಕ್ಷಕರಾದ ಸುಂದರ್ ಮತ್ತು ಸ್ವಾಮಿ  ಅವರನ್ನು ಸರ್ಕಾರಿ ಪ್ರೈಮರಿ ಶಾಲಾ ಮೈದಾನದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅತಿ ಹೆಚ್ಚು 602  ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿದ ಕುಮಾರಿ ಸಾನ್ಯ ಅವರಿಗೆ ರೂ.2,000 ನಗದು, ದ್ವಿತೀಯ ಸ್ಥಾನ 597 ಅಂಕ ಗಳಿಸಿದ ಕುಮಾರಿ ಐಶ್ವರ್ಯ ಅವರಿಗೆ 1,000 ನಗದು ಮತ್ತು ತೃತೀಯ ಸ್ಥಾನ  586 ಅಂಕ ಗಳಿಸಿದ ಕುಮಾರಿ ಸಹನ ಎನ್.ಎನ್. ಅವರಿಗೆ 750 ನಗದು ಮತ್ತು ಇನ್ನಿತರ 6 ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ವಿಷಯವಾರು ಹೆಚ್ಚು ಅಂಕ ಗಳಿಸಿದ ಒಟ್ಟು 11 ವಿದ್ಯಾರ್ಥಿಗಳಿಗೆ ತಲಾ 500 ರೂಗಳನ್ನು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಡಿಕ್ಷನರಿ, ಸಂವಿಧಾನ ಓದು ಪುಸ್ತಕ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು ಹಾಗೂ ಎಲ್ಲಾ ಸರ್ಕಾರಿ ಪ್ರೌಢಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರಾದ ಕುಶಲ್ ಮಾಸ್ಟರ್ ಅವರು ವಹಿಸಿದ್ದರು, ಕಾರ್ಯಕ್ರಮದಲ್ಲಿ ಹೈ ಸ್ಕೂಲ್ ಹೆಡ್ ಮಾಸ್ಟರ್ ಆದ ನೂರುಲ್ಲಾ ಹೆಚ್ ಬಿ ಹಾಗೂ ಎಲ್ಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು, ಗುರುಪಾದಸ್ವಾಮಿ, ರಾಜು ಮಾಸ್ಟರ್, ಮಹೇಶ್ ಮಾಸ್ಟರ್, ಮೋಹನ್ ಈದಿನ.ಕಂ ಸಂಪಾದಕರು, ಕೃಷ್ಣಗೌಡ, ದೊರೆಸ್ವಾಮಿ, ತಿಮ್ಮಪ್ಪ, ರಾಜು ನಿಲವಾಡಿ, ಪ್ರೈಮರಿ ಶಾಲಾ ಹೆಡ್ ಮಾಸ್ಟರ್ ಪ್ರಭಾಕರ್ ಹಾಗೂ ಸಹ ಶಿಕ್ಷಕರು,  ಹಾಗೂ ಮಹಾಚೇತನ ವೇದಿಕೆಯ ಬಸವರಾಜು ಸಿಪಿ, ನಾಗೇಶ್ ಆರ್,  ಶ್ರೀಕಾಂತ್ ಬಿ ಎಸ್, ಯಶ್ವಂತ್, ಶಶಿ ಸಿಎಂ, ರೇವಣ್ಣ ಸಿಪಿ, ಪ್ರತೀಪ್, ಸಿರಾಜ್, ಕಿರಣ್ ಕುಮಾರ್ ಬಿಜಿ, ಶಿವಕುಮಾರ್, ಕಿರಣ್, ಗಗನ್, ವಿಕಾಸ್, ಶರತ್, ರೋಹಿತ್, ಪವನ್, ನೀತು, ಚಿದು, ಶಿವೇಶ್, ಸುಜಾತ ಹಾಗೂ ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Provided by

ಇತ್ತೀಚಿನ ಸುದ್ದಿ