ಬೆಲೆ ಹೆಚ್ಚಳ ತಡೆಯಲು ಹೊಸ ತಂತ್ರ: ಸರ್ಕಾರದಿಂದ ಈರುಳ್ಳಿ ಮೇಲೆ 40% ರಫ್ತು ಸುಂಕ..? - Mahanayaka

ಬೆಲೆ ಹೆಚ್ಚಳ ತಡೆಯಲು ಹೊಸ ತಂತ್ರ: ಸರ್ಕಾರದಿಂದ ಈರುಳ್ಳಿ ಮೇಲೆ 40% ರಫ್ತು ಸುಂಕ..?

20/08/2023

ಬೆಲೆ ಹೆಚ್ಚಳವನ್ನು ತಡೆಯಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಸುಧಾರಿಸಲು ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರ ಈರುಳ್ಳಿ ಮೇಲೆ 40% ರಫ್ತು ಸುಂಕವನ್ನು ವಿಧಿಸಿದೆ. ಡಿಸೆಂಬರ್ 31, 2023 ರವರೆಗೆ ರಫ್ತು ಸುಂಕವು ಮಾನ್ಯವಾಗಿರುತ್ತದೆ.

ದೇಶದಲ್ಲಿ ಸಾಕಷ್ಟು ಈರುಳ್ಳಿಯ ದಾಸ್ತಾನು ಇದೆ. ಆದರೆ ಈ ವರ್ಷದ ದೀರ್ಘಾವಧಿ ಬೇಸಿಗೆಯಿಂದಾಗಿ ಕಳಪೆ ಈರುಳ್ಳಿಯ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ಉತ್ತಮ ಗುಣಮಟ್ಟದ ಈರುಳ್ಳಿ ದುಬಾರಿಯಾಗಿದೆ.

ಈ ತಿಂಗಳಿನಲ್ಲಿ ಧಾನ್ಯಗಳು ಮತ್ತು ಬೇಳೆಕಾಳುಗಳ ಬೆಲೆಗಳು ಹೆಚ್ಚಾಗುತ್ತಲೇ ಇವೆ ಎಂದು ಆಗಸ್ಟ್‌ನ ಆಹಾರ ದರದ ದತ್ತಾಂಶವು ಹೇಳಿದೆ. ಟೊಮೇಟೊ ಬೆಲೆಗಳು, ಸರಾಸರಿಯಾಗಿ, ಮತ್ತಷ್ಟು ಹೆಚ್ಚಳವನ್ನು ಕಂಡಿದೆ.

ಈರುಳ್ಳಿ ಮತ್ತು ಆಲೂಗೆಡ್ಡೆ ಬೆಲೆಗಳು ಸಹ ಅನುಕ್ರಮ ಏರಿಕೆ ದಾಖಲಿಸಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಆಗಸ್ಟ್ ಬುಲೆಟಿನ್ ನಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬೇಡಿಕೆಯನ್ನು ಕಡಿಮೆಗೊಳಿಸಲು ಮತ್ತು ಪೂರೈಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿನ ಮೇಲೆ ಹೆಚ್ಚಿನ ಸುಂಕ ವಿಧಿಸಿದೆ.

ಇತ್ತೀಚಿನ ಸುದ್ದಿ